Slide
Slide
Slide
previous arrow
next arrow

ಟ್ರ್ಯಾಕ್ಟರ್ ಡಿಕ್ಕಿ: ಬೈಕ್ ಸವಾರ ಸಾವು

300x250 AD

ಯಲ್ಲಾಪುರ: ಬೈಕ್ ಹಿಂಬದಿಯಿಂದ ವೇಗವಾಗಿ ಬಂದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟು, ಇನ್ನೋರ್ವ ಗಾಯಗೊಂಡ ಘಟನೆ ತಾಲೂಕಿನ ಕಿರವತ್ತಿ-ಮದನೂರು ರಸ್ತೆಯಲ್ಲಿ ಮದನೂರು ಡೌನ್ ಬಳಿ ಬುಧವಾರ ರಾತ್ರಿ ನಡೆದಿದೆ.

ಬೈಕ್ ಸವಾರ ಹುಬ್ಬಳ್ಳಿ ಕುಡ್ಡಿಕೇರಿಯ ದ್ಯಾಮಣ್ಣ ಮುದುಕಪ್ಪ ವಡ್ಡರ್ (35) ಮೃತ ವ್ಯಕ್ತಿಯಾಗಿದ್ದು, ಹಿಂಬದಿಯ ಸವಾರ ಮದನೂರಿನ ಲಕ್ಷ್ಮಣ ಜೋಗಪ್ಪ ವಡ್ಡರ್ ಗಾಯಗೊಂಡ ವ್ಯಕ್ತಿ ಎಂದು ತಿಳಿದುಬಂದಿದೆ. ಇವರಿಬ್ಬರು ಬೈಕ್ ಮೇಲೆ ಕಿರವತ್ತಿಯಿಂದ ಮದನೂರಿನ ಕಡೆಗೆ ಹೋಗುತ್ತಿದ್ದಾಗ ಹಿಂಬದಿಯಿಂದ ವೇಗವಾಗಿ ಬಂದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದ್ದು, ಸವಾರ ದ್ಯಾಮಣ್ಣ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಾಳು ಲಕ್ಷ್ಮಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಟ್ರ್ಯಾಕ್ಟರ್ ಚಾಲಕ ಹಳಿಯಾಳ ತಾಲೂಕಿನ ಜನಗಾದ ದೊಂಡು ಜನ್ನು ಕೊಕರೆ ವಿರುದ್ಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

300x250 AD
Share This
300x250 AD
300x250 AD
300x250 AD
Back to top