Slide
Slide
Slide
previous arrow
next arrow

ಗಾಯಗೊಂಡ ಆಕಳ ಕರುವಿಗೆ ಯುವಕರಿಂದ ಚಿಕಿತ್ಸೆ

300x250 AD

ಹೊನ್ನಾವರ : ಪಟ್ಟಣದ ಕೆ.ಇ.ಬಿ ಹಾಗೂ ಫಾರೆಸ್ಟ್ ಕಾಲೋನಿಗೆ ಮಾರ್ಗದ ಸಮೀಪ ಆಕಳ ಕರುವೊಂದು ಪೆಟ್ಟು ಮಾಡಿಕೊಂಡು ರಸ್ತೆಯ ಪಕ್ಕದ ಗಟಾರ ಸಮೀಪ ಬಿದ್ದಿತ್ತು. ಕರುವಿಗೆ ಕಾಲಿಗೆ ಹಾಗೂ ಮೈ ಮೇಲೆ ಸಹ ಗಾಯಗಳಾಗಿದ್ದು ಓಡಾಡಲು ಕಷ್ಟಪಡುತ್ತಿತ್ತು.

ಒಂದು ವಾರದಿಂದ ನೋವನ್ನು ಅನುಭವಿಸುತ್ತಿದ್ದರೂ, ಅದಕ್ಕೆ ಒಂದು ಸರಿಯಾದ ಜಾಗವನ್ನು ಮಾಡಿಕೊಡುವ ಕೆಲಸವನ್ನು ಯಾರೂ ಸಹ ಮಾಡಿರಲಿಲ್ಲ. ರವಿವಾರದಂದು ಹೊನ್ನಾವರದ ಯುವಕರ ತಂಡವೊಂದು ಇದನ್ನು ಗಮನಿಸಿ ಕರುವನ್ನು ಬಿದ್ದಲ್ಲಿಂದ ಎಬ್ಬಿಸಿ , ಸುರಕ್ಷಿತ ಜಾಗಕ್ಕೆ ಬಿಟ್ಟಿದ್ದಾರೆ. ಅಲ್ಲದೆ ಆ ಕರುವಿನ ಗಾಯಕ್ಕೆ ಸಹ ತಮ್ಮ ಸ್ವಂತ ಹಣದಿಂದ ಔಷಧವನ್ನು ತಂದು , ಪಶು ವೈದ್ಯರನ್ನು ಕರೆಸಿ ಚಿಕಿತ್ಸೆ ನೀಡಿದ್ದು , ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

300x250 AD
Share This
300x250 AD
300x250 AD
300x250 AD
Back to top