ಅಂಕೋಲಾ: ಶಿಕ್ಷಣ ತಜ್ಞೆ ಪ್ರೇಮ ತಾಯಿ ಪಿಕಳೆಯವರ 12ನೇ ವರ್ಷದ ಪುಣ್ಯತಿಥಿ ಅಂಗವಾಗಿ ಡಾ.ಕಮಲ ಆಸ್ಪತ್ರೆಯ ಆವರಣದಲ್ಲಿರುವ ಸಮಾಧಿಗೆ ಪೂಜೆ ಸಲ್ಲಿಸುವ ಮೂಲಕ ಭಕ್ತಿಪೂರ್ವಕವಾಗಿ ಸ್ಮರಿಸಲಾಯಿತು.
ಕೆ.ಎಲ್.ಇ.ಸಮೂಹ ಸಂಸ್ಥೆಯ ಎಲ್ಲಾ ಅಂಗ ಸಂಸ್ಥೆಗಳು ಸೇರಿ ಆಚರಿಸಲಾದ ಪುಣ್ಯತಿಥಿಯಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ಡಿ.ಎಲ್.ಭಟ್ಕಳ್ ಸದಸ್ಯರಾದ ಡಾ. ಮೀನಲ್ ನಾರ್ವೆಕರ್ ನಿವೃತ್ತ ಶಿಕ್ಷಕರು, ಮುಖ್ಯೋದ್ಯಾಪಕರು ವಿವಿಧ ಅಂಗ ಸಂಸ್ಥೆಗಳ ಮುಖ್ಯಸ್ಥರು ಸಿಬ್ಬಂಧಿಗಳು ಪುಷ್ಪ ಸಮರ್ಪಿಸಿ ಶಿಕ್ಷಣ ತಜ್ಞೆ ಹೋರಾಟಗಾರ್ತಿ ಪ್ರೇಮ ತಾಯಿ ಪಿಕಳೆಯವರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.