Slide
Slide
Slide
previous arrow
next arrow

ಜಿ.ವಿ.ಭಟ್ಟಗೆ ಸಹಕಾರಿ ಸಂಘದ ಸೇವಾ ಪ್ರಶಸ್ತಿ

300x250 AD

ಯಲ್ಲಾಪುರ: ತಾಲೂಕಿನ ವಜ್ರಳ್ಳಿಯ ಆದರ್ಶ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕ ಜಿ.ವಿ.ಭಟ್ಟ ಅಡ್ಕೇಮನೆಯವರಿಗೆ ತಾಲೂಕು ಮಟ್ಟದ ಉತ್ತಮ ವ್ಯವಸ್ಥಾಪಕ ಪ್ರಶಸ್ತಿ ದೊರಕಿದೆ.

ವಜ್ರಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಹೊನ್ನಗದ್ದೆಯ ಅಡ್ಕೇಮನೆಯವರಾದ ಗಣಪತಿ ಭಟ್ಟರು ಬಿಕಾಂ, ಡಿಪ್ಲೊಮಾ ಪದವೀಧರರರಾಗಿದ್ದು, ಆರಂಭದಲ್ಲಿ ನ್ಯೂ ದೆಹಲಿ ಯ ಕಂಪನಿಯೊಂದರಲ್ಲಿ ಲೆಕ್ಕಾಧಿಕಾರಿ ಯಾಗಿ ಕಾರ್ಯ ನಿರ್ವಹಿಸಿ ನಂತರ ವಜ್ರಳ್ಳಿಯ ಆದರ್ಶ ಸೇವಾ ಸಹಕಾರಿ ಸಂಘದಲ್ಲಿ ಎರಡು ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. 2014 ರಿಂದ ಮುಖ್ಯಕಾರ್ಯನಿರ್ವಾಹಕರಾಗಿ ಗ್ರಾಮೀಣ  ಭಾಗದ  ಸಹಕಾರಿ ಸಂಘದ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ವಜ್ರಳ್ಳಿಯ ಸೊಸೈಟಿ ಯು ಕಾರ್ಯಕ್ಷಮತೆ ಹೆಚ್ಚಿಸಿದ್ದಾರೆ. ತಂತ್ರಜ್ಞಾನ ಇಂದಿನ ಯುಗದಲ್ಲಿ ರೈತರಿಗೆ ಅಗತ್ಯವಾದ ಮತ್ತು ಉಪಯುಕ್ತವಾಗಬಲ್ಲ ಮಾಹಿತಿಗಳನ್ನು ತಜ್ಞರನ್ನು ಕರೆಸಿ ಸಹಕಾರಿ ಸಂಘದಲ್ಲಿ ಪ್ರಾತ್ಯಕ್ಷಿಕೆ  ಏರ್ಪಡಿಸುವ ಮೂಲಕ ಕೃಷಿ ಪರವಾದ ಕಾಳಜಿಗಳು ತೋರಿದ್ದಾರೆ.

ಸಹಕಾರಿ ರಂಗ ಅರ್ಥಿಕತೆ, ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಇವರ ಸೇವಾ ಸಾಧನೆ ಗಮನಿಸಿ ತಾಲೂಕಿನ ಉತ್ತಮ ವ್ಯವಸ್ಥಾಪಕ ಪ್ರಶಸ್ತಿಗೆ ಜಿ.ವಿ ಭಟ್ಟ ಭಾಜನರಾಗಿದ್ದಾರೆ . ಇವರನ್ನು ಆದರ್ಶ ಸೇವಾ ಸಹಕಾರಿ ಸಂಘದ ಅಧ್ಯಕ್ಷ ದತ್ತಾತ್ರೇಯ ಭಟ್ಟ ತಾರಗಾರ, ಉಪಾಧ್ಯಕ್ಷ ರವಿ ಭಟ್ಟ ಬಿಡಾರ,ಸಂಘದ ಆಡಳಿತ ಮಂಡಳಿ ಸದಸ್ಯರು, ಸೊಸೈಟಿಯ ಸಿಬ್ಬಂದಿಗಳು  ಅಭಿನಂದಿಸಿದ್ದಾರೆ.

300x250 AD

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಉತ್ತರ ಕನ್ನಡ ಸಹಕಾರ ಯೂನಿಯನ್, ಕೆಡಿಸಿಸಿ ಬ್ಯಾಂಕ್ ಹಾಗೂ ಹಾಸಣಗಿ ಸೇವಾ ಸಹಕಾರಿ ಸಂಘದ ಸಂಯುಕ್ತ ಆಶ್ರಯದಲ್ಲಿ ನ.18ರಂದು ಮಂಚಿಕೇರಿಯಲ್ಲಿ ಇಡೀ ದಿನ ಜರುಗುವ 70ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

Share This
300x250 AD
300x250 AD
300x250 AD
Back to top