ದೇಶೀಯ ಮಾರುಕಟ್ಟೆಯಲ್ಲಿ ಓಜಸ್ ಹೆಲ್ತ್ ಬೂಸ್ಟರ್ ಹೆಸರುವಾಸಿ – ಅಡಕೆ ಬೆಳೆಗಾರನ ಕನಸು ಸಾಕಾರಗೊಂಡ ಪರಿಯೇ ಅದ್ಭುತ
ಮಲೆನಾಡಿನ ಅಡಕೆ ತೋಟದ ಅಂಚಿನಲ್ಲಿರುವ ಹೆಂಚಿನ ಮನೆಯಲ್ಲಿ ಮಧ್ಯರಾತ್ರಿಯಲ್ಲಿ ತೋಟಿಗರೊಬ್ಬರ ಕಣ್ಣೆದುರಿಗೆ ಮೂಡಿದ ಕಲ್ಪನೆಯೊಂದು ಸತತ ಪರಿಶ್ರಮ, ನಿರಂತರ ಕಾಯಕ, ಶಕ್ತಿಯುತ ದೃಢಸಂಕಲ್ಪ ಮತ್ತು ಡಿಜಿಟಲ್ ಯುಗದಲ್ಲಿನ ಸಾಂಘಿಕ ಪ್ರಯತ್ನದ ಫಲವಾಗಿ ಬಾಯಿಯೊಳಗೆ ಹೋಳಾಗಿ, ಜಗಿದು ಉಗಿಯುತ್ತಿದ್ದ ಅಡಕೆಯ ಹೋಳುಗಳು ಶಕ್ತಿವರ್ಧಕ ಪೇಯಗಳಾಗಿ ತನ್ನನ್ನು ಮಾರ್ಪಾಡಿಸಿಕೊಂಡ ಬಗೆಯೇ ಒಂದು ಅದ್ಭುತ.
ಹೌದು, ಮಲೆನಾಡಿನ ಹೆಬ್ಬಾಗಿಲಾಗಿರುವ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹುಗ್ಗಿಕೊಪ್ಪ ಎಂಬ ಗ್ರಾಮದಲ್ಲಿ ಅಡಕೆಯಿಂದ ತಯಾರಾದ ಪೇಯವಾಗಿರುವ ‘ಓಜಸ್ ಹೆಲ್ತ್ ಬೂಸ್ಟರ್’ ಇದೀಗ ದೇಶೀಯ ಮಾರುಕಟ್ಟೆಯಲ್ಲಿ ತನ್ನ ಔಷಧೀಯ ಗುಣ ಮತ್ತು ಆರೋಗ್ಯಕರ ಅಂಶಗಳ ಕಾರಣಕ್ಕೆ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡಿರುವ ಪರಿ ವರ್ಣನೆಗೆ ನಿಲುಕದ್ದು.
ಪುರಾತನ ಕಾಲದಿಂದಲೂ ಮಲೆನಾಡಿಗರ ಜೀವನಾಡಿಯಾಗಿರುವ ಅಡಕೆ ಮನುಷ್ಯನ ಆರೋಗ್ಯಕ್ಕೆ ಹಾನಿಕರ ಸುಳ್ಳು ಸುದ್ದಿಯ ಕಾರಣಕ್ಕೆ ಅಡಕೆ ಮೇಲಿನ ತೂಗುಗತ್ತಿ, ಅನಿರ್ದಿಷ್ಟ ಬೆಲೆ, ಅಕಾಲಿಕ ರೋಗ, ಕುಂಠಿತ ಬೆಳೆ ಇಂತಹ ನೂರೆಂಟು ಸಮಸ್ಯೆಗಳ ನಡುವೆ, ಅಡಿಕೆ ಕೃಷಿಯನ್ನೇ ಮೂಲ ಕಸುಬನ್ನಾಗಿಸಿ ಜೀವವನ್ನಾಗಿಸಿಕೊಂಡ ಮಲೆನಾಡಿನ 57ರ ಹರೆಯದ ಎಸ್.ಎಂ.ಹೆಗಡೆ, ಹುಗ್ಗಿಕೊಪ್ಪ ಇವರಿಂದ ಜೀವ ಪಡೆದ ಓಜಸ್ ಹೆಲ್ತ್ ಬೂಸ್ಟರ್, ಇಂದು ಬೃಹದಾಕಾರವಾಗಿ ದೇಶದೆಲ್ಲೆಡೆ ಪಸರಿಸಿ, ತನ್ನನ್ನು ಪೋಷಿಸಿದ ಕೈಗಳನ್ನು ಸದೃಡಗೊಳಿಸಿದೆ. ಜೊತೆಗೆ ಅಡಕೆಯ ಮೇಲಿನ ನಂಬಿಕೆ ಬೆಳೆಗಾರರಿಗೆ ಹೆಚ್ಚುವಂತೆ ಮಾಡಿದ್ದು ಸಹ ಉಲ್ಲೇಖನೀಯ.
ಮಾಲೀಕರೇ ಕಾರ್ಮಿಕರಾಗಿ ಸಂಪೂರ್ಣ ಕೆಲಸ ನಿರ್ವಹಣೆ:
ಇಂಡಸ್ಟ್ರಿ ಎಂದಾಗ ಒಂದಷ್ಟು ಅನುಕೂಲತೆಗಳ ಕಲ್ಪನೆ ಎಲ್ಲರಿಗೂ ಸಹಜವಾಗಿ ಕಣ್ಣಮುಂದೆ ಸಾಗುತ್ತದೆ. ಆದರೆ ಇವರ ಪರಿಕಲ್ಪನೆ ಮತ್ತು ಕಲ್ಪನೆಯನ್ಮು ಸಾಕಾರಗೊಳಿಸಿಕೊಂಡ ಬಗೆ ನಿಜಕ್ಕೂ ಶ್ಲಾಘನೀಯ. ಮನೆಯೊಂದರ ಪಕ್ಕದ ಕಿರು ಜಾಗದಲ್ಲಿಯೇ ಶೆಡ್ ಮಾದರಿಯ ಕಟ್ಟಡದಲ್ಲಿ ಓಜಸ್ ಹೆಲ್ತ್ ಬೂಸ್ಟರ್ ಇಂಡಸ್ಟ್ರಿ ನಡೆಯುತ್ತಿದೆ. ಹಳ್ಳಿಗಳಲ್ಲಿನ ವಿದ್ಯುತ್ ಕೊರತೆ, ಕುಶಲ ಕಾರ್ಮಿಕರ ಅಲಭ್ಯತೆ ಹೀಗೆ ಎಲ್ಲರಂತೆ ನೂರಾರು ಸಮಸ್ಯೆಗಳ ನಡುವೆಯೂ ಸಮಸ್ಯೆಗಳನ್ನೇ ನೆಪಗಳನ್ನಾಗಿಸಿಕೊಳ್ಳದೇ, ಕಂಡ ಕನಸನ್ನು ಸಾಕಾರಗೊಳಿಸಿದ ಎಸ್.ಎಂ. ಹೆಗಡೆಯವರ ಕಾರ್ಯಕ್ಕೊಂದು ಸಲಾಮ್. ವಿದ್ಯುತ್ ಇರುವಾಗ ಕೆಲಸ ನಡೆಸಬೇಕು. ಜೊತೆಗೆ ಮನೆಯ ಇತರ ಸದಸ್ಯರೇ ಸ್ವತಃ ಪ್ಯಾಕಿಂಗ್, ಲೇಬಲ್ಲಿಂಗ್ ಸೇರಿದಂತೆ ಎಲ್ಲ ಕೆಲಸ ಮಾಡುತ್ತಾರೆ. ಇಂದಿನ ಆಧುನಿಕತೆಗೆ ಅನಿವಾರ್ಯವಾಗಿರುವ ಬ್ರ್ಯಾಂಡ್ ಬಿಲ್ಡಿಂಗ್, ಮಾರ್ಕೆಟಿಂಗ್ ಮತ್ತು ವೆಬ್ಸೈಟ್ ಮತ್ತಿತರ ಕೆಲಸವನ್ನು ಎಸ್ ಎಮ್ ಹೆಗಡೆ ಮಗ ಹಾಗು ಈ ತ್ರಿಶೂಲ್ ಉತ್ಪನ್ನ ಕಂಪನಿ ಸಿಇಓ ಅವಿನಾಶ ಬೆಂಗಳೂರಿನಲ್ಲಿ ನೆಲೆಸಿ ಮಾಡುತ್ತಿದ್ದಾರೆ. ಇದೆಲ್ಲದರ ಪರಿಣಾಮ ದೇಶದ ಉತ್ತರ ಭಾಗಗಳಾದ ಉತ್ತರಾಖಂಡ, ಮಹಾರಾಷ್ಟ್ರ ನಮ್ಮ ರಾಜ್ಯದ ಉಡುಪಿ, ಚಿಕ್ಕಮಗಳೂರು, ಗದಗ, ಮೈಸೂರು, ಬೆಂಗಳೂರು ಸೇರಿದಂತೆ ಹಲವೆಡೆ ಸಂತೃಪ್ತ ಗ್ರಾಹಕರನ್ನು ಹೊಂದಿದೆ. ಗುರಿಯೆಡೆಗಿನ ದಾರಿ ಸ್ಪಷ್ಟವಿರುವಾಗ, ಬರುವ ಕಷ್ಟಗಳನ್ನು ಎದುರಿಸಿ, ದೃಢವಾದ ಹೆಜ್ಜೆಯನ್ನಿಟ್ಟಲ್ಲಿ ಪ್ರಯತ್ನ ಫಲ ಖಂಡಿತವಾಗಿಯೂ ಕೊಡುತ್ತದೆ ಜೊತೆಗೆ ಆತ್ಮಸಂತೃಪ್ತಿಯೂ ಇರುತ್ತದೆ ಎನ್ನುವ ನಿಲುವು ಓಜಸ್ ಹೆಲ್ತ್ ಬೂಸ್ಟರ್ ಮತ್ತು ತ್ರಿಶೂಲ್ ಉತ್ಪನ್ನಗಳ ಮಾಲೀಕರಾದ ಎಸ್ ಎಮ್ ಹೆಗಡೆಯವರದ್ದು.
ಓಜಸ್ ಹೆಲ್ತ್ ಬೂಸ್ಟರ್ ತಯಾರಿಕೆ, ಉಪಯೋಗ ಮತ್ತು ಪರಿಣಾಮ:
ಚಾಲಿ ಅಡಕೆಯಿಂದ ತಯಾರಿಸುವ ಈ ಹೆಲ್ತ್ ಬೂಸ್ಟರ್ ಪೌಡರ್, ಬೂಸ್ಟ್-ಬೋರ್ನವೀಟಾದಂತಹ ಇಮ್ಯುನಿಟಿ ಬೂಸ್ಟರ್ ನಂತೆ, ಬಿಸಿ ಹಾಲಿಗೆ ಸೇರಿಸಿ ನಿತ್ಯ ಕುಡಿಯಬಹುದಾಗಿದೆ. ಅಡಕೆಯ ಜೊತೆಗೆ ಏಲಕ್ಕಿ, ಲವಂಗ, ಜಾಯಿಕಾಯಿ ಸೇರಿದಂತೆ ಔಷಧೀಯ ಗುಣವುಳ್ಳ ಕೆಲವು ತೋಟದ ಉತ್ಪನ್ನ ಬಳಸಿ ಓಜಸ್ ಹೆಲ್ತ್ ಬೂಸ್ಟರ್ ಸಿದ್ಧವಾಗುತ್ತದೆ. ಚೊಕೊಲೇಟ್, ವೆನಿಲ್ಲಾ ಸೇರಿದಂತೆ ವಿವಿಧ ರೀತಿಯ ಪ್ಲೇವರ್’ನಲ್ಲಿರುವ ಹೆಲ್ತ್ ಬೂಸ್ಟರ್ ಇಮ್ಯುನಿಟಿಯ ಜೊತೆಗೆ ಆರೋಗ್ಯವನ್ನು ವೃದ್ಧಿಸುವುದರಲ್ಲಿ ಎರಡು ಮಾತಿಲ್ಲ. ಜೀರ್ಣಕ್ರಿಯೆ ಹೆಚ್ಚಳ, ಮಧುಮೇಹ ಸಮತೋಲನ, ರಕ್ತದೊತ್ತಡ ನಿಯಂತ್ರಕ, ಉರಿಯೂತ ನಿವಾರಣೆ, ಸ್ನಾಯುನೋವು ನಿಯಂತ್ರಣ, ಋತುಚಕ್ರದ ಕ್ರಿಯೆ ಸರಾಗಗೊಳ್ಳುವಿಕೆಯಲ್ಲಿಯೂ ಧನಾತ್ಮಕ ಪರಿಣಾಮ ಬೀರಿದೆ ಎಂಬುದು ಓಜಸ್ ಹೆಲ್ತ್ ಬೂಸ್ಟರ್ ಬಳಸಿದ ಗ್ರಾಹಕರ ಅ
ಪ್ರಧಾನಿ ಮೋದಿಯ ‘ಆತ್ಮನಿರ್ಭರ ಭಾರತ’ಕ್ಕೆ ಓಜಸ್ ಬಲ:
ಸ್ಥಾನೀಯ ಸಂಪನ್ಮೂಲಗಳ ಬಳಕೆ ಮತ್ತು ಕ್ರಿಯಾತ್ಮಕ ಯೋಚನೆ, ಯೋಜನೆಗಳು ಕಾರ್ಯಗತವಾದಾಗ ಮಾತ್ರ ಉದ್ಯಮಗಳು ಪ್ರಗತಿ ಕಾಣಲು ಸಾಧ್ಯ. ನವೋದ್ಯಮದ ಕಲ್ಪನೆಗಳು ನಗರ ಕೇಂದ್ರಿತವಾಗಿರದೇ, ನಾವಿರುವ ಸುತ್ತಮುತ್ತಲಿನ ಸಂಪನ್ಮೂಲಗಳು ಸದ್ಬಳಕೆಯ ಮಾರ್ಗಗಳಾದಾಗ ಪ್ರಧಾನಿ ಮೋದಿಯ ‘ಆತ್ಮ ನಿರ್ಬರ ಭಾರತ’ ಯೋಜನೆ ಯಶಸ್ಸಾಗುತ್ತದೆ. ಈ ನಿಟ್ಟಿನಲ್ಲಿ ಯೋಚನೆಗಳನ್ನು ಯೋಜನೆಗಳನ್ನಾಗಿ ಕಾರ್ಯಗತವಾದಾಗ ಮಾತ್ರ ಮೇರುಪರ್ವತದ ತುತ್ತ ತುದಿ ಏರುವ ಸಾಹಸ ಕೂಡ ಸುಲಭ ಸಾಧ್ಯವಾಗುತ್ತದೆ.
ಓಜಸ್ ಉತ್ಪನ್ನ ಅಡಕೆಯಿಂದ ತಯಾರಿಸಲಾಗಿದ್ದು ಆರೋಗ್ಯಕರ ಆಗಿದೆ. ಇದರ ಮಿಲ್ಕಶೇಕ್ ಹಾಗೇ ನೀರಲ್ಲಿ ಸಹ ತಯಾರಿಸಿದ ಪೇಯ ಆರೋಗ್ಯಕರ ಮತ್ತು ರುಚಿಕರ. ಅಡಕೆ ಆರೋಗ್ಯಕ್ಕೆ ಹಾನಿಕಾರಕ ಅನ್ನುವ ಮೆಡಿಕಲ್ ಮಾಫಿಯಾವನ್ನು ಹಿಮ್ಮೆಟ್ಟಿಸಿ ಇಂದು ಆರೋಗ್ಯಕರ ವಸ್ತುಗಳನ್ನು ಗ್ರಾಹಕರಿಗೆ ನೀಡ್ತಾ ಇರೋದು ನಮ್ಮೆಲ್ಲರ ಭಾಗ್ಯ.
— ಜ್ಯೋತಿ ಹೊದ್ಲೂರ್ {ಗದಗ}
ನಾನು ಸ್ನೇಹಿತರ ಸಲಹೆಯ ಮೇರೆಗೆ ಮಧುಮೇಹ ರೋಗಿಯಾದ ವಯಸ್ಸಾದ ನಮ್ಮ ಅಜ್ಜಿಗೆ ಓಜಸ್ ಹೆಲ್ತ್ ಬೂಸ್ಟರನ್ನು ನೀಡುತ್ತಿದ್ದೇವೆ. ನಿತ್ಯ ತೆಗದುಕೊಳ್ಳುತ್ತಿರುವುದರ ಪರಿಣಾಮವಾಗಿ ಆಕೆಯ ಮಧುಮೇಹ ನಿಯಂತ್ರಣಕ್ಕೆ ಬಂದಿದೆ.
— ಉಜ್ವಲ್ ಪ್ರತೀಕ್ {ಜೆಪಿ ನಗರ, ಬೆಂಗಳೂರು}
ಓಜಸ್ ಹೆಲ್ತ್ ಬೂಸ್ಟರ್ ಸಂಬAಧಿಸಿದ ಎಲ್ಲ ಮಾಹಿತಿಗಾಗಿ ಸಂಪರ್ಕಿಸಿ:
ದೂ: 9480188002 ಅಥವಾ www.ojaas.in ಸಂಪರ್ಕಿಸಿ