Slide
Slide
Slide
previous arrow
next arrow

ತಾಯಿ-ಮಗಳು ನಾಪತ್ತೆ: ಪ್ರಕರಣ ದಾಖಲು

300x250 AD

ಅಂಕೋಲಾ: ಅಂಕೋಲಾದ‌ ಶೆಟಗೇರಿಯ ನಿವಾಸಿ ಸಾವಿತ್ರಿ ಈಶ್ವರ ಮೇಸ್ತ ಹಾಗೂ ಮಗಳಾದ ದೀಪಿಕಾ ಈಶ್ವರ ಮೇಸ್ತ  ಮನೆಯಿಂದ ನಾಪತ್ತೆಯಾಗಿರುವ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೊನ್ನಾವರದ ಕೆಳಗಿನಪಾಳ್ಯದ ಈಶ್ವರ ಮೇಸ್ತ ತನ್ನ ಪತ್ನಿ ಸಾವಿತ್ರಿ ಹಾಗೂ ಮಗಳೊಂದಿಗೆ ಶೆಟಗೇರಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದರು. ನ. 8 ರಂದು ಬಾಡಿಗೆ ಮನೆಯಿಂದ ಮದ್ಯಾಹ್ನ  12-30 ರ ಸುಮಾರಿಗೆ ಯಾರಿಗೂ ಹೇಳದೆ ಕೇಳದೆ ತನ್ನ ಪತ್ನಿ ಮಗಳನ್ನು ಕರೆದುಕೊಂಡು ಎಲ್ಲಿಯೋ ಹೋಗಿ ನಾಪತ್ತೆಯಾಗಿದ್ದಾಳೆ. ತನ್ನ ಪತ್ನಿ ಹಾಗೂ ಮಗುವನ್ನು ಹುಡುಕಿಕೊಡುವಂತೆ ಪತಿ ಈಶ್ವರ ಮೇಸ್ತ ದೂರು ದಾಖಲಿಸಿದ್ದಾರೆ.

300x250 AD

ಸಾವಿತ್ರಿ ಮೇಸ್ತ ಕನ್ನಡ ಹಾಗೂ ಕೊಂಕಣಿ ಭಾಷೆ ಬಲ್ಲವಳಾಗಿದ್ದು, ಬಿಳಿ ಮೈ ಬಣ್ಣ,ಗೋಲು ಮುಖ, ಸಾಧಾರಣ ಮೈ ಕಟ್ಟು ಹೊಂದಿದ್ದಾಳೆ. ನಾಪತ್ತೆಯಾಗುವ ವೇಳೆಯಲ್ಲಿ ಗುಲಾಬಿ ಬಣ್ಣದ ಚೂಡಿದಾರ ಟಾಪ್, ಗುಲಾಬಿ ಬಣ್ಣದ ವೇಲ್, ಕುತ್ತಿಗೆಯಲ್ಲಿ ಕರಿಮಣಿ ಸರ ಧರಿಸಿದ್ದಾಳೆ. ಹಾಗೆ ಮಗು 3 ಪೂಟ್ 6 ಇಂಚ್ ಎತ್ತರವಿದ್ದು, ಕನ್ನಡ ಹಾಗೂ ಕೊಂಕಣಿ ಭಾಷೆ ಮಾತನಾಡುತ್ತಾಳೆ.  ಬಿಳಿ ಮೈ ಬಣ್ಣ ಉದ್ದನೆಯ ಮುಖ, ತೆಳ್ಳನೆಯ ಮೈಕಟ್ಟು, ಬಲಗಣ್ಣಿನ‌ ಮೇಲೆ ಹಳೆಯ ಗಾಯದ ಗುರುತು ಇದೆ.  ನಾಪತ್ತೆಯಾದ ವೇಳೆಯಲ್ಲಿ ನೀಲಿ ಬಣ್ಣದ ಚೂಡಿದಾರ, ಕುತ್ತಿಗೆಯಲ್ಲಿ ಬಿಳಿ‌ ಮಣಿ‌ ಸರ ಧರಿಸಿದ್ದಳು ಎಂದು ಈಶ್ವರ ವಾಮನ ಮೇಸ್ತಾ ತನ್ನ ದೂರಿನಲ್ಲಿ ವಿವರಿಸಿದ್ದಾರೆ.

Share This
300x250 AD
300x250 AD
300x250 AD
Back to top