Slide
Slide
Slide
previous arrow
next arrow

ನ.14ಕ್ಕೆ ಮಂಜುಗುಣಿಯಲ್ಲಿ ‘ಯಕ್ಷ ದೀಪಾವಳಿ’

300x250 AD

ಶಿರಸಿ: ಇಲ್ಲಿನ ಶಬರ ಸಂಸ್ಥೆಯು ತಾಲೂಕಿನ ಮಂಜುಗುಣಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ನವೆಂಬರ್ ೧೪ರಂದು ರಾತ್ರಿ 9ರಿಂದ ಯಕ್ಷಗಾನ ಪ್ರದರ್ಶನ ಹಾಗೂ‌‌ ಸಮ್ಮಾನ ಕಾರ್ಯಕ್ರಮ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ  ‘ವೀರ ಬರ್ಭರಿಕ’ ಯಕ್ಷಗಾನ ಪ್ರದರ್ಶನ ನಡೆಯಲಿದೆ. ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ್ ಭಟ್ ಮಂಜುಗುಣಿ ಯಕ್ಷ ದೀಪಾವಳಿ ಉದ್ಘಾಟಿಸಲಿದ್ದು, ಅತಿಥಿಗಳಾಗಿ ಶಾಸಕ ಭೀಮಣ್ಣ ನಾಯ್ಕ, ಸಾಮಾಜಿಕ ಕಾರ್ಯಕರ್ತ ಎಸ್.ಕೆ.ಭಾಗ್ವತ್ ಶಿರಸಿಮಕ್ಕಿ ಪಾಲ್ಗೊಳ್ಳುವರು.

ಇದೇ ವೇಳೆ  ಹಿರಿಯ ಮದ್ದಲೆ ವಾದಕ ಕಂಚಿಮನೆ ಶ್ರೀಪತಿ ಹೆಗಡೆ, ನಾಟಿ ವೈದ್ಯ ಗೋವಿಂದ ಬಾಬು ಮರಾಠಿ ಹಾಸಲಮನೆ ಅವರನ್ನು ಸನ್ಮಾನಿಸಲಾಗುತ್ತಿದೆ. ಯಕ್ಷಗಾನ‌ ಪ್ರದರ್ಶನದ ಹಿಮ್ಮೇಳದಲ್ಲಿ ಚಂದ್ರಕಾಂತರಾವ್ ಮೂಡಬಳ್ಳೆ, ಮಂಜುನಾಥ ಕಂಚಿಮನೆ, ಪ್ರಸನ್ನ ಭಟ್ ಹೆಗ್ಗಾರ್ ಪಾಲ್ಗೊಳ್ಳುವರು. ಮುಮ್ಮೇಳದಲ್ಲಿ ಚಪ್ಪರಮನೆ ಶ್ರೀಧರ್ ಹೆಗಡೆ, ರಾಜೇಶ್ ಭಂಡಾರಿ, ಚಂದ್ರಕಾಂತ್ ಗೌಡ ಹೊಸಪಟ್ಟಣ, ಮಂಜುನಾಥ್ ಗಾಂವಕರ್, ಸನ್ಮಯ್ ಭಟ್, ನಾಗರಾಜ್ ಕುಂಕಿಪಾಲ್, ದೀಪಕ್ ಕುಂಕಿ  ಪಾಲ್ಗೊಳ್ಳುವರು ಎಂದು ಪ್ರಕಟಣೆಯಲ್ಲಿ ಶಬರದ ನಾಗರಾಜ್ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top