Slide
Slide
Slide
previous arrow
next arrow

‘ನುಡಿಹಬ್ಬ-2023’ ಕಾರ್ಯಕ್ರಮ ಯಶಸ್ವಿ

300x250 AD

ಹೊನ್ನಾವರ: ತಾಲೂಕಿನ ಅರೇಅಂಗಡಿಯಲ್ಲಿ ನುಡಿಹಬ್ಬ ಸಮಿತಿ ವತಿಯಿಂದ ಎರಡನೇ ವರ್ಷದ ‘ನುಡಿಹಬ್ಬ-2023’ ಕಾರ್ಯಕ್ರಮ ಅರೇಅಂಗಡಿ ಆಸ್ಪತ್ರೆಯ ಮುಂಭಾಗದಲ್ಲಿ ಯಶಸ್ವಿಯಾಗಿ ನೇರವೇರಿತು.

ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ದಿನಕರ ಶೆಟ್ಟಿ ಮಾತನಾಡಿ, ವಿದ್ಯಾರ್ಥಿ ದೆಸೆಯಲ್ಲಿಯೇ ಕನ್ನಡಾಭಿಮಾನ ಹೊಂದಿದ್ದೆ. ಕಾಲೇಜಿನ ದಿನಗಳಲ್ಲಿ ನಡೆದ ಕನ್ನಡಪರ ಹೋರಾಟದಲ್ಲಿ ಪಾಲ್ಗೊಂಡಿದ್ದೆ ಎಂದು ತಮ್ಮ ಕನ್ನಡಪರ ನಿಲುವಿನ ಬಗ್ಗೆ ಸ್ಮರಿಸುತ್ತಾ ಕನ್ನಡವನ್ನು ಉಳಿಸಿ-ಬೆಳೆಸುವಂತಹ ಕೆಲಸ ಆಗಬೇಕಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸಂಘಟನೆ ಮಾಡುವುದು ಸುಲಭವಲ್ಲ. ಆದರು ಕಾರ್ಯಕ್ರಮ ಉತ್ತಮವಾಗಿ ಮೂಡಿಬಂದಿದೆ ಎಂದು ಸಂಘಟನೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕೆ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾದ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ, ಪ್ರತಿಯೊಬ್ಬರು ಭಾಷಾಭಿಮಾನ ಹೊಂದಬೇಕು. ಆ ಅಭಿಮಾನ ಇಲ್ಲದಿದ್ದರೆ ಭಾಷೆ ಬೆಳೆಸಲು ಸಾಧ್ಯವಿಲ್ಲ. ಉತ್ತರ ಕನ್ನಡ ಜಿಲ್ಲೆ ಅತ್ಯಂತ ಸ್ಪಷ್ಟ ಕನ್ನಡ ನೀಡಿದೆ. ಯಕ್ಷಗಾನ ಕಲೆಯ ಮೂಲಕ ನಿರರ್ಗಳವಾಗಿ ಕನ್ನಡ ಮಾತನಾಡಲು ಅವಕಾಶಕೊಟ್ಟಿದೆ. ಇದರಿಂದ ಕನ್ನಡ ಉಳಿದು ಬಂದಿದೆ‌. ಕಲೆಯಲ್ಲಿ ಕನ್ನಡವಿದ್ದರೆ ಭಾಷೆ ಬೆಳೆಸಲು ಸಾಧ್ಯವಾಗುತ್ತದೆ. ಇಂದು ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುತ್ತಿದೆ. ಇದು ಗಂಭೀರವಾಗಿ ಯೋಚಿಸುವಂತದ್ದಾಗಿದೆ. ಆದರೆ ಸರ್ಕಾರವೆ ಹೆದರಿಕೊಂಡು ಆಂಗ್ಲ ಮಾಧ್ಯಮ ಶಾಲೆಗೆ ಪ್ರೋತ್ಸಾಹ ನೀಡುತ್ತಿದೆ‌. ಉನ್ನತ ಹುದ್ದೆಗಳಲ್ಲಿದ್ದವರು, ಸರ್ಕಾರ ಕನ್ನಡವನ್ನು ಬೆಳೆಸಲು ಸಿದ್ದವಾಗಿಲ್ಲ. ಕನ್ನಡದ ಪರವಾಗಿ ನಿಂತವರಿಗೆ ನಾವೆಲ್ಲಾ ಬೆಂಬಲಿಸೋಣ ಎಂದರು.

300x250 AD

ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಜಿ.ಜಿ ಶಂಕರ್ ಮಾತನಾಡಿ ಹಲವು ಸಂಸ್ಕೃತಿಗಳ ನೆಲೆಯಾದ ನಾಡು ಕನ್ನಡ ನಾಡಾಗಿದೆ ಸಾಹಿತ್ಯಿಕ, ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ. ಮುಂದಿನ ಜನಾಂಗಕ್ಕೆ ಭಾಷೆಯ ಮೇಲೆ ಅಭಿಮಾನ ಮೂಡಿಸಲು ಇಂತಹ ಕಾರ್ಯಕ್ರಮ ಸಹಕಾರಿಯಾಗಲಿದೆ. ಕನ್ನಡ ಅಭಿಮಾನದಿಂದ ನಡೆಯುವ ಕನ್ನಡ ಪರ ಕಾರ್ಯಕ್ರಮಗಳಿಗೆ ಸದಾ ನಮ್ಮ ಬೆಂಬಲವಿದೆ ಎಂದರು. ಮದ್ದಳೆ ವಾದಕ ಗಜಾನನ ಭಂಡಾರಿ, ಜನಪದ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಂಗೆ ಗೌಡ ಇವರನ್ನು ಸನ್ಮಾನಿಸಲಾಯಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸೆಂಟ್ ಮಿಲಾಗ್ರೀಸ್ ಕ್ರೇಡಿಟ್ ಸೊಸೈಟಿಯ ವ್ಯವಸ್ಥಾಪಕ ನಿರ್ದೆಶಕರಾದ ಜಾರ್ಜ್ ಫರ್ನಾಂಡಿಸ್ ಮಾತನಾಡಿ ಕನ್ನತನ ಸಾರುವ ಇಂತಹ ಕಾರ್ಯಕ್ರಮ ಗ್ರಾಮೀಣ ಭಾಗದಲ್ಲಿ ನಡೆದಾಗ ಭಾಷಾಭಿಮಾನ ಇನ್ನಷ್ಟು ಹೆಚ್ಚಲಿದೆ ಎಂದರು.
ಬಿಜೆಪಿ ಜಿಲ್ಲಾ ಯುವಮೊರ್ಚಾ ಪ್ರಭಾರಿಗಳಾದ ಪ್ರೋ ಎಂ.ಜಿ.ಭಟ್ ಕನ್ನಡಾಭಿಮಾನದ ನುಡಿಗಳನ್ನಾಡಿದರು.
ವೇದಿಕೆಯಲ್ಲಿ ಗ್ರಾ.ಪಂ.ಅಧ್ಯಕ್ಷರಾದ ಸುರೇಶ್ ಶೆಟ್ಟಿ, ಪುಷ್ಪಾ ನಾಯ್ಕ, ಸುಬ್ರಹ್ಮಣ್ಯ ಭಟ್, ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ, ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕರಾದ ವಿ.ಕೆ.ವಿಶಾಲ್, ಉದ್ದಿಮೆದಾರರಾದ ಎಸ್.ಕೆ.ನಾಯ್ಕ, ಉಪಸ್ಥಿತರಿದ್ದರು.
ರಜನಿ ನಾಯ್ಕ ಸ್ವಾಗತಿಸಿ, ಜಿ.ಆರ್.ನಾಯ್ಕ ವಂದಿಸಿದರು. ಎಂ.ಎನ್.ನಾಯ್ಕ ಕಾರ್ಯಕ್ರಮದ ಕುರಿತು ಪ್ರಾಸ್ತವಿಕವಾಗಿ ಮಾತನಾಡಿದರು. ಬಿಂದು ಅವಧಾನಿ ಕಾರ್ಯಕ್ರಮ ನಿರ್ವಹಿಸಿದರು.
ಸಭಾ ಕಾರ್ಯಕ್ರಮದ ಮೊದಲು ಮೂರು ಗ್ರಾಮದ ಶಾಲಾ ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮ, ಸಭಾ ಕಾರ್ಯಕ್ರಮದ ನಂತರ ‘ಮಾತು ಬಿದ್ದಿತು,ಮೌನ ಗೆದ್ದಿತು’ ನಾಟಕ ಜನಮನ ರಂಜಿಸಿತು.

Share This
300x250 AD
300x250 AD
300x250 AD
Back to top