ಹೊನ್ನಾವರ: ಅಗ್ನಿಪಥ್ ಯೋಜನೆ ಕೇವಲ ಯೋಧರನ್ನೊಂದೇ ಅಲ್ಲದೆ , ಇಂದಿನ ಯವ ಪೀಳಿಗೆಯನ್ನು ನಿರ್ದಿಷ್ಟ ಗುರಿಯತ್ತ ಒಯ್ದು ಒಳ್ಳೆಯ ಪ್ರಜೆಗಳನ್ನು ನಿರ್ಮಿಸಲು ಸಹಕಾರಿಯಾಗುತ್ತದೆ ಎನ್ನುವುದನ್ನು ತಿಳಿಸುತ್ತ ಎಲ್ಲರ ಪ್ರಶ್ನೆಗಳಿಗೆ ತಿಳುವಳಿಕೆಯ ಉತ್ತರಗಳನ್ನು ಹೊನ್ನಾವರ ತಾಲೂಕಿನ ಗೇರುಸೊಪ್ಪದ ನಿವೃತ್ತ ಸೈನಿಕ ವಿನಾಯಕ ನಾಯ್ಕ ನೀಡಿದರು.
ಹೊನ್ನಾವರ ತಾಲೂಕಿನ ಅಳ್ಳಂಕಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶಿರಸಿಯ ಪ್ರಜ್ವಲ ಟ್ರಸ್ಟ್ ನಡೆಸಿದ ಅಗ್ನಿಪಥ್ ಯೋಜನೆಯ ಕುರಿತು ಮಾಹಿತಿ- ಸಂವಾದ ಕಾರ್ಯಕ್ರಮದಲ್ಲಿ ಸಂವಾದವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟರು.
ಇದೇ ಸಂದರ್ಭದಲ್ಲಿ ಮಾತನಾಡಿದ ಟ್ರಸ್ಟಿನ ಅಧ್ಯಕ್ಷೆ ಶ್ರೀಮತಿ ಬಿಂದು ಹೆಗಡೆ, ಶರೀರಕ್ಕೆ ಅರಿವೆ ಹೇಗೆ ಮುಖ್ಯವೋ ಹಾಗೆ ಆತ್ಮಕ್ಕೆ ಶರೀರ. ನಮ್ಮೆಲ್ಲರ ಜೀವನ ಬಳಸದೇ ಪೆಟ್ಟಿಗೆಯಲ್ಲಿಟ್ಟು ಹಾಳಾಗುವ ಬಟ್ಟೆಯಂತಾಗದೇ ಶಿಸ್ತಾಗಿ ಧರಿಸಿ ಉಪಯೋಗವಾಗುವ ಬಟ್ಟೆಯಂತಾಗಬೇಕು. ಯಾರೂ ಶಾಶ್ವತವಲ್ಲ. ಇದ್ದಷ್ಟು ದಿನ ನಮ್ಮ ಜೀವನವನ್ನು ಉತ್ತಮ ಕೆಲಸಗಳನ್ನು ಮಾಡಿ ಸಾರ್ಥಕಗೊಳಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪ್ರಜ್ವಲ ಟ್ರಸ್ಟಿನಿಂದ ಕಾಲೇಜಿಗೆ ಸೀಲಿಂಗ್ ಪ್ಯಾನನ್ನು ದೇಣಿಗೆಯಾಗಿ ನೀಡಲಾಯಿತು. ಅಗ್ನಿಪಥ್ ಯೋಜನೆಯ ಕುರಿತು ವಿದ್ಯಾರ್ಥಿಗಳಿಗೆ ನಡೆಸಿದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು.
ಕಾಲೇಜಿನ ಪ್ರಾಂಶುಲಾಲರಾದ ಡಾ. ಜಿ.ಎಸ್. ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾರ್ಥಿನಿಯರ ಶಾಂತಿಮಂತ್ರದೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಪ್ರಾಚಾರ್ಯ ಮಹೇಶ ಹೆಗಡೆ ನಿರ್ವಹಿದರೆ, ಪ್ರಾಚಾರ್ಯೆ ವಂದಿಸಿದರು. ಟ್ರಸ್ಟಿನ ಸಲಹಾ ಸಮಿತಿ ಸದಸ್ಯರಾದ ರವಿ ಹೆಗಡೆ ನೆನಪಿನ ಕಾಣಿಕೆ ನೀಡಿದರು. ಕಾಲೇಜಿನ ಎಲ್ಲ ಪ್ರಾಚಾರ್ಯ ವರ್ಗ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.