Slide
Slide
Slide
previous arrow
next arrow

ಪರಿಸರ ಉಳಿದರೆ ನಮ್ಮ ಉಳಿವು:ಸುಭಾಷ್ ನಾರ್ವೇಕರ

300x250 AD

ಅಂಕೋಲಾ: ಪರಿಸರ ಉಳಿದರೆ ನಾವೆಲ್ಲ ಉಳಿಯುತ್ತೇವೆ. ಪರಿಸರ ಉಳಿಸುವುದು ಪ್ರತಿಯೊಬ್ಬ ನಾಗರಿಕನ ಆದ್ಯತೆಯಾಗಬೇಕೆಂದು ವಕೀಲ ಸುಭಾಷ್ ನಾರ್ವೇಕರ ಅಭಿಪ್ರಾಯಪಟ್ಟರು.

ಅವರು ಕನ್ನಡ ಸಾಹಿತ್ಯ ಪರಿಷತ್ ಬೇಲೆಕೇರಿಯ ಸಮುದ್ರ ತಟದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಕಾರ್ತಿಕ 2023ರ ಅಂಗವಾಗಿ ನಡೆದ ‘ಅನುದಿನ ಅನುಸ್ಪಂದನ’ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಪರಿಸರ ದಿನದ ಅಂಗವಾಗಿ ಶಿಕ್ಷಣ ಪ್ರೇಮಿ ದಿ.ವಿದ್ಯಾಬಾಯಿ ನಾರ್ವೇಕರ ಅವರ ಸ್ಮರಣಾರ್ಥ ಸಮುದ್ರ ತಟದಲ್ಲಿ ಸಸಿಯನ್ನು ನೆಡಲಾಯಿತು.

ರಾಜ್ಯ ಉತ್ತಮ ಶಿಕ್ಷಕಿ ಪ್ರಶಸ್ತಿ ಅಕ್ಷತಾ ಕೃಷ್ಣಮೂರ್ತಿಯವರನ್ನು ಇದೇ ಸಂದರ್ಭದಲ್ಲಿ ಕಸಾಪ ಪರವಾಗಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಕವಿಯತ್ರಿ ಹೊನ್ನಮ್ಮ ನಾಯಕರವರು ಅಕ್ಷತಾರವರ ಬದುಕು ಸಾಧನೆಯನ್ನು ಪರಿಚಯಿಸಿದರು. ಹಿರಿಯ ಜಾನಪದ ತಜ್ಞ ಎನ್.ಆರ್.ನಾಯಕ, ಬೇಲೆಕೇರಿ ಗ್ರಾಮ ಪಂಚಾಯತ ಅಧ್ಯಕ್ಷೆ ಸಹನಾ ನಾಯಕ, ಸಾಮಾಜಿಕ ಕಾರ್ಯಕರ್ತ ಕೇಶವಾನಂದ ನಾಯಕ ಉಪಸ್ಥಿತರಿದ್ದು ಸಂದರ್ಭೋಚಿತವಾಗಿ ಮಾತನಾಡಿದರು.

300x250 AD

ಕಸಾಪ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೈಷ್ಣವಿ ನಾಯಕರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಕಸಾಪ ಕಾರ್ಯದರ್ಶಿ ಜಗದೀಶ ಜಿ.ನಾಯಕ ಹೊಸ್ಕೇರಿ ಪ್ರಾಸ್ತಾವಿಕ ಮಾತುಗಳೊಂದಿಗೆ ಎಲ್ಲರನ್ನು ಸ್ವಾಗತಿಸಿದರು. ಕಸಾಪ ಕಾರ್ಯಕಾರಿ ಸಮಿತಿಯ ಹಿರಿಯ ಸದಸ್ಯ ಮಹಾಂತೇಶ ರೇವಡಿ ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ಶಿಕ್ಷಕ ಎಂ.ಬಿ.ಆಗೇರ ವಂದಿಸಿದರು. ಕಾರ್ಯಕ್ರಮದಲ್ಲಿ ಬೇಲೆಕೇರಿಯ ನಾಗರಿಕರು, ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Share This
300x250 AD
300x250 AD
300x250 AD
Back to top