ಮುಂಡಗೋಡ: ಪಟ್ಟಣದ ಕೊಳಗೇರಿ ನಿವಾಸಿಗಳಿಗೆ ಕೊಳಗೇರಿ ನಿರ್ಮೂಲನಾ ಮಂಡಳಿಯ ವತಿಯಿಂದ ಅಧಿಕೃತ ಮನೆ ಹಕ್ಕು ಪತ್ರವನ್ನು ನೀಡಿ ಶಾಸಕ ಶಿವರಾಮ ಹೆಬ್ಬಾರ್ ಅವರು ಬಡವರಿಗೆ ಸೂರಿನ ಭದ್ರತೆಯನ್ನು ನೀಡಿದರು.
ಈ ಮೊದಲು ಅಧಿಕೃತ ಹಕ್ಕು ಪತ್ರವನ್ನು ಪಡೆದ ಸುಮಾರು 193 ಅರ್ಹ ಫಲಾನುಭವಿಗಳಿಗೆ ಶಾಸಕ ಶಿವರಾಮ ಹೆಬ್ಬಾರ್ ಅವರು ಪಟ್ಟಣದ ಮರಾಠಾ ಸಮುದಾಯ ಭವನದಲ್ಲಿ ಫಾರಂ ನಂಬರ್ 3 (ನಮೂನೆ -3) ವಿತರಿಸಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಸದಸ್ಯರು, ಪಕ್ಷದ ವಿವಿಧಸ್ಥರದ ಪದಾಧಿಕಾರಿಗಳು, ಪಟ್ಟಣ ಪಂಚಾಯತ ಅಧಿಕಾರಿಗಳು, ಸಿಬ್ಬಂದಿಗಳು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
***