Slide
Slide
Slide
previous arrow
next arrow

ಕಾನೂನಿನ ಸಾಮಾನ್ಯ ಜ್ಞಾನ ಅವಶ್ಯ: ನ್ಯಾ.ದೇಶಭೂಷಣ ಕೌಜಲಗಿ

300x250 AD

ಹಳಿಯಾಳ: ಮಕ್ಕಳು ತಮ್ಮ ಹಕ್ಕು ಹಾಗೂ ಸಾಮಾಜಿಕ ಕಾರ್ಯವನ್ನು ಕೈಗೊಳ್ಳಲು ಕಾನೂನಿನ ಸಾಮಾನ್ಯ ಜ್ಞಾನ ಅವಶ್ಯವಾಗಿದೆ. ಶಿಕ್ಷಣ ಮಕ್ಕಳ ಸರ್ವಾಂಗೀಣ ಅಭಿವದ್ಧಿಗೆ ಪೂರಕವಾಗಿದೆ ಎಂದು ಸಿವಿಲ್ ನ್ಯಾಯಾಧೀಶ ದೇಶಭೂಷಣ ಕೌಜಲಗಿ ಹೇಳಿದರು.

ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳಿಗಾಗಿ ಪಟ್ಟಣದ ಅಂಬೇಡ್ಕರ ಸಭಾಭವನದಲ್ಲಿ ಆಯೋಜಿಸಿದ್ದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣ ಮಕ್ಕಳ ಸರ್ವಾಂಗೀಣ ಅಭಿವದ್ಧಿಗೆ ಪೂರಕವಾಗಿದೆ ಎಂಬುವ ಬಗ್ಗೆ ಇಂದಿನ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವದು ಅವಶ್ಯವಾಗಿದೆ. ವಿದ್ಯಾಥಿಗಳಿಗೆ ಸಾಧಕರ ಜೀವನದ ಬಗ್ಗೆ ಆಸಕ್ತಿ ಮೂಡಿಸುವ ಕಾರ್ಯವನ್ನು ಕೆಗೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಸರ್ವವರು ಮಾನವೀಯ ವೌಲ್ಯಗಳನ್ನು ಮೆಗೂಡಿಸಕೊಳ್ಳಬೇಕು ಎಂದರು.

300x250 AD

ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದ್ ಮಹಾಲೆ ಮಾತನಾಡಿ, ರಾಷ್ಟ್ರದ ಮುಂದಿನ ಭವಿಷ್ಯ ಇಂದಿನ ಶಾಲಾ ಕೊಠಡಿಗಳಲ್ಲಿ ನಿರ್ಮಾಣಗೊಳ್ಳುತ್ತಿದೆ. ಆದ್ದರಿಂದ, ಮಕ್ಕಳು ಸರಕಾರದ ಯೋಜನೆಗಳನ್ನು ಸದುಪಯೋಗ ಪಡೆಸಿಕೊಂಡು ಉತ್ತಮ ಶಿಕ್ಷಣವನ್ನು ಪಡೆಯುವ ಮೂಲಕ ಉತ್ತಮ ಪ್ರಜೆಯಾಗಬೇಕು ಎಂದರು.

ಮಕ್ಕಳ ಹಕ್ಕುಗಳ ಕುರಿತು ವಕೀಲ ಬಸಣ್ಣಾ ಪಟ್ಟೇಕರ ಹಾಗೂ ಮೋಟಾರ್ ವಾಹನ ಕಾಯ್ದೆ ಕುರಿತು ವಕೀಲ ಸದಾನಂದ ಗುಪಿತ ಉಪನ್ಯಾಸ ನೀಡಿದರು. ಸಹಾಯಕ ಸರ್ಕಾರಿ ವಕೀಲ ಪ್ರಕಾಶ ಲಂಬಾಣಿ, ವಕೀಲರ ಸಂಘದ ಅಧ್ಯಕ್ಷ ಸುಂದರ ಕಾನ್ಕಾತ್ರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಡಾ.ಲಕ್ಷ್ಮಿದೇವಿ ಎಸ್. ಸೇರಿ ಹಲವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top