ಶಿರಸಿ: ಸಹಕಾರ ಕ್ಷೇತ್ರದ ಪ್ರತಿಷ್ಟಿತ ಪ್ರಶಸ್ತಿ ಎನಿಸಿರುವ ಸಹಕಾರ ರತ್ನ ಪ್ರಶಸ್ತಿಯು ಪ್ರಸ್ತುತ ಸಾಲಿನಲ್ಲಿ ಹಿರಿಯ ಸಹಕಾರಿ ಎನ್.ಪಿ. ಗಾಂವ್ಕರ್ ಗೆ ರಾಜ್ಯ ಸರಕಾರ ಘೋಷಿಸಿದೆ.
ಪ್ರತಿಷ್ಟಿತ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಇದರ ಪ್ರಧಾನ ವ್ಯವಸ್ಥಾಪಕ ನಿರ್ದೇಶಕರಾಗಿ ಎರಡು ದಶಮಾನಗಳಿಗೂ ಅಧಿಕ ಕಾಲ ಸೇವೆ ಸಲ್ಲಿಸಿದ್ದ ಅವರು, ಉತ್ತರ ಕನ್ನಡ ಜಿಲ್ಲೆಯ ಸಹಕಾರಿ ಕ್ಷೇತ್ರದ ಸಾಕ್ಷಿ ಪ್ರಜ್ಞೆಯೆಂದರೆ ತಪ್ಪಾಗಲಾರದು. ಗಾಂವ್ಕರ್ ಅವರಿಗೆ ಸಹಕಾರಿ ರತ್ನ ಪ್ರಶಸ್ತಿ ಸಂದಿರುವುದಕ್ಕೆ ಅವರ ಹಿತೈಷಿಗಳು, ಒಡನಾಡಿಗಳು, ಹಿರಿಯ ಸಹಕಾರಿ ಧುರೀಣರು ಅಭಿನಂದನೆ ಸಲ್ಲಿಸಿದ್ದಾರೆ.