ಕುಮಟಾ: ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ಸ್ಪರ್ಧೆಗಳು ಸರಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಬಾಡ, ಕುಮಟಾದಲ್ಲಿ ನವೆಂಬರ್ 25ರಂದು ನಡೆದಿದ್ದು ಇದರಲ್ಲಿ ಕೆನರಾ ಎಕ್ಸಲೆನ್ಸ್ ಪದವಿ ಪೂರ್ವ ಕಾಲೇಜು ಗೋರೆಯ ಒಟ್ಟು 22 ವಿದ್ಯಾರ್ಥಿಗಳು ಭಾಗವಹಿಸಿದ್ದು ವಿವಿಧ ಸ್ಪರ್ಧೆಗಳಲ್ಲಿ ಅತ್ಯುತ್ತಮ ಸಾಧನೆ ತೋರಿರುತ್ತಾರೆ.
ಪ್ರಥಮ ಪಿಯುಸಿ ವಿಭಾಗದ ರಸಪ್ರಶ್ನೆ ಸ್ಪರ್ಧೆಯಲ್ಲಿ ಸುಜಿತ ಭಟ್ಟ ಮತ್ತು ಪ್ರಣವ ಭಟ್ಟ ಪ್ರಥಮ ಸ್ಥಾನ, ಆಂಗ್ಲಭಾಷೆ ಪ್ರಬಂಧ ಸ್ಪರ್ಧೆಯಲ್ಲಿ ಚಂದ್ರಿಕಾ ನಾಯಕ ದ್ವಿತೀಯ, ಏಕಪಾತ್ರಾಭಿನಯ ಸ್ಪರ್ಧೆಯಲ್ಲಿ ತೇಜಾ ಅವಧಾನಿ ಪ್ರಥಮ ಸ್ಥಾನ, ಭಾವಗೀತೆ ಸ್ಪರ್ಧೆಯಲ್ಲಿ ಪ್ರಣತಿ ಹೆಗಡೆ ದ್ವಿತೀಯ, ಜಾನಪದಗೀತೆಯಲ್ಲಿ ಶ್ರಾವ್ಯ ಭಟ್ಟ ದ್ವಿತೀಯ, ಚಿತ್ರಕಲಾ ಸ್ಪರ್ಧೆಯಲ್ಲಿ ನಿತೀಶ ಪಟಗಾರ ದ್ವಿತೀಯ, ಭಕ್ತಿಗೀತೆಯಲ್ಲಿ ಪ್ರಜ್ಞಾ ಭಟ್ಟ ತೃತೀಯ ಸ್ಥಾನ ಪಡೆದರೆ ದ್ವಿತೀಯ ಪಿಯುಸಿ ವಿಭಾಗದ ರಸಪ್ರಶ್ನೆಯಲ್ಲಿ ಅಭಯ ಭಟ್ಟ ಮತ್ತು ದೀಕ್ಷಾ ಹೆಗಡೆ ಪ್ರಥಮ ಸ್ಥಾನ, ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ಪೂಜಾ ಅವಧಾನಿ ದ್ವಿತೀಯ, ಏಕಪಾತ್ರಾಭಿನಯದಲ್ಲಿ ಎಚ್. ಎಲ್. ಆತೀಶ ಪ್ರಥಮ ಸ್ಥಾನ, ಭಾವಗೀತೆಯಲ್ಲಿ ಪೃಥ್ವಿ ಹೆಗಡೆ ಪ್ರಥಮ, ಜಾನಪದಗೀತೆಯಲ್ಲಿ ಪಲ್ಲವಿ ಶೇಟ್ ದ್ವಿತೀಯ, ಚಿತ್ರಕಲೆಯಲ್ಲಿ ಸಿಂಧು ಭಟ್ಟ ದ್ವಿತೀಯ, ಭಕ್ತಿಗೀತೆಯಲ್ಲಿ ಶ್ರಾವ್ಯ ನಾಯ್ಕ ಪ್ರಥಮ, ಆಶು ಭಾಷಣದಲ್ಲಿ ಮೇಧಿನಿ ಭಟ್ಟ ಪ್ರಥಮ ಸ್ಥಾನಪಡೆದು ಸಂಸ್ಥೆಗೆ ಕೀರ್ತಿ ಹೆಚ್ಚಿಸಿದ್ದಾರೆ. ವಿದ್ಯಾರ್ಥಿಗಳ ಈ ಅಮೋಘ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಡಾ. ಜಿ ಜಿ ಹೆಗಡೆ, ಪ್ರಾಚಾರ್ಯರಾದ ಡಿ. ಎನ್ ಭಟ್ಟ, ಉಪನ್ಯಾಸಕರು ಹಾಗೂ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.