ಜೊಯಿಡಾ: ಜಿಲ್ಲೆಯ ಅಭಿವೃದ್ಧಿಗೆ ಮತ್ತು ಜನಜೀವನಕ್ಕೆ ಮಾರಕವಾಗಿರುವ ಕಸ್ತೂರಿ ರಂಗನ್ ವರದಿ ವಿರೋಧಿಸಿ ಡಿ.2 ರಂದು ಜರುಗಲಿರುವ ಕಸ್ತೂರಿ ರಂಗನ್ ವರದಿ ವಿರೋಧ ರ‍್ಯಾಲಿಗೆ ತಾಲೂಕಿನಾದ್ಯಂತ ಮನೆಗೊಬ್ಬರಂತೆ ಭಾಗವಹಿಸಲು ನಿರ್ಣಯಿಸಲಾಯಿತು.
ಡಿ.2 ರಂದು ಶಿರಸಿಯಲ್ಲಿ ಜರುಗುವ ಕಸ್ತೂರಿ ರಂಗನ್ ವಿರೋಧ ರ‍್ಯಾಲಿಯ ಪೂರ್ವಭಾವಿ ಸಭೆಯಲ್ಲಿ, ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅಧ್ಯಕ್ಷತೆಯಲ್ಲಿ ನ.೨೦, ಸೋಮವಾರದಂದು ಜೊಯಿಡಾ ಕುಣಬಿ ಭವನದಲ್ಲಿ ಜರುಗಿದ ಬೃಹತ್ ಸಭೆಯಲ್ಲಿ ನಿರ್ಣಯಿಸಲಾಯಿತು. ಜೊಯಿಡಾ ತಾಲೂಕಿನಲ್ಲಿ 91 ಹಳ್ಳಿಗಳು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಣೆ ಆಗಿರುವುದರಿಂದ, ಅರಣ್ಯವಾಸಿ ಮತ್ತು ಆದಿವಾಸಿಗಳಿಗೆ ನೈಜ ಜೀವನಕ್ಕೆ ಧಕ್ಕೆ ಉಂಟಾಗುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಹೋರಾಟಗಾರ ಸುಭಾಷ್ ಗಾವಡಾ ಮಾತನಾಡುತ್ತಾ ನಮ್ಮ ಜೀವನದ ಬದುಕಿಗಾಗಿ ಕಸ್ತೂರಿ ರಂಗನ್ ವಿರೋಧಿಸುವುದು ಅನಿವಾರ್ಯವೆಂದು ಅವರು ಹೇಳಿದರು. ಸಭೆಯಲ್ಲಿ ಶಾಶ್ತಿ ಉಳವಿ, ಮಾಬ್ಲ ಕುಂಡಳಕರ, ಸಂತೋಷ ಗಾವಡಾ, ಸಾವುಕಾಳೆ ಭೀರಂಪಾಲಿ, ರತ್ನಾಕರ ಗಾವಡಾ, ದೀಲಿಪ್ ಗಾವಡಾ, ಸಂತೋಷ ಗಾವಡಾ, ಬುದವಾ ಕಾಳೆಕರ್ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲೆಗೆ ಮಾರಕ:
ಜಿಲ್ಲೆಯ ಅಭಿವೃದ್ಧಿ, ಜನಜೀವನಕ್ಕೆ ಹಾಗೂ ಮೂಲಭೂತ ಸೌಕರ್ಯಕ್ಕೆ ಕಸ್ತೂರಿ ರಂಗನ್ ಜ್ಯಾರಿಗೆ ಬಂದಲ್ಲಿ ಜಿಲ್ಲೆಗೆ ಮಾರಕವಾಗುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.