ಶಿರಸಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿರಸಿ ಸ್ಥಳೀಯ ಸಂಸ್ಥೆ ವತಿಯಿಂದ ಒಂದು ದಿನದ ಪಟ್ರೋಲ್ ಲೀಡರ್ ಕ್ಯಾಂಪ್ ಸ.ಹಿ.ಪ್ರಾ.ಶಾಲೆ ಯಡಳ್ಳಿಯಲ್ಲಿ ನಡೆಯಿತು.
ಶಿರಸಿ ತಾಲೂಕಿನ ಸ್ಕೌಟ್ ಮಾಸ್ಟರ್ ಹಾಗೂ ಗೈಡ್ ಕ್ಯಾಪ್ಟನ್‌ಗಳು, ನೂರಕ್ಕೂ ಅಧಿಕ ಸ್ಕೌಟ್ಸ್ ಮತ್ತು ಗೈಡ್ಸ್ ಗಳು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಸ್ಕೌಟ್ಸ್ ಧ್ವಜಾರೋಹಣದೊಂದಿಗೆ ಪ್ರಾರಂಭವಾದ ಶಿಬಿರದಲ್ಲಿ ನಾಟ್ಸ್, ಲ್ಯಾಶಿಂಗ್, ಪ್ರಥಮ ಚಿಕಿತ್ಸೆ, ಕ್ಯಾಂಪ್ ಕ್ರಾಫ್ಟ್, ಮ್ಯಾಪಿಂಗ್, ಎಸ್ಟಿಮೇಶನ್ ಮುಂತಾದ ಕೌಶಲ್ಯಗಳ ಬಗ್ಗೆ ಹೇಮಂತ್ ಭಂಡಾರಿ, ಕಿರಣ ಫರ್ನಾಂಡಿಸ್, ಕಮಲಾಕರ ಪಟಗಾರ, ಗಂಗಾಧರ ಪಟಗಾರ, ಶ್ರೀಮತಿ ಮಮತಾ ಆರ್. ಶ್ರೀಮತಿ ಯಮುನಾ ಪೈ ಹಾಗೂ ಶ್ರೀಮತಿ ಚೇತನಾ ಪಾವಸ್ಕರ್ ತರಬೇತಿ ನೀಡಿದರು. ಕಿಡ್ಸ್ ಗೇಮ್ ಹಾಗೂ ಮನರಂಜನಾ ಆಟಗಳು ಶಿಬಿರದ ವೈಶಿಷ್ಟಗಳಾಗಿದ್ದವು.
ಜಿಲ್ಲಾ ಮುಖ್ಯ ಆಯುಕ್ತರಾದ ಎಂ.ಎಂ.ಭಟ್ಟ ಹಾಗೂ ಗೈಡ್ಸ್ ಆಯುಕ್ತರಾದ ಶ್ರೀಮತಿ ಜ್ಯೋತಿ ಭಟ್ ಶಿಬಿರಕ್ಕೆ ಭೇಟಿ ನೀಡಿ ಚಟುವಟಿಕೆ ವೀಕ್ಷಿಸಿದರು. ಎ.ಎಸ್. ಓ.ಸಿ. ವೀರೇಶ್ ಮಾದರ ಉಪಸ್ಥಿತರಿದ್ದರು. ಯಡಳ್ಳಿ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ. ಹಾಗೂ ಶಿಕ್ಷಕರ ಸಹಕಾರದೊಂದಿಗೆ ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಎನ್.ಎಸ್.ಭಾಗ್ವತ್ ಕಾರ್ಯಕ್ರಮ ಸಂಘಟಿಸಿದ್ದರು.