Slide
Slide
Slide
previous arrow
next arrow

ಶೀಘ್ರ ರೋಗಪತ್ತೆ, ಚಿಕಿತ್ಸೆಯಿಂದ ಕ್ಷಯರೋಗ ನಿವಾರಣೆ ಸಾಧ್ಯ: ಡಾ.ಅನ್ನಪೂರ್ಣ

300x250 AD

ಶಿರಸಿ: ಶೀಘ್ರ ರೋಗಪತ್ತೆ ಹಾಗೂ ಚಿಕಿತ್ಸೆಯಿಂದ ಕ್ಷಯರೋಗವನ್ನು ಬೇಗ ಗುಣಪಡಿಸಿ, ಬಹು ಔಷಧ ಪ್ರತಿಬಂಧಕ ಕ್ಷಯ (ಎಂ.ಡಿ.ಆರ್.) ಬರದಂತೆ ತಡೆಯಬಹುದು ಎಂದು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಅನ್ನಪೂರ್ಣ ವಸ್ತ್ರದ ಅಭಿಪ್ರಾಯಪಟ್ಟರು. ಅವರು ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿ ಶಿರಸಿಯಲ್ಲಿ ನಡೆದ ಸಕ್ರಿಯ ಕ್ಷಯ ರೋಗ ಪತ್ತೆ ಆಂದೋಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸಕ್ರಿಯ ಕ್ಷಯ ರೋಗಪತ್ತೆ ಆಂದೋಲನಕ್ಕೆ ಚಾಲನೆ ನೀಡಿದರು.

ಸಕ್ರಿಯ ಕ್ಷಯ ರೋಗ ಪತ್ತೆ ಆಂದೋಲನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ ರೋಗವನ್ನು ಬೇಗ ಗುಣಪಡಿಸಬಹುದು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ ವಿನಾಯಕ ಭಟ್ ತಿಳಿಸಿ, ಕ್ಷಯ ರೋಗ ಕೆಮ್ಮು ಕಫದ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುವ ಕಾಯಿಲೆ ಆಗಿದ್ದು ಯಾವುದೇ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ಪತ್ತೆ ಹಚ್ಚಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿ, ಕ್ಷಯ ಮುಕ್ತ ಭಾರತ ಮಾಡಲು ಎಲ್ಲರೂ ಶಕ್ತಿಮೀರಿ ಶ್ರಮಿಸಬೇಕು ಎಂದು ಅವರು ಕರೆ ನೀಡಿದರು.

300x250 AD

ಕ್ಷಯ ರೋಗ ಚಿಕಿತ್ಸಾ ಮೇಲ್ವಿಚಾರಕ ಉದಯಶಂಕರ್ ಮಾತನಾಡಿ
ಸಕ್ರಿಯ ಕ್ಷಯ ರೋಗ ಪತ್ತೆ ಆಂದೋಲನ ಕಾರ್ಯಕ್ರಮ ದಿನಾಂಕ 15-11-2023 ರಿಂದ 02-12-2023 ರವರೆಗೆ ಮನೆ ಮನೆ ಭೇಟಿ ಮಾಡಿ, ಮಾಹಿತಿ, ಪತ್ತೆ, ಚಿಕಿತ್ಸೆ, ನೀಡುವ ಕಾರ್ಯಕ್ರಮ ಇದಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ವಿಶೇಷವಾಗಿ ಕಳೆದ 2 ವರ್ಷಗಳಿಂದ ಕ್ಷಯ ರೋಗಕ್ಕೆ ಚಿಕಿತ್ಸೆ ಪಡೆದವರು ಮತ್ತೆ ರೋಗ ಮರುಕಳಿಸುವ ಸಾಧ್ಯತೆ ಇರುವುದರಿಂದ ತಪ್ಪದೇ ಪರೀಕ್ಷೆ ಮಾಡಿಸಿ ಕೊಳ್ಳಲು ತಿಳಿಸಿದರು. ಮಧುಮೇಹ/ ಸಕ್ಕರೆ ಕಾಯಿಲೆ ಉಳ್ಳವರು ಸಹ ಕ್ಷಯ ರೋಗ ಬಾರದಂತೆ ಜಾಗೃತಿವಹಿಸಿ ರೋಗಲಕ್ಷಣಗಳು ಇದಲ್ಲಿ ತಕ್ಷಣವೇ ಕಪ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮವನ್ನು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗೌರಿ ಸಿ. ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರೆ, ರೂಪಾ ನಾಯ್ಕ ನಿರೂಪಿಸಿದರು, ವಿಜಯ್ ಆಚೆದಿoಭ ಸ್ವಾಗತಿಸಿದರೆ ಶ್ರುತಿ ನಾಯ್ಕ ವಂದಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ಮಂಜುನಾಥ, ಮತ್ತು ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿಯ ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top