Slide
Slide
Slide
previous arrow
next arrow

ಶಿರಡಿ ಸಾಯಿಬಾಬಾ ಮಂದಿರದ ವಾರ್ಷಿಕೋತ್ಸವ ಸಂಪನ್ನ

300x250 AD

ಕಾರವಾರ: ನಗರದ ಕೋಡಿಬಾಗದ ಶ್ರೀಕ್ಷೇತ್ರ ಸಾಯಿಕಟ್ಟಾದ ಶಿರಡಿ ಸಾಯಿಬಾಬಾ ಮಂದಿರದಲ್ಲಿ 56ನೇ ವಾರ್ಷಿಕೋತ್ಸವ ಅದ್ದೂರಿಯಾಗಿ ಸಂಭ್ರಮದಿಂದ ನಡೆಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಸಾವಿರಾರು ಭಕ್ತರು ದೇವರ ಕೃಪೆಗೆ ಪಾತ್ರರಾದರು.

ಸಂಜೆ ಮಂದಿರದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಬೆಂಗಳೂರಿನ ನಿವೃತ್ತ ವಾಯುಸೇನೆ ಅಧಿಕಾರಿ ಎಂ. ಸುಂದರ್, ನಮ್ಮ ಸಂತೋಷ ಉತ್ಸಾಹಕ್ಕಾಗಿ ನಮ್ಮನ್ನು ನಾವು ಪರಿವರ್ತನೆ ಮಾಡಿಕೊಳ್ಳಬೇಕಾಗಿದೆ. ನಮ್ಮವರಿಗೆ ನನ್ನಿಂದ ಏನು ಸಹಾಯ ಮಾಡಿದ್ದೇವೆ ಎಂಬುದನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ದ್ವೇಷ, ಮತ್ಸರದಿಂದ ಕೂಡಿರುವ ನಮ್ಮ ಜೀವನ ಸದಾ ಸಂತೋಷವನ್ನು ಹೆಚ್ಚು ಭಯಸುತ್ತದೆ. ಆದರೆ ಇಂತಹ ಸಂತೋಷವನ್ನು ನಾವೆಲ್ಲರು ಸಹಾಯ ಹಾಗೂ ಆದ್ಯಾತ್ಮಿಕ ಜೀವನದಿಂದ ಕಂಡುಕೊಳ್ಳಬಹುದು ಎಂದರು.

ಮುದ್ದೇನಳ್ಳಿ ಟ್ರಸ್ಟಿ ಸದಸ್ಯರಾದ ಮಧುಸುಧನ್ ನಾಯ್ಕ ಪುತ್ತೂರು ಮಾತನಾಡಿ, ಸತ್ಯ ಸಾಯಿಬಾಬಾರವರು ನಮ್ಮ ಕಣ್ಣೆದುರು ಇಲ್ಲದೆ ಇದ್ದರು. ಅವರು ಸದಾ ನಮ್ಮೊಂದಿಗೆ ಇದ್ದಾರೆ. ಅವರು ಹಾಕಿಕ್ಕೊಟ್ಟ ಮಾರ್ಗದಲ್ಲಿಯೇ ನಾವೆಲ್ಲರೂ ಸಾಗಬೇಕಾಗಿದೆ. ಸಾಯಿಬಾಬಾರವರ ಸೂಚನೆಯಂತೆ ಇಂದು ನೂರಾರು ವಿದ್ಯಾ ಸಂಸ್ಥೆಗಳು ದೇಶ ವಿದೇಶದಲ್ಲಿ ಉತ್ತಮವಾಗಿ ನಡೆಯುತ್ತಿವೆ. ಕರ್ನಾಟಕದಲ್ಲಿ 28 ಜಿಲ್ಲೆಗಳಲ್ಲಿ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಅದೆ ರಿತಿ ಉಚಿತ ವೈದ್ಯಕೀಯ ಸೇವೆ ಒದಗಿಸಲಾಗುತ್ತಿದೆ. ಆದ್ದರಿಂದ ನಾವೆಲ್ಲರೂ ಸ್ವಾಮಿ ಇಚ್ಚಿಸಿದಂತೆ ಸತ್ಯ ಮಾರ್ಗದಲ್ಲಿ ಪರಸ್ಪರರಿಗೆ ನೆರವಾಗಿ ಜೀವನ ನಡೆಸಬೇಕು ಎಂದು ಹೇಳಿದರು.

ತಾಲೂಕಿನ ಬೇಳೂರು ಸತ್ಯಸಾಯಿ ಲೋಕಸೇವಾ ಗುರುಕುಲದ ಮುಖ್ಯೋಪಾಧ್ಯಾಯ ಅಶೋಕ ಪಿ.ಗಾಂವಕರ್ ಮಾತನಾಡಿ, ಶ್ರೀಕ್ಷೇತ್ರ ಸಾಯಿಕಟ್ಟಾದಲ್ಲಿ ದಿ.ಎಲ್.ಎಸ್ ಮೇತ್ರಿ ಅವರ ಭಕ್ತಿಗೆ ಮೆಚ್ಚಿ ಸ್ವತಃ ಸತ್ಯ ಸಾಯಿಬಾಬಾರವರೇ ಕ್ಷೇತ್ರಕ್ಕೆ ಬಂದು ಪಂಚರತ್ನಗಳನ್ನು ಸೃಷ್ಟಿಸಿ ಶಿರಡಿ ಸಾಯಿಬಾಬ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ. ಅಂದಿನಿಂದ ಇಂದಿನವರೆಗೂ ಶ್ರೀ ಕ್ಷೇತ್ರಗಳಲ್ಲಿ ಸಾಕಷ್ಟು ಅಭಿವೃದ್ಧಿಗಳಾಗಿದೆ. ಅಲ್ಲದೆ ಶ್ರೀಕ್ಷೇತ್ರದಲ್ಲಿ ಅದೆಷ್ಟೋ ಪವಾಡಗಳು ನಡೆದು ಇಂದು ಜನಮಾನಸದಲ್ಲಿ ಸೂಕ್ಷೇತ್ರವಾಗಿ ನೆಲೆಯೂರಿದೆ ಎಂದು ಹೇಳಿದರು.

300x250 AD

ಇನ್ನು ಕ್ಷೇತ್ರದಲ್ಲಿ ಗುರುವಾರ ಮುಂಜಾನೆಯಿಂದ ಸಂಜೆವರೆಗೂ ದಿ. ಶಾಂತಾರಾಮ ಸೈರು ನಾಯ್ಕ ಕುಟುಂಬದವರು ಹಾಗೂ ಸಾಯಿಕಟ್ಟಾ ಭಕ್ತ ಭಜನಾ ಮಂಡಳಿಯಿಂದ ಭಜನೆ ನಡೆಯಿತು. ಅಲ್ಲದೆ ಇದೇ ವೇಳೆ ಸತ್ಯ ಗಣಪತಿ ವೃತ ಹಾಗೂ ಶ್ರೀ ಸತ್ಯಸಾಯಿ ವೃತವನ್ನು ಆಚರಣೆ ಮಾಡಲಾಯಿತು. ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆ ನಡೆಯಿತು.

ಇನ್ನು ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಓಂ ರವೀಂದ್ರನಾಥ ಬೆಳರ‍್ಕರ್, ಸಾನ್ವಿ ಗಾಂವಕರ್, ಅಭಿಷೇಕ್ ದಯಾನಂದ ನಾಯ್ಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಾಯಿಶ್ರೀ ಶೇಟ್ ಪ್ರಾರ್ಥಿಸಿದರು. ಶಿವಾನಂದ ಎಲ್ ಮೇತ್ರಿ ಸ್ವಾಗತಿಸಿದರು. ಕೃಷ್ಣಾ ಮೇತ್ರಿ ಹಾಗೂ ಕಿಶೋರ್ ನಾಯ್ಕ ಅತಿಥಿಗಳನ್ನು ಪರಿಚಯಿಸಿದರು. ಜಿಎಸ್ ನಾಯ್ಕ ವಂದಿಸಿದರು. ಪ್ರಗತಿ ಸಂತೋಷ ಶೇಟ್ ವರದಿ ವಾಚಿಸಿದರು. ಸಂತೋಷ್ ಶೇಟ್ ನಿರೂಪಿಸಿದರು. 

Share This
300x250 AD
300x250 AD
300x250 AD
Back to top