Slide
Slide
Slide
previous arrow
next arrow

ಕನ್ನಡ ಉಳಿಸಿ, ಬೆಳೆಸುವುದು ಕನ್ನಡಿಗನ ಆದ್ಯ ಕರ್ತವ್ಯ: ಯೋಗರಾಜ್

300x250 AD

ದಾಂಡೇಲಿ: ಸರ್ವ ಸಮನ್ವಯತೆಯನ್ನು ಸಾರುವ ಹಾಗೂ ಎಲ್ಲರೂ ಒಪ್ಪಿಕೊಳ್ಳುವ ಮತ್ತು ಅಪ್ಪಿಕೊಳ್ಳುವ ಭಾಷೆ ಕನ್ನಡ. ಕನ್ನಡವನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯ ಎಂದು ಪತ್ರಕರ್ತ ಯೋಗರಾಜ್ ಎಸ್.ಕೆ. ಹೇಳಿದರು.

ಅವರು ನಗರದ ಕರ್ನಾಟಕ ಸಂಘ ಪಂಚಗಾನ ಭವನದಲ್ಲಿ ಮಾತೃಭೂಮಿ ಪ್ರತಿಷ್ಟಾನದ ವತಿಯಿಂದ ಕನ್ನಡ ರಾಜ್ಯೋತ್ಸವದ ನಿಮಿತ್ತವಾಗಿ ಆಯೋಜಿಸಲಾಗಿದ್ದ ಗಾಯನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಜೆವಿಡಿ ಪಿಯು ಕಾಲೇಜಿನ ಉಪನ್ಯಾಸಕಿ ನಿರೂಪಮಾ ನಾಯಕ ಮತ್ತು ನಿವೃತ್ತ ಶಿಕ್ಷಕ ಬಸಯ್ಯ ನಾಗಶೆಟ್ಟಿಕೊಪ್ಪ ಮಾತನಾಡಿ, ಕನ್ನಡದ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಮನೆ ಮತ್ತು ಮನಗಳಲ್ಲಿ ಕನ್ನಡ ಸದಾ ಕಂಗೊಳಿಸುತ್ತಿರಬೇಕೆ0ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಜಿಲ್ಲಾ ಕೋಶಾಧ್ಯಕ್ಷ ಮುರ್ತುಜಾ ಹುಸೇನ್ ಆನೆ ಹೊಸೂರ ವಹಿಸಿದ್ದರು.

300x250 AD

ವೇದಿಕೆಯಲ್ಲಿ ಕರವೇ(ನಾ) ಬಣದ ತಾಲೂಕು ಘಟಕದ ಅಧ್ಯಕ್ಷ ಸಾಧಿಕ್ ಮುಲ್ಲಾ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ನಡೆದ ಗಾಯನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

Share This
300x250 AD
300x250 AD
300x250 AD
Back to top