Slide
Slide
Slide
previous arrow
next arrow

ಹೈಕಮಾಂಡ್ ಮಟ್ಟದ ನಿವೇದಿತ್ ಆಳ್ವಾ ಒಡನಾಟ ಜಿಲ್ಲೆಯ ಅಭಿವದ್ಧಿಗೆ ಸಿಕ್ಕಿರುವ ವರ

300x250 AD

ಏಕಲವ್ಯ

ಹೊನ್ನಾವರ : ಜಿಲ್ಲೆಯ ರಾಜಕೀಯ ಕ್ಷೇತ್ರದಲ್ಲಿ ಆಳ್ವಾ ಕುಟುಂಬದ ಕೊಡುಗೆ ಪರಿಗಣಿಸಲ್ಪಡುತ್ತದೆ. ಜೋಕಿಂ ಆಳ್ವಾ ರವರ ಸೊಸೆ ಮಾರ್ಗರೇಟ್ ಆಳ್ವಾ ರವರು ರಾಷ್ಟ್ರ ರಾಜಕಾರಣದಲ್ಲಿ ಗುರುತಿಸಿ ಕೊಂಡವರು. ಹಲವು ದಶಕಗಳಿಂದ ಜಿಲ್ಲೆಯಲ್ಲಿ ತಮ್ಮದೇ ಆದ ಹಿಡಿತ ಸಾದಿಸಿಕೊಂಡವರು. ಅವರ ಮುದ್ದಿನ ಮಗ ನಿವೇದಿತ್ ಜಿಲ್ಲೆಯಲ್ಲಿ ತನ್ನ ವಿಶಿಷ್ಟ ನಡವಳಿಕೆಯ ಮೂಲಕ ಕ್ರಿಯಾಶೀಲಗೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿಯೇ ಗಟ್ಟಿ ನೆಲೆ ಊರುತ್ತಿದ್ದಾರೆ.

ಯುವ ನಾಯಕನಾಗಿರುವ ನಿವೇದಿತ್ ಆಳ್ವಾರವರು ರಾಷ್ಟ್ರ ಮತ್ತು ರಾಜ್ಯದ ಬಹುತೇಕ ಎಲ್ಲಾ ಮುಖಂಡರೊಂದಿಗೆ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ಯಲ್ಲಿ ಕುಮಟಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾಗಿ ಪರಾಜಿತ ಗೊಂಡರು, ಕ್ಷೇತ್ರದಲ್ಲೇ ಇದ್ದು, ಅಲ್ಲಿಯ ಜನರ, ಮುಖಂಡರ ಜೊತೆ ನಿಂತು ಕ್ಷೇತ್ರ ಸುತ್ತಾಟ ಮಾಡುತ್ತಿದ್ದಾರೆ. ಪಕ್ಷಕ್ಕಾಗಿ ದುಡಿದವರ, ಕಷ್ಟ ಸುಖದಲ್ಲಿ ಬಾಗಿ ಆಗುತ್ತಿದ್ದಾರೆ. ಸೋಲೇ ಗೆಲುವಿನ ಮೆಟ್ಟಿಲು ಅನ್ನುವ ಹಾಗೆ, ಸೋತರು ಎದೆಗುಂದದೆ ಸೋತ ಜಾಗದಲ್ಲೇ ಗೆದ್ದವರಿಗೆ ಸರಿಸಮಾನವಾಗಿ ಸರಕಾರದ ಯೋಜನೆ ಜನರಿಗೆ ತಲುಪಿಸುತ್ತಿದ್ದಾರೆ.

ಜಿಲ್ಲೆಯ ರಾಜಕೀಯ ಕ್ಷೇತ್ರದಲ್ಲಿ ಕೆಲವೇ ಕೆಲವು ಮುಖಂಡರು ಮಾತ್ರ ಹೈಕಮಾಂಡ್ ಮಟ್ಟದ ಒಡನಾಟ ಇದ್ದವರು. ಅದರಲ್ಲೂ ಯುವ ರಾಜಕಾರಣಿಗಳಲ್ಲಿ ನಿವೇದಿತ ಆಳ್ವಾ ಮೊದಲಿಗರಾಗಿ ಕಾಣುತ್ತಾರೆ. ತಮ್ಮ ಎಳೆಯ ವಯಸ್ಸಿನಲ್ಲಿಯೇ ಅನೇಕ ಗುರುತರ ಜವಾಬ್ದಾರಿ ನಿಭಾಯಿಸಿದ್ದಾರೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಕಾರ್ಯದರ್ಶಿಯಾಗಿ ಕೆಪಿಸಿಸಿ ನೀಡಿದ ಜವಾಬ್ದಾರಿ ನಿಭಾಯಿಸಿದ್ದಾರೆ. ಕೆಪಿಸಿಸಿ ಕಚೇರಿಯ ಕಾರ್ಯದರ್ಶಿಗಳಲ್ಲಿ ಒಬ್ಬನಾಗಿ ಕೆಪಿಸಿಸಿಯಲ್ಲಿ ಎಲ್ಲಾ ಕಾರ್ಯಕ್ರಮಗಳನ್ನು ಆಯೋಜಿಸುವುದರ ಜೊತೆಗೆ ಕೆಪಿಸಿಸಿ ಪರವಾಗಿ ಬಿಸಿಸಿ, ಡಿಸಿಸಿ ಮತ್ತು ಎಐಸಿಸಿಯೊಂದಿಗೆ ವಿವಿಧ ಚಟುವಟಿಕೆಗಳನ್ನು ಸಂಯೋಜಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಪಕ್ಷ ನೀಡಿದ ಇನ್ನೂ ಅನೇಕ ಹುದ್ದೆಗಳಿಗೆ ಚ್ಯುತಿ ಬಾರದ ಹಾಗೆ ಪಕ್ಷ ನಿಷ್ಠೆ ತೋರ್ಪಡಿಸಿದ್ದಾರೆ.

ಪಕ್ಷಕ್ಕಾಗಿ ದುಡಿದ ಅವರ ಶ್ರಮಕ್ಕೆ ಪಕ್ಷ ಅವರಿಗೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹುದ್ದೆ ನೀಡಿ ಅವರ ಜವಾಬ್ದಾರಿ ಹೆಚ್ಚಿಸಿತ್ತು. ಕರ್ನಾಟಕ ಸರ್ಕಾರ (CDA) ನವೆಂಬರ್ 2014 – ಆಗಸ್ಟ್ 2017 ರ ಅವಧಿಗೆ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಗ್ರಾಮೀಣ ಸಂಪರ್ಕ, ಮೂಲಸೌಕರ್ಯ, ಮೀನು ಮಾರುಕಟ್ಟೆಗಳನ್ನು ನಿರ್ಮಿಸಲು ಮತ್ತು ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಕರಾವಳಿ ಜಿಲ್ಲೆಗಳ ವಿವಿಧ ಅಭಿವೃದ್ಧಿ ಅಗತ್ಯಗಳನ್ನು ಪೂರೈಸುವಲ್ಲಿ ಕೆಲಸ ಮಾಡಿದ್ದಾರೆ.

300x250 AD

ರಾಹುಲ್ ಗಾಂಧಿ ಜೊತೆ ಆತ್ಮೀಯ ಒಡನಾಟ :
ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಜೊತೆ ನಿವೇದಿತ ಆಳ್ವಾ ರವರಿಗೆ ಇರುವ ಆತ್ಮೀಯ ಒಡನಾಟ, ಅವರ ರಾಜಕೀಯದ ನಡೆಗೆ ದಾರಿ ದೀಪವಾಗಿದೆ. ಕ್ರಿಯಾಶೀಲ ಚಟುವಟಿಕೆಯಿಂದ ರಾಹುಲ್ ಗಾಂಧಿಯವರ ಆಪ್ತ ಬಳಗದಲ್ಲಿ ಒಬ್ಬರಾಗಿದ್ದಾರೆ.

ಜಿಲ್ಲೆಗೆ ನೆರವಾಗಲಿ :
ದೆಹಲಿ ಮಟ್ಟದ ರಾಜಕೀಯ ಪ್ರಭಾವ ಹೊಂದಿರುವ ನಿವೇದಿತ ಆಳ್ವಾ ರವರಿಂದ ಜಿಲ್ಲೆಯ ಅಭಿವೃದ್ಧಿಗೆ ಅನುಕೂಲ ಅನ್ನುವ ಮಾತು ಸಾರ್ವಜನಿಕ ವಲಯದಲ್ಲಿದೆ. ಜಿಲ್ಲೆ ಅನೇಕ ಕೊರತೆಯಿಂದ ಕೂಡಿದೆ, ನಿವೇದಿತ ಆಳ್ವಾ ರಂತ ಯುವ ನಾಯಕರಿಗೆ ಸೂಕ್ತ ಅವಕಾಶ ಸಿಕ್ಕಲ್ಲಿ ಜಿಲ್ಲೆಗೆ ಕೊಡುಗೆ ಸಾದ್ಯ ಅನ್ನು ವುದು ಜನಾಭಿಪ್ರಾಯವಾಗಿದೆ. ಅಲ್ಪ ಅವಧಿಯ ಕರಾವಳಿ ಪ್ರಾದಿಕಾರದ ಅಧ್ಯಕ್ಷರಾಗಿ ಕೆಲಸಗಾರ ಎಂದು ತೋರಿಸಿಕೊಟ್ಟಿದ್ದಾರೆ. ಜನರು ಸಹಕಾರ ನೀಡಿ ಅಧಿಕಾರ ಕೊಟ್ಟಲ್ಲಿ, ಮತ್ತಷ್ಟು ಅಭಿವೃದ್ದಿ ಪರ ಕೆಲಸಕ್ಕೆ ಅವಕಾಶ ನೀಡಿದಂತಾಗುತ್ತದೆ
.

ನಿಗಮ ಒಲಿಯುವುದೇ ..?
ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಪಕ್ಷ ಜಿಲ್ಲೆಯ ಯುವ ನೇತಾರ ನಿವೇದಿತ ಆಳ್ವಾ ರವರಿಗೆ ನಿಗಮ ದಲ್ಲಿ ಅವಕಾಶ ನೀಡುವುದೇ ಎಂದು ಕಾದುನೋಡಬೇಕಿದೆ. ಕ್ರಿಯಾಶೀಲ ವ್ಯಕ್ತಿತ್ವದ ಯುವ ನೇತಾರನಿಗೆ ಸರಕಾರದಲ್ಲಿ ಸೂಕ್ತ ಜವಾಬ್ದಾರಿ ನೀಡಿದ್ದಲ್ಲಿ ಪಕ್ಷಕ್ಕೂ ಮತ್ತಷ್ಟು ಬಲ ಬರಲಿದೆ ಎನ್ನುವುದು ಅವರ ಅಭಿಮಾನಿಗಳ ಆಶಯವಾಗಿದ. ಅವರ ಒಡನಾಟ, ಕಾರ್ಯದಕ್ಷತೆ ಮುಂದಿನ ದಿನಗಳಲ್ಲಿ ಜಿಲ್ಲೆಯ ರಾಜಕೀಯ ಕ್ಷೇತ್ರದ ಪ್ರಮುಖ ನಾಯಕರಾಗಿ ಹೊರಹೊಮ್ಮಿದರು ಅತಿಸಯೋಕ್ತಿಯಲ್ಲ.

Share This
300x250 AD
300x250 AD
300x250 AD
Back to top