Slide
Slide
Slide
previous arrow
next arrow

ನ.30ಕ್ಕೆ ಶಿರಸಿಗೆ ‘ಸ್ವರ್ಣ ಪಾದುಕೆ’ ಆಗಮನ

300x250 AD

ಶಿರಸಿ: ‘ ಭಕ್ತರೆಡೆಗೆ ಸ್ವರ್ಣ ಪಾದುಕೆ ‘ ನ.30 ಗುರುವಾರದಂದು ಶಿರಸಿಗೆ ಆಗಮನವಾಗಲಿದೆ.

 ಶ್ರೀ ರಾಮಚಂದ್ರಾಪುರ ಮಠದ ಸ್ವಾಮೀಜಿ  ಶ್ರೀ ಶ್ರೀ ರಾಘವೇಶ್ವರಭಾರತಿ ಸ್ವಾಮಿಗಳ  ಮಹತ್ವಾಕಾಂಕ್ಷೆಯ ಹಾಗೂ ಭಕ್ತರಿದ್ದಲ್ಲಿಗೆ  ಪರಮಪವಿತ್ರವಾದ ಪಾದುಕೆ ತೆರಳಿ ಅವರ ಇಚ್ಚೆಗೆ ಅನುಗುಣವಾಗಿ ಮನೆಮನೆಗೆ ತುಂಬಿಸಿಕೊಳ್ಳುವ ಸದವಾಕಾಶ ಸಾಕಾರಗೊಳ್ಳಲಿದೆ . ಈ ಕುರಿತು ಮಠದ ಅಂಬಾಗಿರಿ ವಲಯದ  ಪದಾಧಿಕಾರಿಗಳು ಹಾಗೂ ಗುರಿಕಾರರು ,ಸದಸ್ಯರುಗಳು ಸ್ವರ್ಣ ಪಾದುಕೆಯ ಅದ್ದೂರಿ  ಸ್ವಾಗತಕ್ಕಾಗಿ ಸಿದ್ದತೆಗಳನ್ನು ನಡೆಸಿದ್ದಾರೆ.

ನವೆಂಬರ  30 ಗುರುವಾರ ಸಂಜೆ ಅಂಬಾಗಿರಿಯ ಕಾಳಿಕಾಭವಾನಿ ದೇವಳಕ್ಕೆ ಆಗಮಿಸಲಿದೆ. ಮಾತೆಯರು ಪೂರ್ಣಕುಂಭ ಸ್ವಾಗತವನ್ನು ಕೋರಲಿದ್ದಾರೆ.  ಡಿ.1 ರಂದು ಬೆಳಿಗ್ಗೆ ವಿವಿಧ ಧಾರ್ಮಿಕ ಚಟುವಟಿಕೆಗಳು ದೇವಾಲಯದ ಆವರಣದಲ್ಲಿ ನಡೆಯಲಿದೆ. ಭಕ್ತರ ಹಾಗೂ ಸೇವಾ ಆಕಾಂಕ್ಷೆಗಳುಳ್ಳವರ ಅನುಕೂಲಕ್ಕಾಗಿ   ಮಧ್ಯಾಹ್ನದ ನಂತರ ಈಗಾಗಲೇ ಪೂರ್ವನಿಗದಿತ ಕಾರ್ಯಕ್ರಮದಂತೆ ವಿವಿಧ ಭಕ್ತರ ಮನೆಗಳಿಗೆ ತೆರಳಲಿದೆ ಹಾಗೂ ಡಿ.2 ಶನಿವಾರ ಮಧ್ಯಾಹ್ನದ  ನಂತರ ಮುಂದಿನ ತಾಣಕ್ಕೆ  ತೆರಳಲಿದೆ. ಈ ಕುರಿತು ಸಿದ್ದತೆಗಳು ಪೂರ್ಣಗೊಂಡಿದೆ  ಎಂದು  ಪೂರ್ವಸಿದ್ಧತೆಗಳ ಸಭೆಯ ನಂತರ ಅಂಬಾಗಿರಿ ವಲಯದ ಅಧ್ಯಕ್ಷ  ಶಂಕರ ವಿ. ಹೆಗಡೆ ,ಬದ್ರನ್ ,ಹಾಗು ದೇವಸ್ಥಾನದ  ನಿರ್ವಹಣಾ ಸಮಿತಿಯ ಅದ್ಯಕ್ಷ ವಿ.ಎಮ್.ಹೆಗಡೆ, ಆಲ್ಮನೆ  ಮಾಹಿತಿ ನೀಡಿದ್ದಾರೆ.

300x250 AD

ಸ್ವರ್ಣ  ಪಾದುಕೆ ಪೂಜೆ ಹಾಗೂ ಇತರ ಸೇವೆಗಳನ್ನು ಭಕ್ತರು ದೇವಸ್ಥಾನದಲ್ಲಿ ಅಥವಾ ಅವರ ಮನೆಗಳಲ್ಲಿ ವ್ಯಕ್ತಿ ಗತವಾಗಿ ಅಥವಾ ಸಮೂಹವಾಗಿ  ಕೂಡ ನೆರವೇರಿಸಲು ಅವಕಾಶವಿದೆ. ಈ ಬಗ್ಗೆ  ಮುಂಚಿತವಾಗಿಯೇ  ದೇವಸ್ಥಾನದ ಕಾರ್ಯಾಲಯದಲ್ಲಿ ವಿವರವಾದ ಮಾಹಿತಿಯನ್ನು ಪಡೆದು ಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top