Slide
Slide
Slide
previous arrow
next arrow

ಜಿ.ಸಿ.ಕಾಲೇಜಿನಲ್ಲಿ 10ನೇ ವರ್ಷದ ಜಿಲ್ಲಾಮಟ್ಟದ ಚರ್ಚಾ ಸ್ಪರ್ಧೆ

300x250 AD

ಅಂಕೋಲಾ: ಇಲ್ಲಿನ ಗೋಖಲೆ ಸೆಂಟಿನರಿ ಕಾಲೇಜಿನಲ್ಲಿ ದಿವಂಗತ ಪಿ.ಎಸ್. ಕಾಮತ್ ಸ್ಮರಣಾರ್ಥ ಜಿಲ್ಲಾ ಮಟ್ಟದ 10ನೇ ವರ್ಷದ ಚರ್ಚಾ ಸ್ಪರ್ಧೆಯ ಪೂರ್ವಭಾವಿ ತಾಲೂಕು (ಕ್ಲಸ್ಟರ್) ಮಟ್ಟದ ಚರ್ಚಾ ಸ್ಪರ್ಧೆಯು ಸೋಮವಾರ ಜಿ ಸಿ ಕಾಲೇಜಿನ ಯುಜಿಸಿ ಸಭಾಭವನದಲ್ಲಿ ನಡೆಯಿತು.

ಶಿವಾಜಿ ಬಿ ಎಡ್ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಡಾ. ಶಿವಾನಂದ ವಿ ನಾಯಕ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ವೇಳೆ ಅವರು ಮಾತನಾಡಿ ಕಳೆದ ಹತ್ತು ವರ್ಷಗಳಿಂದ ಜಿ ಸಿ ಕಾಲೇಜಿನಲ್ಲಿ ಚರ್ಚಾ ಸ್ಪರ್ಧೆಯನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಬರಲಾಗುತ್ತಿದೆ. ನಾನೂ ಈ‌ ಕಾಲೇಜಿನ ವಿದ್ಯಾರ್ಥಿಯಾಗಿದ್ದೆ. ಜಿ ಸಿ ಕಾಲೇಜಿನ ಚರ್ಚಾ ಸ್ಪರ್ಧೆಗೆ ಒಳ್ಳೆಯ ಇತಿಹಾಸವಿದ್ದು ಅಂದಿನ ವೈಭವ ಇಂದಿಗೂ ಇದೆ. ಕಾಲೇಜುಗಳ ಹೆಚ್ಚಳದ ಪರಿಣಾಮ ಈಗ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದರೂ ಶಿಕ್ಷಣದ ಗುಣಮಟ್ಟ ಉನ್ನತ ಮಟ್ಟದಲ್ಲಿದೆ. ವಿದ್ಯಾರ್ಥಿಗಳ ಸರ್ವತೋಮುಖ ಪ್ರತಿಭೆಗೆ ಈ ಕಾಲೇಜು ಸೂಕ್ತ ವೇದಿಕೆಯನ್ನು ಕಲ್ಪಿಸುತ್ತಿದೆ ಎಂದು ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಜಿ ಸಿ ಕಾಲೇಜಿನ ಪ್ರಾಚಾರ್ಯರಾದ ಡಾ. ಎಸ್ ಬಿ ವಸ್ತ್ರದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಸ್ಪರ್ಧೆಯ ನಿರ್ಣಾಯಕರಾಗಿ ಆಗಮಿಸಿದ್ದ ಹಿರಿಯ ವಕೀಲ ವಾಸುದೇವ ಎಸ್ ನಾಯಕ ಮತ್ತು ಪತ್ರಕರ್ತ ನಾಗರಾಜ್ ಎಸ್ ಜಾಂಬಳೇಕರ ಮಾತನಾಡಿದರು. ಉಪನ್ಯಾಸಕ ಪ್ರೊ. ನಾಗರಾಜ ದಿವಗಿಕರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಪ್ರೊ. ಆರ್ ಪಿ ಭಟ್ ವಂದಿಸಿದರು. ಕುಮಾರಿ ಹೊನಲು ನಾಯಕ ಮತ್ತು ಸಂಜನಾ ನಾಯಕ ಕಾರ್ಯಕ್ರಮವನ್ನು ನಿರ್ವಹಿಸಿದರು. ಕುಮಾರಿ ಆರ್ಯ ಪ್ರಭು ಮತ್ತು ಸಂಗಡಿಗರು ಪ್ರಾರ್ಥಿಸಿದರು. ನಂತರ ‘ರಾಷ್ಟ್ರೀಯ ಭಾವೈಕ್ಯತೆಗೆ ಏಕರೂಪ ನಾಗರಿಕ ಸಂಹಿತೆ ಅಗತ್ಯವಿದೆ’ ಈ ವಿಷಯದ ಮೇಲೆ ನಡೆದ ಚರ್ಚಾ ಸ್ಪರ್ಧೆಯಲ್ಲಿ ಅಂಕೋಲಾದ ಜಿ ಸಿ ಕಾಲೇಜಿನ ಸೃಷ್ಟಿ ನಾಯಕ ಪ್ರಥಮ, ಜಿ ಸಿ ಕಾಲೇಜಿನ ನಿಶ್ಚಿತಾ ನಾಯಕ ದ್ವಿತೀಯ ಹಾಗೂ ಕುಮಟಾದ ವಿದ್ಯಾಧಿರಾಜ ಪಾಲಿಟೆಕ್ನಿಕ್ ಕಾಲೇಜಿನ ಯೋಗೇಶ ಪಟಗಾರ ತೃತೀಯ ಸ್ಥಾನವನ್ನು ಪಡೆದರು. ಈ ಸಂದರ್ಭದಲ್ಲಿ ಉಪನ್ಯಾಸಕರಾದ ವಿ.ಎಮ್. ನಾಯ್ಕ, ಆರ್. ಪಿ.ಭಟ್, ಮಂಜು ಪಾಟೀಲ, ಡಿ.ಪಿ.ಕುಚ್ಚಿನಾಡ, ಅಶ್ವಿನ ಇದ್ದರು. ರಂಜಿತಾ ತಾಂಡೇಲ್, ಪವಿತ್ರಾ ಪೈ ಸಹಕರಿಸಿದರು.

300x250 AD
Share This
300x250 AD
300x250 AD
300x250 AD
Back to top