ಹೊನ್ನಾವರ : ತಾಲೂಕಿನ ಅನಂತವಾಡಿ ಗ್ರಾಮ ಪಂಚಾಯತ ವ್ಯಾಪ್ತಿಯ ಕೋಟ -ತುಂಬೆಬಿಳು ಗ್ರಾಮದ LC-68 ಕೊಂಕಣ ರೈಲ್ವೆ ಗೇಟಿನಿಂದಾಗುತ್ತಿರುವ ಸಮಸ್ಯೆ ಪರಿಹಾರಕ್ಕಾಗಿ ಕೋಟ – ತುಂಬೆಬಿಳು – ಅನಂತವಾಡಿ ರೈಲ್ವೆ ಗೇಟ್ ಮೇಲ್ಸೇತುವೆ ಹೋರಾಟ ಸಮಿತಿಯವರು ಹೊನ್ನಾವರ ಉಳಿಸಿ – ಬೆಳೆಸಿ ಹಾಗೂ ಇನ್ನಿತರ ಸಂಘಟನೆಗಳೊಂದಿಗೆ ಇದೇ ಬರುವ ನವೆಂಬರ್ 23 ರಂದು ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.
ಪ್ರಥಮವಾಗಿ ಇದೇ ಬರುವ ನವೆಂಬರ್ 23 ರಂದು ಹೊನ್ನಾವರ ಶರಾವತಿ ಸರ್ಕಲ್ ನಿಂದ ಕಾಲ್ನಡಿಗೆ ಮೂಲಕ ತಹಸೀಲ್ದಾರರಿಗೆ ಶೀಘ್ರವಾಗಿ ರೈಲ್ವೆ ಗೇಟ್ ಮೇಲ್ಸೇತುವೆ ಮಾಡುವ ಬಗ್ಗೆ ಮನವಿ ನೀಡುವುದು. ಇಲ್ಲದೆ ಹೋದಲ್ಲಿ ಮುಂಬರುವ ಲೋಕಸಭಾ ಚುನಾವಣೆ ಬಹಿಷ್ಕರಿಸುವುದು ಹಾಗೂ ಮುಂದಿನ ದಿನದಲ್ಲಿ ಎಲ್ಲ ಅಧಿಕಾರಿಗಳಿಗೆ ಮನವಿ ನೀಡಿ ರೈಲು ತಡೆ ನಡೆಸುವುದು ಎಂದು ನಿರ್ಣಯ ಕೈಗೊಂಡಿರುತ್ತೇವೆ ಎಂದು ಕೋಟ – ತುಂಬೆಬಿಳು – ಅನಂತವಾಡಿ ರೈಲ್ವೆ ಗೇಟ್ ಮೇಲ್ಸೇತುವೆ ಹೋರಾಟ ಸಮಿತಿಯವರು ತಿಳಿಸಿದ್ದಾರೆ.