ಹೊನ್ನಾವರ : ಸ್ವಸಹಾಯ ಸಂಘದ ಸದಸ್ಯರು ಸೂಕ್ತ ತರಬೇತಿ, ಪರಸ್ಪರ ಸಹಕಾರ, ಬದ್ಧತೆಯಿಂದ ಸ್ವಉದ್ಯೋಗ ಕೈಗೊಂಡರೆ ಆರ್ಥಿಕ ಸ್ವಾವಲಂಬನೆ ಗಳಿಸಲು ಸಾಧ್ಯ ಎಂದು ಹೊನ್ನಾವರ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ನಾಯ್ಕ ಹೇಳಿದರು.
ಅವರು ಎನ್.ಆರ್.ಎಲ್.ಎಂ. ಯೋಜನೆಯಡಿ ತಾಲೂಕಿನ ಕರ್ಕಿ ಗ್ರಾಮ ಪಂಚಾಯಿತ ಹೆಗಡೆ ಹಿತ್ಲದಲ್ಲಿ ಶ್ರೀದೇವಿ ಸ್ತ್ರೀಶಕ್ತಿ ಗುಂಪಿನ ಸದಸ್ಯರು ಕೈಗೊಂಡ ರೊಟ್ಟಿ ತಯಾರಿಕೆ ಮತ್ತು ಹಿಟ್ಟಿನ ಗಿರಣಿ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ಸರ್ಕಾರ ಸ್ವಉದ್ಯೋಗ ಕೈಗೊಳ್ಳುವ ಸಂಘದ ಸದಸ್ಯರಿಗೆ ಸಮುದಾಯ ಬಂಡವಾಳ, ನಿಧಿ ಸಾಲ, ವಸತಿ ಸಹಿತ ಉಚಿತ ತರಬೇತಿ, PMFME ಅಡಿ ಸಹಾಯಧನ ನೀಡುತ್ತಿದ್ದು ಪ್ರಯೋಜನ ಪಡೆದುಕೊಂಡು ಸಬಲೀಕರಣ ಹೊಂದಬಹುದಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಹರಿಶ್ಚಂದ್ರ ನಾಯ್ಕ, ಪಿಡಿಓ ಕಿರಣ್ ಕುಮಾರ್ ಎಂ.ಜಿ., ಯೋಜನೆಯ ಜಿಲ್ಲಾ ವ್ಯವಸ್ಥಾಪಕ ಸಚಿನ್ ನಾಯ್ಕ್, ತಾಲೂಕು ಘಟಕದ ಸಿಬ್ಬಂದಿಗಳಾದ ಕುಮಾರಿ ಪದ್ಮಾವತಿ ,ಬಾಲಚಂದ್ರ ನಾಯ್ಕ ವಿಶಾಲ ನಾಯ್ಕ ಉಪಸ್ಥಿತರಿದ್ದರು.