ಹೊನ್ನಾವರ: ಬಡವನಾಗಿ ಹುಟ್ಟಿದ್ದು ತಪ್ಪಲ್ಲ, ಬಡವನಾಗಿ ಸಾಯುವುದು ತಪ್ಪು ಎಂದು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಗ್ರಾಮೀಣ ಭಾಗದ ಜನತೆಯ ಆರ್ಥಿಕ ಸ್ಥಿತಿ ಸುಧಾರಿಸಲು ಹಲವು ಕಾರ್ಯಕ್ರಮ ಅನುಷ್ಠಾನವಾಗುತ್ತಿದೆ ಎಂದು ಹಿರಿಯ ಪತ್ರಕರ್ತ ಜಿ.ಯು.ಭಟ್ ಅಭಿಪ್ರಾಯಪಟ್ಟರು.
ಅವರು ತಾಲೂಕಿನ ಮುಗ್ವಾ ಸುಬ್ರಹ್ಮಣ್ಯ ಮಯೂರ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದಲ್ಲಿ ಹಮ್ಮಿಕೊಂಡ ತಾಲೂಕ ಮಟ್ಟದ ಮಹಿಳಾ ವಿಚಾರಗೊಷ್ಟಿ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆ ಮೂಲಕ ಅನೇಕ ಮಹಿಳೆಯರು ಆರ್ಥಿಕವಾಗಿ ಸಬಲರಾಗಿದ್ದಾರೆ. ಹೆಗ್ಗಡೆಯವರು ಸಾಮಾಜಿಕ ಬದುಕಿಗಾಗಿ ತಮ್ಮ ಜೀವನವನ್ನು ಸಮರ್ಪಣೆ ಮಾಡಿಕೊಂಡವರು. ಯೋಜನೆಯ ಮೂಲಕ ಪರಿವರ್ತನೆ ತಂದಿರುದರಿ0ದ ರಾಜ್ಯ ಸರ್ಕಾರ ಹೆಗ್ಗಡೆಯವರಿಗೆ ಪರಿವರ್ತನಾ ರೂವಾರಿ ಪ್ರಶಸ್ತ್ರಿ ನೀಡಿ ಗೌರವಿಸಿದೆ. 50 ಸಾವಿರಕ್ಕೂ ಅಧಿಕ ಜನರಿಗೆ ಯೋಜನೆಯ ಕಾರ್ಯಕರ್ತರನ್ನಾಗಿಸಿ ಉದ್ಯೋಗ ನೀಡಿದ್ದಾರೆ. ಯೋಜನೆಯ ಮೂಲಕ ಹಲವರು ಫಲಾನುಭವಿಗಳಾಗಿದ್ದಾರೆ. ಆಸ್ಪತ್ರೆ, ಶಿಕ್ಷಣ ಸಂಸ್ಥೆಯ0ತಹ ಹಲವು ಸೌಲಭ್ಯ ಒದಗಿಸಿದ್ದಾರೆ. ದೇವಾಲಯಕ್ಕೆ ಬಂದ ಕಾಣಿಕೆ ಹಣವನ್ನು ಯೋಜನಾ ಬದ್ದವಾಗಿ ಸಮಾಜಕ್ಕೆ ವಿನಿಯೋಗಿಸಿದ್ದಾರೆ. ಕೋವಿಡ್ ಸಮಯದಲ್ಲಿ 3 ಕೋಟಿಗು ಅಧಿಕ ನೆರವು ನೀಡಿದ್ದಾರೆ. ಹೊನ್ನಾವರದಂತಹ ಹಲವು ತಾಲೂಕ ಕೇಂದ್ರಗಳಿಗೂ ಆ ಸಮಯದಲ್ಲಿ ಕೋವಿಡ್ ಸೊಂಕಿಗೆ ಒಳಗಾದವರನ್ನು ಕರೆ ತರಲು ವಾಹನ ವ್ಯವಸ್ಥೆ ಮಾಡಿದ್ದಾರೆ. ಆರೋಗ್ಯವರ್ಧಕ ಸಿರಿಧಾನ್ಯಕ್ಕೆ ಮನ್ನಣೆ ನೀಡಿ ಧಾನ್ಯ ಬೆಳೆಗಾರರಿಗೆ ಪ್ರೊತ್ಸಾಹಿಸಿದ್ದಾರೆ ಎಂದರು.
ಯೋಜನೆಯ ಜಿಲ್ಲಾ ನಿರ್ದೇಶಕ ಬಾಬು ನಾಯ್ಕ ಮಾತನಾಡಿ, ರಾಜ್ಯದ 50% ಜನರು ಯೋಜನೆಯ ಫಲಾನುಭವಿಗಳಾಗಿದ್ದಾರೆ ಎಂದು ಗ್ರಾಮಾಭಿವೃದ್ದಿ ಯೋಜನೆಯ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಎಸ್.ಡಿ.ಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ವಿಜಯಲಕ್ಷ್ಮೀ ನಾಯಕ, ಸಾಮಾಜಿಕ ಜಾಲತಾಣದಿಂದ ಮಕ್ಕಳ ರಕ್ಷಣೆಯಲ್ಲಿ ಹೆತ್ತವರ ಪಾತ್ರದ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡಿ ಇಂದಿನ ಯುವಜನಾಂಗ ತಮ್ಮ ಅಮೂಲ್ಯವಾದ ಜೀವನವನ್ನು ಮೊಬೈಲ್ ಬಳಕೆಯಲ್ಲಿಯೆ ಕಳೆಯುತ್ತಿದ್ದಾರೆ. ಮುಂದೆ ಇವರು ಆರೋಗ್ಯವಂತ ವ್ಯಕ್ತಿಯಾಗಿರಲು ಸಾಧ್ಯವಾಗುವುದಿಲ್ಲ. ಕೇವಲ ಶಾಲಾ-ಕಾಲೇಜಿನಲ್ಲಿ ಮೊಬೈಲ್ ಬಳಕೆ ನಿಯಂತ್ರಣದಿAದ ಸಾಧ್ಯವಾಗುವುದಿಲ್ಲ. ಮನೆಯಲ್ಲಿ ಪಾಲಕರು ಈ ಬಗ್ಗೆ ತಮ್ಮ ಮಕ್ಕಳ ಮೇಲೆ ಹೆಚ್ಚಿನ ಮುತುವರ್ಜಿ ವಹಿಸಬೇಕು. ಪಾಲಕರೆ ಮಕ್ಕಳಿಗೆ ಮಾದರಿಯಾಗಬೇಕು. ಇಲ್ಲವಾದಲ್ಲಿ ಮಕ್ಕಳು ಮೊಬೈಲ್ ಚಟಕ್ಕೆ ದಾಸರಾಗಿ ಸಮಸ್ಯೆ ಅನುಭವಿಸುತ್ತಾರೆ. ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ಮಾಡುವುದು ಪಾಲಕರ ಹೊಣೆ ಎಂದು ಸಲಹೆ ನೀಡಿದರು.
ಆರೋಗ್ಯ ರಕ್ಷಣೆಯಲ್ಲಿ ಸಿರಿಧಾನ್ಯದ ಕುರಿತು ಧಾರವಾಡ ಸಿರಿಧಾನ್ಯ ಘಟಕದ ನಿರ್ದೇಶಕರಾದ ದಿನೇಶ ಎಂ. ಮಾತನಾಡಿದರು. ಮುಗ್ವಾ ಗ್ರಾ.ಪಂ.ಅಧ್ಯಕ್ಷರಾದ ಐ.ವಿ.ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯೋಜನಾಧಿಕಾರಿ ವಾಸಂತಿ ಅಮಿನ್ ಸ್ವಾಗತಿಸಿ, ಜ್ಞಾನವಿಕಾಸ ಸಂಘದ ವಾರ್ಷಿಕ ಸಾಧನೆಯನ್ನು ಸಮನ್ವಯಾಧಿಕಾರಿ ವಿನಯಾ ಮಂಡಿಸಿದರು. ಮೇಲ್ವಾಚಾರಕ ನಾಗರಾಜ ಕೆ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ನಂತರ ರಂಗೋಲಿ ಸ್ಪರ್ಧೆ, ಪುಷ್ಪಗುಚ್ಚ ಸ್ಪರ್ಧೆ ಸೇರಿದಂತೆ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮ ಆಯೋಜಿಸಿ, ವಿಜೇತರಾದವರಿಗೆ ಬಹುಮಾನ ನೀಡಿ ಪುರಸ್ಕಾರಲಾಯಿತು. 50 ಮಹಿಳೆಯರಿಗೆ ಸ್ವ- ಉದ್ಯೋಗ ನಡೆಸಲು ಸಲಹೆ ಸಹಕಾರ ನೀಡಲಾಯಿತು.