ಹೊನ್ನಾವರ : ತಾಲೂಕಿನ ಮುಗ್ವಾ ಸುಬ್ರಹ್ಮಣ್ಯದ ಹುಲಿಯಪ್ಪನ ಕಟ್ಟೆಯ ಸಮೀಪ ಶನಿವಾರ ಸಂಜೆ ನಡೆದ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರರು ಗಂಭೀರ ಗಾಯಗೊಂಡು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿತ್ತು.
ದುರಾದೃಷ್ಟವಶಾತ್ ಬೈಕ್‌ನ ಹಿಂಬದಿಗೆ ಕುಳಿತ ಯುವತಿ ಹೊನ್ನಾವರ ತಾಲೂಕಿನ ಕರಿಕುರ್ವದ ತ್ರಿವೇಣಿ ಗಣಪತಿ ಅಂಬಿಗ (20) ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ರವಿವಾರ ಬೆಳಿಗ್ಗೆ ಮೃತಪಟ್ಟಿದ್ದಾಳೆ.
ಇನ್ನು ಕುಮಟಾ ತಾಲೂಕಿನ ಕತಗಾಲ ಉಪ್ಪಿನಪಟ್ಟಣದ ದಯಾನಂದ ಶಂಕರ ಅಂಬಿಗ ಬೈಕ್ ಚಾಲಕನಾಗಿದ್ದು, ಈತನಿಗೂ ಸಹ ಗಂಭೀರ ಗಾಯವಾಗಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.