ಶಿರಸಿ: ತಾಲೂಕಿನ ಯಡಳ್ಳಿ ಸಮೀಪದಲ್ಲಿ ಮಂಗಳವಾರ ಇಲ್ಲಿಯ ನೀಲೆಕಣಿಯ ಆಟೋ ಚಾಲಕರಾಗಿದ್ದ ಅಶೋಕ ಶಿರಾಲಿ ಮತ್ತು ಕುಟುಂಬ ಅಪಘಾತಕ್ಕೆ ಈಡಾಗಿರುವುದು ಅತೀವ ದುಃಖವನ್ನೀಡಿದೆ. ದೀಪಾವಳಿಯ ಸಂತಸದ ಸಂದರ್ಭದಲ್ಲಿ ನಮ್ಮ ಆಟೋ ಚಾಲಕರ ಕುಟುಂಬ ಈ ದುರ್ಘಟನೆಗೆ ಒಳಗಾಗಿರುವುದು ನಿಜಕ್ಕೂ ಸಂಕಟವನ್ನುಂಟುಮಾಡಿದೆ ಎಂದು ಅನಂತಮೂರ್ತಿ ಚ್ಯಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ದಿನದ ದುಡಿಮೆಯನ್ನು ನಂಬಿ ಬದುಕುವ ಆಟೋ ಚಾಲಕರ ಕುಟುಂಬವೇ ಈ ಥರಹದ ಅಪಘಾತಕ್ಕೆ ಸಿಲುಕಿರುವುದರಿಂದ, ಈ ಸಮಯದಲ್ಲಿ ಆರ್ಥಿಕ ಸಹಕಾರದ ಅವಶ್ಯವಿದೆ. ಹಾಗಾಗಿ ಅವರ ಕುಟುಂಬಕ್ಕೆ ನನ್ನ ವತಿಯಿಂದ ರೂ.10,000 ನೀಡಲು ಇಚ್ಛಿಸಿದ್ದೇನೆ. ಭಗವಂತನು ಅವರ ಕುಟುಂಬಕ್ಕೆ ಬೇಗನೇ ಚೇತರಿಸಿಕೊಡಲೆಂದು ಪ್ರಾರ್ಥಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಅನಂತಮೂರ್ತಿ ಹೆಗಡೆ ಜಿಲ್ಲೆಯಲ್ಲಿನ ಬಹುತೇಕ ಆಟೋ ಚಾಲಕರಿಗೆ ಅನುಕೂಲಕರವಾಗಲೆಂದು ಈಗಾಗಲೇ ಪ್ರತಿ ತಾಲೂಕಿನಲ್ಲಿ ಸಮವಸ್ತ್ರ, ರಿಲ್ಷಾ ಹುಡ್, ಆಟೋ ಚಾಲಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಧನ ಸಹಾಯ ಇತ್ಯಾದಿ ಅನುಕೂಲಗಳನ್ನು ಒದಗಿಸುತ್ತಾ ಬಂದಿದ್ದಾರೆ. ಪ್ರಸ್ತುತ ಆಟೋ ಚಾಲಕನ ಕುಟುಂಬ ಅಪಘಾತಕ್ಕೀಡಾದಾಗ, ಆ ಕುಟುಂಬಕ್ಕೆ ತುರ್ತು ಸ್ಪಂದಿಸುವ ಮೂಲಕ ತಮಗೆ ಜಿಲ್ಲೆಯ ಜನ ನೀಡಿದ್ದ ‘ಆಟೋ ರಕ್ಷಕ’ ಬಿರುದಿಗೆ ಅನ್ವರ್ಥರಾಗಿದ್ದಾರೆ.