Slide
Slide
Slide
previous arrow
next arrow

ಚರ್ಚ್ ರಸ್ತೆಯಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರುವಂತೆ ತಹಸೀಲ್ದಾರ್ ಮನವಿ

300x250 AD

ಹೊನ್ನಾವರ : ತಾಲೂಕಿನ ಚರ್ಚ್ ರಸ್ತೆ (ಬಿಕಾಸಿ ತಾರಿ) ಯಲ್ಲಿ ಪ್ರವಾಸಿಗರಿಂದ ಆಗುತ್ತಿರುವ ವಾಹನ ದಟ್ಟಣೆ ನಿಯಂತ್ರಣ ಮಾಡಿಕೊಡುವ ಮತ್ತು ಪ್ರವಾಸಿಗರು ಬರುವುದನ್ನು ಬಂದ್ ಮಾಡಬೇಕು ಎಂದು ಪಟ್ಟಣದ ಚರ್ಚ ರಸ್ತೆಯ ನಿವಾಸಿಗಳಾದ ಹತ್ತು ಸಮಸ್ತರ ಖಾರ್ವಿ ಸಮಾಜದವರು ತಹಸೀಲ್ದಾರವರಿಗೆ ಮನವಿ ನೀಡಿ ಆಗ್ರಹ ಪಡಿಸಿದ್ದಾರೆ.

ಪಟ್ಟಣದ ಚರ್ಚ್ ರಸ್ತೆ(ಬಿಕಾಸಿ ತಾರಿ) ಯಲ್ಲಿ ಪ್ರವಾಸಿಗರಿಂದ ವಿಪರೀತ ವಾಹನ ದಟ್ಟಣೆ ಆಗುತ್ತಿದ್ದು, ಶರಾವತಿ ನದಿಯ ವೀಕ್ಷಣೆ ಹಾಗೂ ಬೋಟಿಂಗ್ ಮತ್ತು ಫ್ರೀ-ವೆಡ್ಡಿಂಗ್ ಶೂಟಿಂಗ್ ಮಾಡಲು ವಿವಿಧೆಡೆಯಿಂದ ಪ್ರವಾಸಿಗರು ಬರುತ್ತಿದ್ದಾರೆ. ಆದರೆ ಚರ್ಚರಸ್ತೆ (ಬಿಕಾಸಿ ತಾರಿ) ರಸ್ತೆ ಅತೀ ಕಿರಿದಾದ ರಸ್ತೆಯಾಗಿದ್ದು ಮತ್ತು ಭಾರಿ ವಾಹನಗಳು, ಟೂರಿಸ್ಟ ಬಸ್ಸುಗಳು, ಕಾರುಗಳು, ಟಿ.ಟಿ.ವಾಹನಗಳು ಹೀಗೆ ರಸ್ತೆಯಲ್ಲಿ ವಾಹನಗಳ ದಟ್ಟಣೆಯಿಂದ ವಾಹನ ಅಪಘಾತಗಳು ಪದೇ-ಪದೇ ಆಗುತ್ತಿದ್ದು, ಈ ಸ್ಥಳವು ಅಪಘಾತವಲಯಗಳಾಗಿ ನಿರ್ಮಾಣವಾಗುವುದರೊಂದಿಗೆ ವಾಹನ ಚಾಲಕರೊಂದಿಗೆ ಪದೇ- ಪದೇ ಜಗಳಗಳಾಗುತ್ತಿರುವುದರಿಂದ ಇಲ್ಲಿಯ ನಿವಾಸಿಗಳಿಗೆ ತುಂಬಾ ಕಿರಿ-ಕಿರಿಯಾಗಿರುತ್ತದೆ.

ವಿಪರೀತ ವಾಹನಗಳು ತಿರುಗಾಡುವುದರಿಂದ ರಸ್ತೆಗಳೆಲ್ಲಾ ಹೊಂಡಗಳಾಗಿವೆ ಮತ್ತು ರಸ್ತೆಯ ಅಕ್ಕ-ಪಕ್ಕದಲ್ಲಿ ವಾಸದ ಮನೆಗಳಿದ್ದು, ಮನೆಯ ಒಳಗೆಲ್ಲಾ ಧೂಳು ತುಂಬಿ ಹೋಗಿರುತ್ತದೆ. ರಸ್ತೆಯ ಪಕ್ಕದಲ್ಲಿರುವ ಮನೆಗಳಲ್ಲಿರುವ ವಯಸ್ಸಾದವರು ಮತ್ತು ಚಿಕ್ಕ ಮಕ್ಕಳಿಗೆ ಧೂಳಿನಿಂದ ತುಂಬಿರುವ ಪರಿಸರದಿಂದ ಆರೋಗ್ಯದಲ್ಲಿ ಸಮಸ್ಯೆಗಳಾಗುತ್ತಿದೆ. ರಸ್ತೆಗೆ ಹೊಂದಿಕೊಂಡು ಹಿರಿಯ ಪ್ರಾಥಮಿಕ ಶಾಲೆ, ಮತ್ತು ಚರ್ಚ್ ಇರುವದರಿಂದ ಮಕ್ಕಳಿಗೂ ಹಾಗೂ ಚರ್ಚಿನಲ್ಲಿ ಬರುವವರೆಗೂ ತುಂಬಾ ಕಿರಿ-ಕಿರಿಯಾಗುತ್ತಿದೆ. ಮನೆಯಿಂದ ಹೊರೆಗೆ ಹೋಗಬೇಕಾದರೆ ಇಕ್ಕಟ್ಟಾದ ರಸ್ತೆಯಲ್ಲಿ ವಾಹದಟ್ಟಣೆಯಿಂದ ಶಬ್ದ ಮಾಲಿನ್ಯದೊಂದಿಗೆ ಜೀವವನ್ನು ಕೈಯಲ್ಲಿ ಹಿಡಿದು ತಿರುಗಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರವಾಸಿಗಳು ಪ್ಲಾಸ್ಟಿಕ್ ಬಾಟಲಿ ಮತ್ತು ತಿಂಡಿ ತಿನಿಸುಗಳು ಲ್ಯಾಪರಗಳನ್ನು ಹಾಗೂ ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗುತ್ತಿದ್ದಾರೆ. ಇದರಿಂದ ದನ-ಕರುಗಳು ಮತ್ತು ನಾಯಿಗಳ ಕಾಟ ಹೆಚ್ಚಾಗಿ ಪರಿಸರ ಮಾಲಿನ್ಯ ಉಂಟಾಗಿರುತ್ತದೆ. ಇಲ್ಲಿ ಹೋಮ್ ಸ್ಟೇ ನಿರ್ಮಿಸಿಲಾಗಿದೆ. ಯಾರು ಪರವಾನಿಗೆ ಕೊಟ್ಟಿದ್ದು ಗೊತ್ತಿಲ್ಲಾ. ಬೇರೆ ಊರಿನಿಂದ ಬಂದು ವಾಸಮಾಡಿ ಏನಾದರೂ ಆದರೆ ಯಾರು ಜವಾಬ್ದಾರರಾಗಿರುತ್ತಾರೆ. ಆದ್ದಲ್ಲಿ ಈ ಬಗ್ಗೆ ಯಾವುದೇ ಇಲಾಖೆಯವರು ಕಾಳಜಿ ವಹಿಸಕೊಂಡಿದ್ದಾಗಲೀ, ಘಮನ ಹರಿಸಿದಾಗಲೀ, ಸೂಕ್ತ ಕ್ರಮ ವಹಿಸಿದ್ದಾಗಲೀ ಇರುವುದಿಲ್ಲ.

300x250 AD

ಚರ್ಚರೋಡ ಇದು ರೆಸಿಡೆನ್ಸಿ ಏರಿಯಾ ಆಗಿರುವುದರಿಂದ ವಾಹನದ ಧೂಳಿನಿಂದ ವಯಸ್ಕರು ಮತ್ತು ಮಕ್ಕಳು ಇರುವುದರಿಂದ (Air pollution) ರೋಗಗಳು ಉತ್ಪನ್ನ ಆಗುವ ಸಂಭವ ಇರುತ್ತದೆ. ಕ್ಯಾನ್ಸರ್, ಅಸ್ತಮಾ, ಟಿ.ಬಿ. ಡೆಂಗ್ಯೂ ಕಾಯಿಲೆ ಬರುವುದರಿಂದ ವ್ಯಾಜ್ಯ ವಸ್ತುಗಳು ರೋಗ ಉತ್ಪನ್ನ ಸಂಭವವಿದ್ದು, ತಾವುಗಳು ಬೋಟಿಂಗ್ ಗೆ ಬೇರೆ ರಸ್ತೆ ವ್ಯವಸ್ಥೆಯನ್ನು ಮಾಡಬೇಕಾಗಿ ವಿನಂತಿ ಮಾಡಿಕೊಂಡಿದ್ದಾರೆ.

ಈ ರಸ್ತೆಯಲ್ಲಿ ಪ್ರವಾಸಿಗಳ ಯಾವುದೇ ವಾಹನ ತರದಂತೆ, ಸೂಕ್ತ ಕ್ರಮ ವಹಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಮಾರ್ಗದರ್ಶನ ನೀಡಬೇಕು ಎಂದು ತಹಸೀಲ್ದಾರ್ ರವರಿಗೆ ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ. ಯಾವುದೇ ಕ್ರಮ ಕೈಗೊಳ್ಳದಿದ್ದಲ್ಲಿ ಅನಿವಾರ್ಯವಾಗಿ ನಾವು ನಮ್ಮ ಸಂಘಟನೆ ಮತ್ತು ಸಾರ್ವಜನಿಕರೊಂದಿಗೆ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪ.ಪಂ. ಸದಸ್ಯರಿಂದ ಬೋಟಿಂಗ್ ದಂಧೆಗೆ ಸಹಾಯ :
ಹೊನ್ನಾವರ ಪಟ್ಟಣ ಪಂಚಾಯತಿಯ ಇಲ್ಲಿಯ ವಾರ್ಡ ಮೆಂಬರರು ಸಹ ಬೋಟಿಂಗ್ ದಂಧೆಯನ್ನು ಮಾಡುತ್ತಿರುವವರಿಗೆ ಸಹಾಯ ಮಾಡುತ್ತಿರುವುದರಿಂದ ಇಲ್ಲಿಯ ಪರಿಸ್ಥಿತಿ ಬಿಗಡಾಯಿಸಿದ್ದು ” ಬೇಲಿಯೇ ಎದ್ದು ಹೊಲ ಮೇಯ್ದಂತೆ” ಆಗುತ್ತಿದೆ ಎಂದು ಸ್ಥಳೀಯ ಪ ಪಂ. ಸದಸ್ಯರ ನಡೆಯ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

Share This
300x250 AD
300x250 AD
300x250 AD
Back to top