ಅಂಕೋಲಾ: ಮಹಿಳೆಯೋರ್ವಳು ತನ್ನ ಮಗನೊಂದಿಗೆ ಕಾಣೆಯಾದ ಘಟನೆ ಪಟ್ಟಣದ ಲಕ್ಷ್ಮೇಶ್ವರದಲ್ಲಿ ನಡೆದಿದೆ.
ತಾಲೂಕಿನ ಬೊಬ್ರವಾಡ ನಿವಾಸಿ ಹಾಲಿ ಲಕ್ಷ್ಮೇಶ್ವರದಲ್ಲಿ ವಾಸವಾಗಿದ್ದ ಸೈಯದ್ ಗಜಾಲಾ ಸೈಯದ್ ಮಹಮ್ಮದ್ ಇಕ್ಬಾಲ ಫಿರಜಾದೆ(43) ಎಂಬಾಕೆ ತನ್ನ ಮಗ ಸೈಯದ್ ಅರೀಜ್ (4) ನನ್ನು ಕರೆದುಕೊಂಡು ನವೆಂಬರ್ 22 ರಂದು ಬೆಳಿಗ್ಗೆ 10 ಗಂಟೆಗೆ ಲಕ್ಷ್ಮೇಶ್ವರದ ಬಾಡಿಗೆ ಮನೆಯಿಂದ ಹೊರಟವಳು ಇದುವರೆಗೆ ಮನೆಗೆ ಮರಳಿ ಬಾರದೇ ಕಾಣೆಯಾಗಿರುವುದಾಗಿ ತಿಳಿದು ಬಂದಿದೆ.
ಈ ಕುರಿತು ಮಹಿಳೆಯ ಗಂಡ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.