ಕಾರವಾರ: ಸದಾಶಿವಗಡದ ಸದಿಚ್ಚಾ ಸಭಾಂಗಣದಲ್ಲಿ ಐಗಳ್ ಮಾರ್ಷಲ್ ಆರ್ಟ್ ಅಂತರಾಷ್ಟ್ರೀಯ ಕರಾಟೆ-ಡು- ಇಂಡಿಯಾ ಸಂಸ್ಥೆಯ ವತಿಯಿಂದ ಬ್ಲಾಕ್ ಬೆಲ್ಟ್ ಕಾನ್ಫೆರಿಂಗ್ ಸೆರೆಮನಿ ಆ್ಯಂಡ್ ಡೆಮೋನ್ಸ್ಟ್ರೇಷನ್ ಸಮಾರಂಭವನ್ನು ಅತಿ ವಿಜೃಂಭಣೆಯಿಂದ ನಡೆಸಲಾಯಿತು.
ಈ ಸಂರ್ದಭದಲ್ಲಿ ಕರಾಟೆ ಸಂಸ್ಥೆಯ 18 ವಿದ್ಯಾರ್ಥಿಗಳಿಗೆ ಬ್ಲಾಕ್ ಬೆಲ್ಟ್ ನೀಡಲಾಯಿತು. ಡಿವೈಎಸ್‌ಪಿ ವಾಲೆಂಟೈನ್ ಡಿಸೋಜಾ ಸಮಾರಂಭ ಉದ್ಘಾಟಿಸಿ, ಕರಾಟೆ ಶಿಕ್ಷಣದ ಮಹತ್ವ ಹಾಗೂ ಅದರ ನಿರಂತರ ಕಲಿಕೆ ಮತ್ತು ಉಪಯೋಗದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು. ಬಾಲಮಂದಿರ ಹೈಸ್ಕೂಲ್ ಪ್ರಾಂಶುಪಾಲರಾದ ಅಂಜಲಿ ಮಾನೆ, ಸದಾಶಿವಗಡ ಶಿವಾಜಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಉದಯ ಪವಾರ, ಪ್ರಸಾದ ಮದಕೈಕರ್, ಚಂದ್ರಕಾ0ತ ಗಡ್ಕರ್ ಮತ್ತು ಗುರುಭವನ ಕರಾಟೆ ಸಂಸ್ಥೆಯ ವಿಶಾಲ್ ನಾಯ್ಕ ಭಾಗವಹಿಸಿ ಕರಾಟೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಪೂರ್ವಕ ಹಿತ ನುಡಿಗಳನ್ನಾಡಿದರು.
ಈ ಸಂದರ್ಭದಲ್ಲಿ ಐಗಳ್ ಮಾರ್ಷಲ್ ಆರ್ಟ್ಸ್ನ ಮುಖ್ಯಸ್ಥ ಸುನಿಲ್ ವಿ.ಐಗಳರವರ ವಿದ್ಯಾರ್ಥಿಗಳ ಪ್ರದರ್ಶನ ವೀಕ್ಷಿಸಿದ ಪ್ರೇಕ್ಷಕರು ವಿಸ್ಮಯಗೊಂಡರು. ಇದೇ ಸಂಸ್ಥೆಯ ಸಹ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಅವಿನಾಶ ನೇತ್ರಕರ ಮತ್ತು ಶಾಹಿದ್ ಖಾನ್‌ರವರ ಪ್ರದರ್ಶನ ಮತ್ತು ಅವರ ವಿದ್ಯಾರ್ಥಿಗಳ ಪ್ರದರ್ಶನ ಪ್ರೇಕ್ಷಕರನ್ನು ಬೆರಗುಗೊಳಿಸಿತು. ಈ ಸಂದರ್ಭದಲ್ಲಿ ಅವಿನಾಶ ನೇತ್ರಕರ ಮತ್ತು ಶಾಹಿದ್ ಖಾನ್‌ರವರು 4ನೆಯ ಡಾನ್ ಅನ್ನು ಸುನಿಲ್ ವಿ.ಐಗಳರವರಿಂದ ಪಡೆದರು. ಅಭಿಷೇಕ ನೇತ್ರಕರರವರ ಅದ್ಭುತ ಸಾಂಸ್ಕೃತಿಕ ನೃತ್ಯ ಎಲ್ಲರನ್ನು ಬೆರಗುಗೊಳಿಸಿತು.
ಎಲ್ಲಾ 18 ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ತಮ್ಮ ಗುರುಗಳಾದಂತಹ ಸುನಿಲ್ ವಿ.ಐಗಳ, ಅವಿನಾಶ ನೇತ್ರಕರ ಮತ್ತು ಶಾಹಿದ್ ಖಾನ್‌ರವರನ್ನು ಸನ್ಮಾನಿಸಿದರು. ನೇವಿ ಚಿಲ್ಡçನ್ ಸ್ಕೂಲ್‌ನ 4ನೇ ತರಗತಿಯ ಅವಳಿ- ಜವಳಿ ವೇದಾಂತ್ ಸಾವಂತ ಮತ್ತು ಸಿದ್ಧಾಂತ ಸಾವಂತ 18 ವಿದ್ಯಾರ್ಥಿಗಳಲ್ಲಿ ಅತಿ ಚಿಕ್ಕ್ಕ ವಯಸಿನ ಮಕ್ಕಳು. ಬಹುಶಃ ಕಾರವಾರದಲ್ಲಿಯೆ ಅತಿ ಚಿಕ್ಕ ವಯಸಿನಲ್ಲಿ ಬ್ಲಾಕ್ ಬೆಲ್ಟ್ ಪಡೆದ ವಿದ್ಯಾರ್ಥಿಗಳು ಇವರು.