ಮುಂಡಗೋಡ: ಪಟ್ಟಣ ಸಮೀಪವಿರುವ ಅರಣ್ಯದಲ್ಲಿ ಎರಡು ಕಾಡುಕೋಣಗಳು ಪ್ರತ್ಯಕ್ಷವಾಗಿದ್ದು, ಅದನ್ನು ಕಂಡ ಬೈಕ್ ಸವಾರರು ತಮ್ಮ ಮೊಬೈಲ್‌ನಲ್ಲಿ ಚಿತ್ರ ಸೆರೆ ಹಿಡಿದಿದ್ದಾರೆ.
ಪಟ್ಟಣದ ಸುಭಾಷ್‌ನಗರದ ಸುಭಾಷ್ ಬೋವಿ ಎಂಬುವವರು ಮುಂಡಗೋಡದಿಂದ ಸನವಳ್ಳಿ ಮಾರ್ಗವಾಗಿ ಶಿಗ್ಗಾಂವ ತಾಲೂಕಿಗೆ ತಮ್ಮ ಬೈಕ್ ಮೇಲೆ ತೆರಳುತ್ತಿರುವಾಗ ಏಕಾಏಕಿ ರಸ್ತೆಯಲ್ಲಿ ಕಾಡುಕೋಣಗಳು ಪ್ರತ್ಯಕ್ಷವಾಗಿವೆ. ದೊಡ್ಡ ಗಾತ್ರದ ಕೋಣಗಳನ್ನು ಕಂಡ ಬೈಕ್ ಸವಾರ ಭಯದಿಂದ ಬೈಕ್ ತಿರುಗಿಸಿಕೊಂಡು ಬಂದು ದೂರದಲ್ಲಿ ನಿಂತು ಫೋಟೋ ತೆಗೆದುಕೊಂಡಿದ್ದಾರೆ.
ಪಟ್ಟಣದ ಸಮೀಪದ ಅರಣ್ಯದಲ್ಲಿ ಕಾಡುಕೋಣಗಳು ಕಂಡು ಬಂದಿದ್ದು ಇದೇ ಮೊದಲ ಪ್ರಥಮವಾಗಿದ್ದು, ಕೋಣಗಳನ್ನ ಕಂಡು ಭಯಗೊಂಡ ಸವಾರರು ಶಿಗ್ಗಾಂವ ಹೋಗುವುದನ್ನು ಬಿಟ್ಟು ಮರಳಿದ್ದಾರೆ.