Slide
Slide
Slide
previous arrow
next arrow

ಜನಸಂಕಷ್ಟಕ್ಕೆ ಸ್ಪಂದಿಸುವ ಜನನಾಯಕ ನಿವೇದಿತ್ ಆಳ್ವಾ

300x250 AD
  • ಕೆ. ದಿನೇಶ ಗಾಂವ್ಕರ

ಶಿರಸಿ: ಕಾಂಗ್ರೆಸ್ ಪಕ್ಷದಲ್ಲಿನ ಹಿರಿಯ ಮಹಿಳೆಯೋರ್ವಳು ರಾಜ್ಯ ಸೇರಿದಂತೆ ದೇಶದ ಇನ್ನಿತರ ಭಾಗದಲ್ಲಿ ನಡೆಸಿದ ಕಾರ್ಯ ಸಾಧನೆಯ ಕುರಿತು ಅವಲೋಕನ ನಡೆಸಿದಾಗ ಥಟ್ಟನೆ ನೆನಪಾಗುವುದು ಮಾರ್ಗರೇಟ್ ಆಳ್ವಾ ಕೂಡ ಒಬ್ಬರು. ಅವರ ಪುತ್ರ, ಕಾಂಗ್ರೆಸ್ ಯುವ ಮುಖಂಡ ಹಾಗೂ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ತಮ್ಮದೇ ಬೆಂಬಲಿಗರನ್ನು ಹೊಂದಿದ ನಿವೇದಿತ್ ಆಳ್ವಾ, ಇಂದು ತಮ್ಮ 44ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಆಳ್ವಾ ಅಭಿಮಾನಿಗಳು ಹಾಗೂ ಆಪ್ತರ ಒತ್ತಾಸೆ ಮೇರೆಗೆ ಅವರ ಕುರಿತಾದ ಈ ವರದಿಯನ್ನು ಪ್ರಕಟಿಸಲಾಗಿದೆ.

ದೇಶದ ಪ್ರಭಾವಿ ರಾಜಕೀಯ ಕುಟುಂಬದ ಕುಡಿ ನಿವೇದಿತ್ ಆಳ್ವಾ:

ಕಾಂಗ್ರೆಸ್ ಪಕ್ಷದಲ್ಲಿ 6 ದಶಕಕ್ಕೂ ಅಧಿಕ ಕಾಲ ಶ್ರಮಿಸಿ, ದೇಶದ ವಿವಿಧೆಡೆ ಪಕ್ಷ ಸಂಘಟನೆಯನ್ನೂ ನಡೆಸಿದ ಹಾಗೂ ರಾಜಸ್ಥಾನ ಮತ್ತು ಉತ್ತರಾಖಂಡದಲ್ಲಿ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದವರು ಮಾರ್ಗರೇಟ್ ಆಳ್ವಾ. ಅಲ್ಲದೇ, ಭಾರತದ ಉಪರಾಷ್ಟ್ರಪತಿ ಹುದ್ದೆಗೂ ಸ್ಪರ್ಧಿಸಿದ ಪ್ರಭಾವಿ ರಾಜಕೀಯ ಮಹಿಳೆಯೆಂದೇ ಹೆಸರು ಪಡೆದ ಮಾರ್ಗರೇಟ್ ಅವರ ಪ್ರಥಮ ಪುತ್ರ ನಿವೇದಿತ್ ಆಳ್ವಾ. ಇವರೂ ಸಹ ತಾಯಿಯ ರಾಜಕೀಯ ಮಾರ್ಗದರ್ಶನ ಹಾಗೂ ಇನ್ನಿತರ ಮುಖಂಡರ ಬೆಂಬಲದೊಂದಿಗೆ ಕಳೆದ ಕೆಲವು ವರ್ಷಗಳಿಂದ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಲ್ಲಿ ತಮ್ಮನ್ನು ತೊಡಗಿಸಿಕೊಂಡು, ಹಲವು ಅಭಿವೃದ್ಧಿ ಕಾರ್ಯ ಮಾಡುತ್ತಿದ್ದಾರೆ.

ಕುಮಟಾದಲ್ಲಿ ಈ ಹಿಂದೆ ವಿಧಾನಸಭಾ ಚುನಾವಣೆಗೆ ಸ್ಪರ್ಧೆ:

ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಮಹತ್ವದ ಸ್ಥಾನವಾಗಿದ್ದ ಕುಮಟಾ – ಹೊನ್ನಾವರ ವಿಧಾನಸಭಾ ಚುನಾವಣೆಯಲ್ಲಿ ಸ್ವಪಕ್ಷದ ಹಲವು ಮುಖಂಡರ ಹಾಗೂ ಕಾರ್ಯಕರ್ತರ ಭಿನ್ನಾಭಿಪ್ರಾಯದ ನಡುವೆಯೂ ಇವರು ಸ್ಪರ್ಧಿಸಿದ್ದು, ಶಾಸಕ ದಿನಕರ ಶೆಟ್ಟಿಯವರ ವಿರುದ್ಧ ಸೋಲುಂಡಿದ್ದರು. ಆದರೂ ಸಹ ತಮ್ಮ ಬೆಂಬಲಿಗರ ಸಹಕಾರದಿಂದ ಆತ್ಮತೃಪ್ತಿ ಹೊಂದಿದ್ದ ಇವರು, ಜಿಲ್ಲೆಯಲ್ಲಿಯೇ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ ಎನ್ನುತ್ತಾರೆ ಆಳ್ವಾ ಅವರ ಅಭಿಮಾನಿ ಬಳಗ.

ರಾಜಕೀಯ ಕ್ಷೇತ್ರದಲ್ಲಿ ಸೋಲು-ಗೆಲುವು ಸಾಮಾನ್ಯ:

300x250 AD

ಶಿರಸಿ ಕ್ಷೇತ್ರದಿಂದ ಕುಮಟಾ ಮತಕ್ಷೇತ್ರಕ್ಕೆ ತೆರಳಿ ಸ್ವಪಕ್ಷದ ಈ ಹಿಂದಿನ ಶಾಸಕಿ ಶಾರದಾ ಮೋಹನ ಶೆಟ್ಟಿ ಹಾಗೂ ಇನ್ನಿತರ ಮುಖಂಡರ ಮನಸ್ಥಾಪವಿದ್ದರೂ ಸಹ ಅಂಜದೇ, ಕಣಕ್ಕಿಳಿದ ಆಳ್ವಾ, ಅಲ್ಪ ಮತಗಳ ಅಂತರದಿಂದ ಶಾಸಕ ದಿನಕರ ಶೆಟ್ಟಿ ವಿರುದ್ಧ ಸೋತಿದ್ದಾರೆ. ರಾಜಕೀಯದಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನಸ್ಥಿತಿ ಆಳ್ವಾ ಅವರದ್ದು, ಅವರಿಗೆ ಉತ್ತಮ ಭವಿಷ್ಯವಿದೆ. ಚುನಾವಣೆ ಬಳಿಕ ಸೋಲುಂಡರೂ ನಮ್ಮ ಕ್ಷೇತ್ರದಲ್ಲೇ ಉಳಿದು, ಇಲ್ಲಿನ ಜನರ ಸಂಕಷ್ಟ ಬಗೆಹರಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದಾರೆ ಎನ್ನುತ್ತಾರೆ ಕುಮಟಾ ಹಾಗೂ ಹೊನ್ನಾವರ ಭಾಗದ ಹಲವರು.

ಕಾಂಗ್ರೆಸ್ ಪಕ್ಷದ ಹಿರಿಯ ಧುರೀಣರ ಜೊತೆ ಉತ್ತಮ ಬಾಂಧವ್ಯ:

ರಾಜ್ಯದಲ್ಲಿ ಮಾತ್ರವಲ್ಲದೇ ಕೇಂದ್ರದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ರಾಜ್ಯದ ಹಲವು ಧುರೀಣರ ಜೊತೆ ಉತ್ತಮ ಬಾಂಧವ್ಯವನ್ನು ಹೊಂದಿರುವ ನಿವೇದಿತ್ ಆಳ್ವಾ, ಈಗ ತಮಗೆ ಅಧಿಕಾರವಿಲ್ಲದಿದ್ದರೂ ಸಹ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅವರಿಗೆ ಮುಂದಿನ ಭಾರಿಯೂ ಪಕ್ಷದಿಂದ ಟಿಕೆಟ್ ನೀಡಿದರೆ ಖಂಡಿತ ಗೆಲುವು ಸಾಧಿಸುವುದು ನಿಶ್ಚಿತ ಹಾಗೂ ಈ ಬಾರಿ ನಿಗಮ ಮಂಡಳಿಯಲ್ಲಿ ಉತ್ತಮ ಸ್ಥಾನ ನೀಡಬೇಕು ಎಂದು ಅವರ ಆಪ್ತರ ಬಳಗದಲ್ಲಿ ಚರ್ಚೆಯಾಗುತ್ತಿದೆ. ಮತ್ತು ಅವರ ಹಿತೈಷಿಗಳ ಒತ್ತಾಸೆಯೂ ಕೂಡ.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಹಲವು ಅಭಿವೃದ್ಧಿ ಕಾರ್ಯ:

ಅಂದಿನ ರಾಜ್ಯ ಸರಕಾರ 21 ತಿಂಗಳ ಕಾಲ ನೀಡಿದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅವಧಿಯಲ್ಲಿ ನೂರಕ್ಕೂ ಅಧಿಕ ಕಾಮಗಾರಿ ಕೈಗೊಂಡಿದ್ದಾರೆ. ಇವರು ಸರಕಾರಕ್ಕೆ ಹಲವು ಯೋಜನೆಗಳ ಪ್ರಸ್ತಾವನೆ ಇಟ್ಟು ಕಾಮಗಾರಿ ಜಾರಿಗೆ ತಂದಿದ್ದು, ಸಾಮಾಜಿಕ ನ್ಯಾಯದಡಿ ಪಕ್ಷ ಬೇಧವಿಲ್ಲದೇ ಜನರ ಬಹುಕಾಲದ ಬೇಡಿಕೆಯನ್ನು ಈಡೇರಿಸಿದ್ದಾರೆ. ಅವರ ಅವಧಿಯಲ್ಲಿ 14 ಆಧುನಿಕ ಮೀನು ಮಾರುಕಟ್ಟೆ ನಿರ್ಮಿಸಿದ್ದು, ಬೆಳ್ತಂಗಡಿ ಹಾಗೂ ಭಟ್ಕಳದಲ್ಲಿ ಮೀನು ವರ್ತಕರಿಗೆ ಅನುಕೂಲ ಮಾಡಿದ್ದಾರೆ. 70 ಕಡೆ ಸೇತುವೆ, ತೂಗು ಸೇತುವೆ ನಿರ್ಮಾಣ ಮಾಡಿದ್ದು, ಸರಿ ಸುಮಾರು 25 ಕೋಟಿ ರೂ. ಮೊತ್ತದಲ್ಲಿ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಅಭಿವೃದ್ಧಿ ಕಾಮಗಾರಿ ನೆರವೇರಿಸಿದ್ದಾರೆ.

ಒಟ್ಟಾರೆ ಯುವ ಧುರಿಣ ನಿವೇದಿತ್ ಆಳ್ವಾನಂತಹ ವ್ಯಕ್ತಿಗಳು ರಾಜಕೀಯ ಕ್ಷೇತ್ರದಲ್ಲಿ ಮುಂದುವರೆಯಲು ಕಾಂಗ್ರೆಸ್ ಹೈಕಮಾಂಡ್, ರಾಜ್ಯದ ಮುಖಂಡರು ಸಹಕಾರ ನೀಡಬೇಕು. ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಪಕ್ಷ ಜಿಲ್ಲೆಯ ಯುವ ನೇತಾರ ನಿವೇದಿತ ಆಳ್ವಾಗೆ ನಿಗಮದಲ್ಲಿ ಅವಕಾಶ ನೀಡಬೇಕು ಹಾಗೂ ಆ ಮೂಲಕ ಇವರಿಗೆ ಜಿಲ್ಲೆಯ ಜನರ ಕಷ್ಟಕ್ಕೆ ಒದಗಲು ಉತ್ತಮ ವೇದಿಕೆ ನೀಡಬೇಕು ಎಂಬುದು ಇವರ ಅಭಿಮಾನಿಗಳು ಹಾಗೂ ಆಪ್ತರ ಹಿರಿಯಾಸೆಯಾಗಿದೆ.

  • ನಿವೇದಿತ್ ಆಳ್ವಾ ಉತ್ತಮ ಗುಣ ಹಾಗೂ ನಡೆತ ಹೊಂದಿದ ವ್ಯಕ್ತಿಯಾಗಿದ್ದು, ರಾಜ್ಯಕ್ಕೇ ಮಾದರಿ ಯುವ ನಾಯಕರಾಗಿ ಹೊರಹೊಮ್ಮುವ ಸಾಮರ್ಥ್ಯ ಅವರಿಗಿದೆ. ಪಕ್ಷ ಸಂಘಟನೆಯಲ್ಲೂ ನಿಪುಣತೆ ಹೊಂದಿದ್ದು, ಎಲ್ಲರನ್ನೂ ಒಗ್ಗೂಡಿಸಿಕೊಂಡು ನಡೆಯುವ ಮನೋಭಾವನೆ ಅವರಲ್ಲಿದೆ. ನಮ್ಮ ಸರ್ಕಾರ ನಿಗಮ ಅಥವಾ ಇನ್ನಿತರ ಹುದ್ದೆಗೆ ಅವರಿಗೆ ಅವಕಾಶ ನೀಡಿದರೆ ಉತ್ತಮವಾಗಿ ನಿಭಾಯಿಸಬಲ್ಲರು.
    -ಹೊನ್ನಪ್ಪ ನಾಯಕ {ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಜಿ.ಪಂ ಮಾಜಿ ಸದಸ್ಯ ಹಾಗೂ ಹಿರಿಯ ಧುರೀಣ, ಕುಮಟಾ}
  • ಮಾರ್ಗರೇಟ್ ಆಳ್ವಾ ಅವರಿಗೆ ತಕ್ಕ ಮಗನಾಗಿ, ಅಧಿಕಾರದಲ್ಲಿರದಿದ್ದರೂ ಸಮಾಜಕ್ಕೆ ಹಾಗೂ ಸಂಕಷ್ಟಕ್ಕೀಡಾದ ಜನತೆಗೆ ಸಹಾಯ ಮಾಡುವ ಗುಣ ಅವರಲ್ಲಿದೆ. ನೊಂದವರ ಪಾಲಿಗೆ ಬೆಳಕಾಗುವ ಅವರಿಗೆ ಉತ್ತಮ ಸ್ಥಾನಮಾನ ಲಭಿಸಬೇಕು ಎಂಬುದು ನಮ್ಮೆಲ್ಲರ ಆಶಯ.
    – ರಾಮಕೃಷ್ಣ ಗೌಡ {ಪ್ರಗತಿಪರ ಕೃಷಿಕ}
Share This
300x250 AD
300x250 AD
300x250 AD
Back to top