ದಾಂಡೇಲಿ: ಜಯ ಕರ್ನಾಟಕ ಸಂಘಟನೆಯ ದಾಂಡೇಲಿ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ನಗರದ ಪ್ರವಾಸಿ ಮಂದಿರದಲ್ಲಿ ನಡೆಯಿತು.
ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ವಿಲಾಸ ಕಣಗಲಿ ಮತ್ತು ಸಂಘಟನೆಯ ಪ್ರಮುಖ ಸುದರ್ಶನ್ ಆರ್.ಸಿ ಅವರ ನೇತೃತ್ವದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಜಯ ಕರ್ನಾಟಕ ಸಂಘಟನೆಯ ತಾಲೂಕು ಘಟಕದ ಅಧ್ಯಕ್ಷರಾಗಿ ಅಕ್ಷಯ ಪಾಠಣಕರ, ಉಪಾಧ್ಯಕ್ಷರಾಗಿ ಮುನ್ನಾ ಸಾಂಕ್ಲಾ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ರಮೇಶ ನರೇಂದ್ರ ಅವರನ್ನು ಆಯ್ಕೆ ಮಾಡಲಾಯಿತು.
ಕಾರ್ಯದರ್ಶಿಯಾಗಿ ಪವನ್ ಗಾಯಕವಾಡ, ಸಂಘಟನೆಯ ಮಹಿಳಾ ಘಟಕದ ಅಧ್ಯಕ್ಷರಾಗಿ ಕರ್ಣಮ್ಮಾ ತೋಡಟ್ಟಿ, ಉಪಾಧ್ಯಕ್ಷೆಯಾಗಿ ಉಮಾ ಕಾಂಬಳೆ, ಕಾರ್ಯದರ್ಶಿಯಾಗಿ ಸವಿತಾ ದಂಡಗಿ, ಸಂಚಾಲಕಿಯಾಗಿ ಮೇರಿ ಮುರಾರಿ ಹಾಗೂ ಸದಸ್ಯರುಗಳಾಗಿ ದಿಲಷಾದ್ ಬಂದೇಲ್ಲಾ, ಶೋಭಾರಾಣಿ ಅವರನ್ನು ಆಯ್ಕೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷರನ್ನಾಗಿ ಎಂ.ಡಿ.ಮುಸ್ತಫಾ ಹಕೀಮ್‌ರವರನ್ನು ನೇಮಕ ಮಾಡಲಾಯಿತು.
ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆಯ ಅನೀಸ್ ಫೀರವಾಲೆ, ಗೋಪಾಲ್ ಗರಗ, ಪ್ರವೀಣ್, ಪ್ರಶಾಂತ, ಲಕ್ಷ್ಮಣ, ಪ್ರಕಾಶ, ಮಹೇಶ, ರಮೇಶ, ರಾಮು,ರಫೀಕ್, ಬಸು, ಜಯಲತಾ ಕೋಚ್ರೆಕರ, ಭಾರ್ಗವಿ, ಸುಲಕ್ಷಿತಾ ಹಿರೇಮಠ, ಉಪಸ್ಥಿತರಿದ್ದರು.