ಶಿರಸಿಯ ವಿಕಾಸಾಶ್ರಮದ ಮೈದಾನ ಉತ್ಸವಕ್ಕೆ ಸಜ್ಜು – ನೂರಕ್ಕೂ ಅಧಿಕ ಸ್ಟಾಲ್ಗಳ ಪಾಲ್ಗೊಳ್ಳುವಿಕೆ – ಒಂದಕ್ಕಿAತ ಒಂದು ವಿಭಿನ್ನ ಉತ್ಪನ್ನಗಳ ಪ್ರದರ್ಶನ
ಕೆ.ದಿನೇಶ ಗಾಂವ್ಕರ
ಶಿರಸಿ: ಅತಿಯಾದ ಅರಣ್ಯ ಪ್ರದೇಶ, ನದಿಗಳು ಹಾಗೂ ವಿವಿಧ ಸಮುದ್ರ ತೀರವನ್ನು ಹೊಂದುವ ಮೂಲಕ ಅಪಾರ ನೈಸರ್ಗಿಕ ಸಂಪತ್ತನ್ನು ತನ್ನದಾಗಿಸಿಕೊಂಡ ಹಿರಿಮೆಗೆ ನಮ್ಮ ಜಿಲ್ಲೆ ಪಾತ್ರವಾಗಿದೆ. ಇಲ್ಲಿನ ಜನರೂ ಸಹ ಎಲ್ಲ ರಂಗಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು ಸ್ವಾಭಿಮಾನದ ಬದುಕಿಗೆ ಸಾಕ್ಷಿಯಾಗುತ್ತಿದ್ದಾರೆ. ಇದಕ್ಕೆ ಪೂರಕವೆಂಬAತೆ ಇತ್ತೀಚೆಗೆ ಜಿಲ್ಲೆಯಲ್ಲಿ ಸಾಕಷ್ಟು ಬಗೆಯ ಹಲವು ಚಿಕ್ಕ ಕೈಗಾರಿಕೆ ಮತ್ತು ಗೃಹೋದ್ಯಮಗಳು ಬೆಳೆಯುತ್ತಿರುವುದು ಹೆಮ್ಮೆಯ ಸಂಗತಿ. ಈ ಎಲ್ಲವನ್ನೂ ಒಂದೇ ಸೂರಿನಡಿ ಒಂದುಗೂಡಿಸಿ, ಅವರ ಉತ್ಪನ್ನ ಮತ್ತು ಸೇವೆಗಳನ್ನು ಪ್ರದರ್ಶಿಸಲು ನಾಲ್ಕು ದಿನಗಳ ಕಾಲ ಅವಕಾಶ ಕಲ್ಪಿಸಿದ ಮಲೆನಾಡು ಮೆಗಾ ಉತ್ಸವ ಆಯೋಜಕರ ಕಾರ್ಯ ಶ್ಲಾಘನೀಯ.
ಹೌದು, ನ.30 ರಿಂದ ಡಿ.3 ರವರೆಗೆ ನಾಲ್ಕು ದಿನಗಳ ಕಾಲ ಶಿರಸಿಯ ವಿಕಾಸಾಶ್ರಮದ ಮೈದಾನದಲ್ಲಿ ಓಜಸ್ ಹೆಲ್ತ್ ಬೂಸ್ಟರ್, ಶಿರಸಿರುಚಿ ಪ್ರಧಾನ ನೇತೃತ್ವದಲ್ಲಿ ಹಮ್ಮಿಕೊಂಡ ಮಲೆನಾಡು ಮೆಗಾ ಉತ್ಸವವು ಉದ್ಯಮಶೀಲತೆಯ ಕ್ಷೇತ್ರಕ್ಕೆ ಹೊಸ ಹೆಜ್ಜೆ ಹಾಕಿ, ಹೊಸತನದ ಅವಕಾಶವನ್ನು ಪೂರೈಸುವ ರೋಮಾಂಚಕಾರಿ ವೇದಿಕೆಯಾಗಿ ಸಿದ್ಧಗೊಳ್ಳಲಿದೆ. ಈ ಭವ್ಯವಾದ ವೇದಿಕೆಯನ್ನು ಹೊಸ ಉದ್ಯಮಿಗಳ ಉನ್ನತಿಯ ನಿಟ್ಟಿನಲ್ಲಿ ಪ್ರತ್ಯೇಕವಾಗಿ ರೂಪಿಸಲಾಗುತ್ತಿದೆ. ಅವರ ಉತ್ಪನ್ನಗಳು, ಸೇವೆಗಳನ್ನು ಪ್ರದರ್ಶಿಸಲು ಹಾಗೂ ಜನತೆಯೊಂದಿಗೆ ಸಂಪರ್ಕ ಬೆಳೆಸಲು, ಸಂಭಾವ್ಯ ಗ್ರಾಹಕರ ಮತ್ತು ಹೂಡಿಕೆದಾರರ ಬಾಗಿಲು ತೆರೆಯುವ ವೇದಿಕೆ ಇದಾಗಲಿದೆ ಎಂಬುದು ಸಂತಸದ ಸಂಗತಿ.
ಜಿಲ್ಲೆಯಲ್ಲಿ ಸಾಕಷ್ಟು ವೈವಿಧ್ಯಮಯ ಚಿಕ್ಕಪುಟ್ಟ ಕೈಗಾರಿಕಾಗಳು ಹಾಗೂ ಗೃಹೋದ್ಯಮದ ಹಲವು ಸಂಸ್ಥೆ ಮತ್ತು ಸಂಘಗಳಿವೆ. ವಯಕ್ತಿಕವಾಗಿಯೂ ಗೃಹೋದ್ಯಮದಲ್ಲಿ ನಿರತರಾದ ಅದೆಷ್ಟೋ ರೈತ ಕುಟುಂಬಗಳಿವೆ. ಅವರ ಅತ್ಯಾಧುನಿಕ ಉತ್ಪನ್ನಗಳು ಹಾಗೂ ಸೇವೆಗಳನ್ನು ಪ್ರದರ್ಶಿಸಲು ಇಲ್ಲಿ ಎಲ್ಲ ರೀತಿಯಿಂದಲೂ ಅವಕಾಶವಿದೆ. ಅಲ್ಲದೇ, ಸಮಾನ ಮನಸ್ಕ ವ್ಯಕ್ತಿಗಳು, ಉದ್ಯಮ ತಜ್ಞರು ಮತ್ತು ಸಂಭಾವ್ಯ ಸಹಯೋಗಗಳೊದಿಗೆ ಅರ್ಥಪೂರ್ಣ ಸಂಭಾಷಣೆಯಲ್ಲಿ ಭಾಗವಹಿಸಲು ಮಲೆನಾಡು ಮೆಗಾ ಉತ್ಸವ ಸೂಕ್ತ ಸ್ಥಳವಾಗಿದ್ದು, ಇದು ಕೇವಲ ಕಾರ್ಯಕ್ರಮವಲ್ಲದೇ ಯುವ ಉದ್ಯಮಿಗಳ ಹಾಗೂ ಸಮಾನ ಮನಸ್ಕರ ಒಂದು ಸಮ್ಮಿಲನವಾಗಿದೆ.
ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಚಿಕ್ಕ ಕೈಗಾರಿಕೆ ಮತ್ತು ಯುವ ಗೃಹೋದ್ಯಮಿಗಳು ಕಾರ್ಯಾಗಾರ ಘಟಕ ಮತ್ತು ತಿಳುವಳಿಕೆ ಫಲಕಗಳ ಮೂಲಕ ಉದ್ಯಮದ ಪ್ರಮುಖರಿಂದ ಉದ್ಯಮದ ಏಳ್ಗೆಗೆ ಒಳನೋಟವನ್ನು ಪಡೆಯಬಹುದಾಗಿದೆ. ಉದ್ಯಮಶೀಲತೆ ಯಶಸ್ವಿಯಾಗಿ ಉತ್ತುಂಗಕ್ಕೇರಲು ಇತ್ತೀಚಿನ ಪ್ರವೃತ್ತಿಗಳು, ಉತ್ತಮ ಅಭ್ಯಾಸಗಳು ಮತ್ತು ತಂತ್ರಗಳ ಕುರಿತೂ ಸಹ ಇಲ್ಲಿ ತಿಳಿಯಬಹುದಾಗಿದೆ. ಭವಿಷ್ಯದ ವ್ಯಾಪಾರ ಉದ್ಯಮಗಳಿಗೆ ಉತ್ತಮ ಅಡಿಪಾಯ ಹಾಕುವ ನಿಟ್ಟಿನಲ್ಲಿ ಇಲ್ಲಿ ಎಲ್ಲ ರೀತಿಯ ವ್ಯವಸ್ಥೆ ಲಭ್ಯವಿದ್ದು, ಹೆಚ್ಚೆಚ್ಚು ಉದ್ಯಮಿಗಳು ಆಗಮಿಸಿ, ನಿಮ್ಮ ಉದ್ಯಮವನ್ನು ಗರಿಷ್ಠ ಮಟ್ಟಕ್ಕೆ ಕೊಂಡೊಯ್ಯಬಹುದಾಗಿದೆ. ಇದು ನಾವೀನ್ಯತೆ ಮತ್ತು ಉದ್ಯಮಶೀಲತೆಯ ಆಚರಣೆಯಾಗಿರುವುದರಿಂದ ಹೊಸ ಆಲೋಚನೆಗಳು ಮತ್ತು ಸಂಪರ್ಕ ಹೆಚ್ಚಿಸುವ ಉತ್ತಮ ಪರಿಸರವಾಗಲಿದೆ.
ಈ ಮಲೆನಾಡು ಮೆಗಾ ಉತ್ಸವದಲ್ಲಿ ಎಲ್ಲ ರೀತಿಯ ಅತ್ಯಾಧುನಿಕ ಹಾಗೂ ಗೃಹೋದ್ಯಮದ ಉತ್ಪನ್ನಗಳ ಪ್ರದರ್ಶನಕ್ಕೆ ಸೂಕ್ತವಾದ 100 ಅಂಗಡಿಗಳನ್ನು ತೆರೆಯಲಾಗಿದ್ದು, ಜಿಲ್ಲೆಯ ಎಲ್ಲ ತಾಲೂಕಿನ ಚಿಕ್ಕ ಕೈಗಾರಿಗೆ ಹಾಗೂ ಗೃಹೋದ್ಯಮಿಗಳು ಮತ್ತು ಗ್ರಾಹಕರು ಹೆಚ್ಚೆಚ್ಚು ಆಗಮಿಸಿ, ಈ ಉತ್ಸವದಲ್ಲಿ ಪಾಲ್ಗೊಳಬೇಕು ಹಾಗೂ ಯುವ ಗೃಹೋದ್ಯಮದ ಏಳ್ಗೆಗೆ ಸಹಕರಿಸಬೇಕು ಎಂಬುದು ಆಯೋಜಕರ ಆಶಯವಾಗಿದೆ.
ಜಿಲ್ಲೆಯ ಚಿಕ್ಕ ಕೈಗಾರಿಕೆ ಹಾಗೂ ಗೃಹೋದ್ಯಮಿಗಳಿಗೆ ಉತ್ತಮ ವೇದಿಕೆ:
ಜಿಲ್ಲೆಯ ಚಿಕ್ಕ ಗೃಹೋದ್ಯಮಿಗಳ ಏಳ್ಗೆಗೆ ಮಲೆನಾಡು ಮೆಗಾ ಉತ್ಸವ ಉತ್ತಮ ವೇದಿಕೆಯನ್ನು ಕಲ್ಪಿಸುತ್ತಿದ್ದು, ಇದರಿಂದ ನಿಮ್ಮ ಉತ್ಪನ್ನ ಹಾಗೂ ಸೇವೆಗಳ ಪ್ರದರ್ಶನ, ಸಂಭಾವ್ಯ ಗ್ರಾಹಕರ ಸಂಪರ್ಕ ಮತ್ತು ಉದ್ಯಮಕ್ಕೆ ಸಂಬAಧಪಟ್ಟAತೆ ತಜ್ಞರಿಂದ ಮಾಹಿತಿಗಳನ್ನು ಕಲೆ ಹಾಕಬಹುದಾಗಿದೆ. ಈ ಮೂಲಕ ನಿಮ್ಮ ಉದ್ಯಮವನ್ನು ಉನ್ನತ ಮಟ್ಟಕ್ಕೆ ಏರಿಸಬಹುದಾಗಿದೆ.
ಮಹಿಳಾ ಸಂಘ-ಸ0ಸ್ಥೆಗಳ ಗೃಹೋದ್ಯಮದ ಉತ್ಪನ್ನಗಳ ಪ್ರದರ್ಶನಕ್ಕೂ ಅವಕಾಶ:
ಜಿಲ್ಲೆಯಲ್ಲಿ ಸಾಕಷ್ಟು ಮಹಿಳಾ ಸಂಘ ಸಂಸ್ಥೆಗಳು ಗೃಹೋದ್ಯಮದ ಹಲವು ಉತ್ಪನ್ನಗಳನ್ನು ಸಿದ್ಧಗೊಳಿಸುವ ಮೂಲಕ ಸ್ವಾವಲಂಬಿ ಜೀವನ ರೂಪಿಸಿಕೊಂಡಿದ್ದು, ಅವರು ಸಿದ್ಧಗೊಳಿಸುವ ಉತ್ಪನ್ನಗಳ ಪ್ರದರ್ಶನಕ್ಕೂ ಮಲೆನಾಡು ಮೆಗಾ ಉತ್ಸವದಲ್ಲಿ ಅವಕಾಶವಿದ್ದು, ಈ ವೇದಿಕೆಯ ಸದುಪಯೋಗ ಪಡೆದುಕೊಂಡು ಆರ್ಥಕವಾಗಿ ಇನ್ನಷ್ಟು ಸದೃಢವಾಗಬಹುದಾಗಿದ
ಮಲೆನಾಡು ಮೆಗಾ ಉತ್ಸವದ ಮುಖ್ಯಾಂಶಗಳು:
- ನ. 30 ರಿಂದ ಡಿ. 3 ರವರೆಗೆ ನಡೆಯುವ ಉತ್ಸವ
- ವಿಕಾಸಾಶ್ರಮದ ಮೈದಾನ ಉತ್ಸವಕ್ಕೆ ಸಜ್ಜು
- ಮಲೆನಾಡು ಮೆಗಾ ಸೇಲ್ಗೆ ಫ್ರೀ ಎಂಟ್ರಿ
- ನೂರಕ್ಕೂ ಅಧಿಕ ಸ್ಟಾಲ್ಗಳ ಪಾಲ್ಗೊಳ್ಳುವಿಕೆ
- ಒಂದಕ್ಕಿAತ ಒಂದು ವಿಭಿನ್ನ ಉತ್ಪನ್ನಗಳ ಪ್ರದರ್ಶನ
- ಯುವ ಉದ್ಯಮಿಗಳಿಗೆ ಇದು ಉತ್ತಮ ವೇದಿಕೆ