Slide
Slide
Slide
previous arrow
next arrow

ತಂದೆ-ತಾಯಿಯಂತೆ ಮಾತೃ ಭಾಷೆಯನ್ನೂ ಮರೆಯಬಾರದು: ಸುಬ್ರಾಯ ಮತ್ತಿಹಳ್ಳಿ

300x250 AD

ಸಿದ್ದಾಪುರ: ತಂದೆ- ತಾಯಿಯನ್ನು ಎಂದೂ ಮರೆಯದಂತೆ ಮಾತೃ ಭಾಷೆಯನ್ನು ಎಂದೂ ಮರೆಯಬಾರದು ಎಂದು ಹಿರಿಯ ಸಾಹಿತಿ ಸುಬ್ರಾಯ ಮತ್ತಿಹಳ್ಳಿ ಹೇಳಿದರು.

ತಾಲೂಕಿನ ಹಾರ್ಸಿಕಟ್ಟಾ ಗಜಾನನೋತ್ಸವ ಸಮಿತಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಕನ್ನಡ ಸಾಹಿತ್ಯ ಪರಷತ್ತು ಹಾಗೂ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ ಹಾರ್ಸಿಕಟ್ಟಾ ಇವುಗಳ ಆಶ್ರಯದಲ್ಲಿ ನಡೆದ ಕನ್ನಡ ಕಾರ್ತೀಕ ಅನುದಿನ ಅನುಸ್ಪಂದನದ ಅಂಗವಾಗಿ ಕರ್ನಾಟಕ ಏಕೀಕರಣ ಅವಲೋಕನ ಹಾಗೂ ವಿದ್ಯಾರ್ಥಿ ಕವಿಗೋಷ್ಠಿ ಉದ್ಘಾಟಿಸಿ ಅವರು ಶನಿವಾರ ಮಾತನಾಡಿದರು.ಯಾವ ಭಾಷೆಗೂ ವಿರೋಧ ಬೇಡ. ಸಾಧನೆಯ ಎತ್ತರಕ್ಕೆ ಏರುವುದಕ್ಕೆ ಎಲ್ಲರಿಗೂ ಅವಕಾಶ ಇದೆ. ನಿತ್ಯ ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದು ಹೇಳಿದರು.

ಏಕೀಕರಣ ಅವಲೋಕನದ ಕುರಿತು ಮಾತನಾಡಿದ ಉಪನ್ಯಾಸಕ ರತ್ನಾಕರ ನಾಯ್ಕ ಭಾಷೆಯ ಮೇಎಲ ಹಿಡಿತ ಹಾಗೂ ಭಾಷೆಯ ಮೇಲೆ ಅಭಿಮಾನ ಬೇಕು. ಏಕಿಕರಣ ಪ್ರಜ್ಞೆ ಎಲ್ಲರಲ್ಲೂ ಇರಬೇಕು. ಹೇರಿಕೆ ಭಾಷೆ  ಬಗ್ಗೆ ಎಚ್ಚರವಹಿಸಬೇಕು ಎಂದು ಹೇಳಿ ಏಕೀಕರಣದ ಕುರಿತು ಸಮಗ್ರ ಮಾಹಿತಿ ನೀಡಿದರು.

300x250 AD

ತಾಲೂಕು ಕಸಾಪ ಅಧ್ಯಕ್ಷ ಗೋಪಾಲ ನಾಯ್ಕ ಭಾಶಿ ಅಧ್ಯಕ್ಷತೆವಹಿಸಿದ್ದರು. ಕಥೇಗಾರ್ತಿ ಸುಧಾ ಎಂ.ಕರ್ಕಿಸವಲ್, ತಾಲೂಕು ಕಸಾಪ  ಗೌರವ ಕಾರ್ಯದರ್ಶಿ ಅಣ್ಣಪ್ಪ ನಾಯ್ಕ ಶಿರಳಗಿ,  ಸುಜಾತಾ ಹೆಗಡೆ ದಂಟಕಲ್ ಹಾಗೂ ವಸತಿ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಸ್ವರಚಿತ ಕವನ ವಾಚನ ಹಾಗೂ ಕವಿಗೋಷ್ಠಿ ನಡೆಯಿತು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮನಡೆಸಿ ವಿಜೇತರಿಗೆ ಬಹುಮಾನ ನೀಡಲಾಯಿತು. ವಸತಿ ಶಾಲೆಯ ಪ್ರಾಂಶುಪಾಲ ಸುಧಾಕರ ನಾಯ್ಕ ಸ್ವಾಗತಿಸಿದರು. ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ರಮೇಶ ಹಾರ್ಸಿಮನೆ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಜಾವೇದ್ ವಂದಿಸಿದರು. ಶಿಕ್ಷಕಿ ಮುಕ್ತಾ ಭಟ್ಟ ಕಾರ್ಯಕ್ರಮ ನಿರ್ವಹಿಸಿದರು.

Share This
300x250 AD
300x250 AD
300x250 AD
Back to top