ಕುಮಟಾ: ಪಟ್ಟಣದ ಪಿಕ್ ಅಪ್ ಬಸ್ ಸ್ಟ್ಯಾಂಡ್‌ನಿಂದ ಬಂದರ್ ರೋಡ್‌ವರೆಗಿನ ಚರಂಡಿಗಳಲ್ಲಿ ಕೊಳಚೆ ನೀರು ತುಂಬಿಕೊಂಡು ಗಬ್ಬೆದ್ದು ನಾರುತ್ತಿದೆ. ಚರಂಡಿಗಳಿಗೆ ನೇರವಾಗಿ ಕೊಳಚೆ ನೀರು ಬಿಡುವ ಹೋಟೆಲ್‌ಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಪಿಕ್ ಅಪ್ ಬಸ್ ಸ್ಟ್ಯಾಂಡ್‌ನಿಂದ ಬಂದರ್ ರೋಡ್ ವರೆಗಿನ ಗಟಾರನಲ್ಲಿ ಕೊಳಚೆ ನೀರು ತುಂಬಿಕೊಂಡು ದುರ್ವಾಸನೆಗೆ ಕಾರಣವಾಗಿದೆ. ಪಿಕ್‌ಅಪ್ ಬಸ್ ಸ್ಟ್ಯಾಂಡ್ ಸೇರಿದಂತೆ ಆ ಭಾಗದಲ್ಲಿರುವ ಬಹುತೇಕ ಹೋಟೆಲ್‌ಗಳು ಕೊಳಚೆ ನೀರನ್ನು ನೇರವಾಗಿ ಗಟಾರ್‌ಕ್ಕೆ ಬಿಡುವುದರಿಂದ ದುರ್ವಾಸನೆಗೆ ಕಾರಣವಾಗಿದೆ. ಹೋಟೆಲ್‌ಗಳ ಹೊಲಸು ನೀರು ಗಟಾರ್‌ನಲ್ಲಿ ನಿಂತು, ಅಲ್ಲಿಯೇ ಕೊಳೆತು ಗಬ್ಬು ನಾರುವಂತಾಗಿದೆ. ಇದರಿಂದ ಆ ರಸ್ತೆಯಲ್ಲಿ ಓಡಾಡುವ ಜನರು ದುರ್ವಾಸನೆಯನ್ನು ಸಹಿಸಿಕೊಂಡು ಸಂಚರಿಸುವಂತಾಗಿದೆ.
ಈ ಬಗ್ಗೆ ಸ್ಥಳೀಯರು ಪುರಸಭೆಗೆ ಮೌಖಿಕ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಹಾಗಾಗಿ ಪುರಸಭೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ, ಈ ಭಾಗದ ಗಟಾರ್‌ಕ್ಕೆ ಕಲುಷಿತ ನೀರು ಬಿಡುವ ಹೋಟೆಲ್‌ಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಸ್ತಳೀಯ ರಿಕ್ಷಾ ಚಾಲಕ ಮಾಲಕರು ಮತ್ತು ಟ್ಯಾಂಪೊ ಚಾಲಕ, ಮಾಲಕರು ಮತ್ತು ಸ್ಥಳೀಯ ನಾಗರಿಕರು ಎಚ್ಚರಿಸಿದ್ದಾರೆ.