Slide
Slide
Slide
previous arrow
next arrow

ವಿಜ್ಞಾನ ಆಸಕ್ತಿ, ಅನ್ವೇಷಣೆ ಹೊರತರಲು ವಸ್ತು ಪ್ರದರ್ಶನ ಸಹಾಯಕ: ಬಿಇಓ

300x250 AD

ಯಲ್ಲಾಪುರ: ಜಗತ್ತಿನಲ್ಲಿ ಹೊಸತರ ಸೃಷ್ಟಿ ಅದರ ಬಳಕೆ ಮುಂದಿನ ಜೀವನದಲ್ಲಿ ವಿಜ್ಞಾನದ ಅವಶ್ಯಕತೆ ಬಹಳಷ್ಟಿದೆಎಂದು ತೋರಿಸಿದೆ. ಹೊಸ ಹೊಸ ತಂತ್ರಜ್ಞಾನಗಳ ಆವಿಷ್ಕಾರಗಳು ಮಾನವನ ಜೀವನಕ್ಕೆ ವರದಾನವಾಗಬಲ್ಲದು. ವಿಜ್ಞಾನ ಆಸಕ್ತಿ ಅನ್ವೇಷಣೆ ರೂಪದಲ್ಲಿ ಹೊರತರಲು ವಿಜ್ಞಾನ ವಸ್ತು ಪ್ರದರ್ಶನ ಬಹಳ ಪ್ರಮುಖವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎನ್.ಆರ್.ಹೆಗಡೆ ಹೇಳಿದರು.

ಅವರು ಸ್ಥಳೀಯ ಹೋಲಿ ರೋಜರಿ ಪ್ರೌಢಶಾಲೆಯ ಸಭಾಭವನದಲ್ಲಿ ತಾಲೂಕ ಮಟ್ಟದ ಡಿಎಸ್‌ಸಿಆರ್‌ಟಿಯಿಂದ ಆಯೋಜಿಸಲ್ಪಟ್ಟಿರುವ ವಿಜ್ಞಾನ ಗಣಿತ ಮಾದರಿಗಳ ವಸ್ತು ಪ್ರದರ್ಶನವನ್ನು ಚಪ್ಪಾಳೆ ಹೊಡೆಯುವುದರ ಮೂಲಕ ವಿದ್ಯುತ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು. ಮಕ್ಕಳಲ್ಲಿ ಸೂಕ್ತವಾಗಿ ಅಡಗಿರುವ ಗಣಿತದ ತಾರ್ಕಿಕ ಸಿದ್ಧಾಂತ ವಿಜ್ಞಾನದ ನೆಲೆಯಲ್ಲಿ ಆವಿಷ್ಕಾರಗೊಂಡಾಗ ಮನುಕುಲದ ಒಳಿತಿಗೆ ಸಹಾಯಕವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಂಚಾಲಕರಾದ ಎಂ ರಾಜಶೇಖರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾರ್ಥಿಗಳಾದ ಸಂಜನಾ ಸಂಗಡಿಗರ ಸ್ವಾಗತಃ ಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದ ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಶಿಕ್ಷಣ ಸಂಯೋಜಕರಾದ ಷಣ್ಮುಖ ಹೆಗಡೆ, ಪ್ರಶಾಂತ್ ಜಿ.ಎನ್., ಜಿಲ್ಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ಅಜಯ ನಾಯಕ, ಯಲ್ಲಾಪುರ ವಿಜ್ಞಾನ ಶಿಕ್ಷಕರ ಬಳಗದ ಅಧ್ಯಕ್ಷರಾದ ಸಂತೋಷ ಶೆಟ್ಟಿ, ಗಣಿತ ಬಳಗದ ಹಿರಿಯ ಶಿಕ್ಷಕರಾದ ಗಣಪತಿ ಕೊಡ್ಲೆಕೆರೆ, ಯಲ್ಲಾಪುರ ತಾಲೂಕ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ಚಂದ್ರಶೇಖರ ಉಪಸ್ಥಿತರಿದ್ದರು.

300x250 AD

ಫಾದರ್ ರೆಮಂಡ್ ಫರ್ನಾಂಡಿಸ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ತಾಲೂಕಿನ ಎಲ್ಲಾ ಪ್ರೌಢಶಾಲೆಗಳಿಂದ ಸುಮಾರು 62ಕ್ಕೂ ಹೆಚ್ಚು ಮಾದರಿಗಳ ಪ್ರದರ್ಶನ ನಡೆಯಿತು. ಗುಂಪು ವಿಭಾಗದಲ್ಲಿ 43 ವೈಯಕ್ತಿಕ ವಿಭಾಗದಲ್ಲಿ 16 ತಂಡಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಕಾಶ ತಾರೀಕೊಪ್ಪ ಬಹುಮಾನ ವಿತರಿಸಿದರು. ತಾಲೂಕಿನ ಎಲ್ಲಾ ಪ್ರೌಢಶಾಲೆಗಳ ವಿಜ್ಞಾನ ಮತ್ತು ಗಣಿತ ಶಿಕ್ಷಕರು ಮಾದರಿಗಳೊಂದಿಗೆ ಭಾಗವಹಿಸಿದ್ದರು.

Share This
300x250 AD
300x250 AD
300x250 AD
Back to top