Slide
Slide
Slide
previous arrow
next arrow

ಶಿರಸಿ ಮೂಲದ ಇಬ್ಬರು ಪತ್ರಕರ್ತರಿಗೆ ಬೆಳಗಾವಿಯಲ್ಲಿ ಸನ್ಮಾನ

300x250 AD

ಶಿರಸಿ: ಉತ್ತರ ಕನ್ನಡದ ಶಿರಸಿ ಮೂಲದ ಇಬ್ಬರು ಹಿರಿಯ‌ ಪತ್ರಕರ್ತರಿಗೆ ಬೆಳಗಾವಿಯಲ್ಲಿ ಅಭಿನಂದಿಸಿ ಗೌರವಿಸಲಾಯಿತು. ರಾಜ್ಯ‌ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ  ಸಚಿವೆ ಲಕ್ಷ್ಮೀ ಹೆಬ್ಬಾಳಕರರ ಮಾಧ್ಯಮ ಸಲಹೆಗಾರ ಎಂ.ಕೆ.ಹೆಗಡೆ ಕಲ್ಮನೆ ಹಾಗೂ ಮಾಧ್ಯಮ ಪ್ರಶಸ್ತಿ ವಿಜೇತ, ವಿಜಯಕರ್ನಾಟಕದ‌ ಹಿರಿಯ ವರದಿಗಾರ ಗುರುದತ್ತ ಭಟ್ಟ ಶಿರಸಿ ಅವರನ್ನು ಆತ್ಮೀಯವಾಗಿ ಸಮ್ಮಾನಿಸಲಾಯಿತು. ಈ ಇಬ್ಬರು ಬೆಳಗಾವಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಈ ವೇಳೆ ಸಚಿವರಾದ ಲಕ್ಷ್ಮೀ‌ ಹೆಬ್ಬಾಳಕರ, ಸತೀಶ ಜಾರಕಿಹೋಳಿ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ, ಗದಗದ ತೋಂಟದಾರ್ಯ ಮಠದ ಡಾ.ಸಿದ್ದರಾಮ ಸ್ವಾಮೀಜಿ, ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಇತರರು ಇದ್ದರು.

300x250 AD
Share This
300x250 AD
300x250 AD
300x250 AD
Back to top