Slide
Slide
Slide
previous arrow
next arrow

ಬ್ರಹ್ಮಾನಂದಕ್ಕಿಂತ ಕಾವ್ಯಾನಂದವೇ ಶ್ರೇಷ್ಠ: ಸಾಹಿತಿ ಮಾಸ್ಕೇರಿ

300x250 AD

ಶಿರಸಿ: ವಚನ ಕಾಲದ ನಂತರದ ಯುಗ ಮುಕ್ತಕ ಯುಗವೆಂದು ಮುಕ್ತವಾಗಿ ಹೇಳಬಹುದಾಗಿದೆ. ಸಾಹಿತ್ಯದ ಒಂದು ಪ್ರಕಾರವಾದ ಇದು ಜನಪದದ ಮಾರ್ಗದಲ್ಲಿ ಕೊಂಡೊಯ್ಯಬಲ್ಲುದಾಗಿದೆ. ಬ್ರಹ್ಮಾನಂದಕ್ಕಿಂತ ಕಾವ್ಯಾನಂದವೇ ಶ್ರೇಷ್ಠವಾದುದು ಎಂದು ಸಾಹಿತಿ ಮಾಸ್ಕೇರಿ ಎಂ.ಕೆ.ನಾಯಕ ಹೇಳಿದರು.

ಸಾಹಿತ್ಯ ಸಂಚಲನ ಶಿರಸಿ ಹಾಗೂ ಸುರಭಿ ಸಾಹಿತ್ಯ ಬಳಗ ಮೈಸೂರು ಆಶ್ರಯದಲ್ಲಿ ಜರುಗಿದ ಕೆ.ಟಿ ಶ್ರೀಮತಿಯವರ ಪುಸ್ತಕ ಲೋಕಾರ್ಪಣೆ, ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಹಾಗೂ ಮುಕ್ತಕ ಕವಿಗೋಷ್ಠಿಯನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ಹಿರಿಯ ಮಧುರ ಕವಿ ವನರಾಗ ಶರ್ಮ ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಮಾಸ್ಕೇರಿಯವರ ಮುಕ್ತಕ ಯುಗದ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಕವಿ ಕೃಷ್ಣ ಪದಕಿಯವರು ಕೆ.ಟಿ.ಶ್ರೀಮತಿಯವರ ‘ಮಾಯಗಾರನ ಮುಕ್ತಕ’ ಕೃತಿ ಪರಿಚಯಿಸಿದರು. ‘ಕೇತಕೀ ಕುಸುಮ’ ಕೃತಿಯನ್ನು ಮುಕ್ತಕ ಕವಿ ಅನಂತ ತಾಮ್ಹನಕರ ಪರಿಚಯಿಸಿದರು.

ಮಾಸ್ಕೇರಿ ಸಾಹಿತ್ಯಾರಾಧನಾ ಸಂಸ್ಥೆ ಹಾಗೂ ಸಾಹಿತ್ಯ ಸಂಚಲನ ವತಿಯಿಂದ ಸಾಹಿತ್ಯ ಹಾಗೂ ಕಲಾ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡ ಕೆ.ಟಿ.ಶ್ರೀಮತಿ ಮೈಸೂರು, ಗಂಗಾ ಕೆ.ಹೆಗಡೆ ದೇವಿಸರ, ವರ್ಗಾಸರ ಗಣಪತಿ ಭಟ್, ಡಿ.ಎಸ್.ನಾಯ್ಕ ಇವರುಗಳಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸನ್ಮಾನ ಪತ್ರಗಳನ್ನು ಶರಾವತಿ ಭಟ್, ಶೋಭಾ ಭಟ್, ನಾಗರತ್ನಾ ಲೋಕೇಶ ಮತ್ತು ದಾಕ್ಷಾಯಿಣಿ ಪಿ.ಸಿ.ಯವರು ವಾಚಿಸಿದರು.

300x250 AD

ಮುಕ್ತಕ ಕವಿಗೋಷ್ಠಿಯಲ್ಲಿ ಶರಾವತಿ ಭಟ್, ನಾಗರತ್ನಾ ಲೋಕೇಶ, ಕಲಾವತಿ ಮಧುಸೂದನ್, ದೀಪಾಲಿ ಸಾಮಂತ, ಶೋಭಾ ಭಟ್, ಲತಾ ಹೆಗಡೆ ಬಾಳೆಗದ್ದೆ, ವಿಜಯಾ ಗ ಶೆಟ್ಟಿ, ಜ್ಯೋತಿ ಅಶ್ವಥ್ ಹೆಗಡೆ, ವಿಮಲಾ ಭಾಗ್ವತ, ಸುನೀತಾ ಸೊಲ್ಲಾಪುರೆ ಪಾಟೀಲ್, ಶ್ರೀನಿವಾಸ ಶಾನಭಾಗ, ನಾಗೇಶ ಅಣ್ವೇಕರ, ರೋಹಿಣಿ ಹೆಗಡೆ ಮುಕ್ತಕಗಳನ್ನು ಪ್ರಸ್ತುತಪಡಿಸಿದರು.

ಕವಯತ್ರಿ ಗಂಗಾ ಹೆಗಡೆಯವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಶಿಕ್ಷಣ ಇಲಾಖೆ ಅಧೀಕ್ಷಕ ಮಹೇಶಕುಮಾರ ಹನಕೆರೆ ಸ್ವಾಗತಿಸಿ ಪರಿಚಯಿಸಿದರು. ಡಾ.ಜಿ.ಎ ಹೆಗಡೆ ಸೋಂದಾ ಔಚಿತ್ಯಪೂರ್ಣವಾಗಿ ಮಾತನಾಡಿದರು. ವಿಶೇಷ ಆಮಂತ್ರಿತರಾಗಿ ಡಿ.ಎಂ.ಭಟ್ಟ, ಕುಳವೆ, ಪ್ರೊ.ಕೆ.ಎನ್.ಹೊಸಮನಿ, ಹನುಮಂತಪ್ಪ ಸಾಲಿ, ವಿ.ಪಿ.ಹೆಗಡೆ ವೈಶಾಲಿ, ಡಾ.ಶೈಲಜಾ ಮಂಗಳೂರು, ಯಶಸ್ವಿನಿ ಶ್ರೀಧರಮೂರ್ತಿ, ಮಂಗಳಾ ಜಿ., ಸುರೇಂದ್ರ ಜೆ.ರೇವಣಕರ, ಶಾಂತಾರಾಮ ಹೆಗಡೆ ಆಗಮಿಸಿದ್ದರು. ಸಂಪೂರ್ಣ ಕಾರ್ಯಕ್ರಮವನ್ನು ಕವಯಿತ್ರಿ ಪ್ರತಿಭಾ ಎಂ.ನಾಯ್ಕ ಮತ್ತು ಕವಯಿತ್ರಿ ರೋಹಿಣಿ ಹೆಗಡೆ ನಿರೂಪಿಸಿ ನಿರ್ವಹಿಸಿದರು. ಕವಯಿತ್ರಿ ಶರಾವತಿ ಭಟ್ ಸರ್ವರನ್ನು ವಂದಿಸಿದರು.

Share This
300x250 AD
300x250 AD
300x250 AD
Back to top