ಯಲ್ಲಾಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘ, ಗೋಸೇವಾ ಗತಿವಿಧಿ ದಾಂಡೇಲಿ ಹಾಗೂ ಕರಡೊಳ್ಳಿಯ ಗೋವರ್ಧನ ಗೋಶಾಲೆ ಹಾಗೂ ಸಂಕಲ್ಪ ಸೇವಾ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಉಚಿತ ಪಂಚಗವ್ಯ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರ ನ.5ರಂದು ಬೆಳಿಗ್ಗೆ 10.30ರಿಂದ ಸಂಜೆ 5:30ರವರೆಗೆ ಗಾಂಧಿ ಕುಟೀರದ ಸಂಕಲ್ಪ ಉತ್ಸವ ಆವಾರದಲ್ಲಿ ಪ್ರಪ್ರಥಮ ಬಾರಿಗೆ ಉಚಿತ ಪಂಚಗವ್ಯ ಆಯುರ್ವೇದ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ದಾಂಡೇಲಿ ಸಂಯೋಜಕ ಗಣಪತಿ ಕೂಲಿಬೇಣ ಹಾಗೂ ಸಂಕಲ್ಪ ಕಾರ್ಯದರ್ಶಿ ಪ್ರಸಾದ ಹೆಗಡೆ ತಿಳಿಸಿದ್ದಾರೆ.
ಪಂಚಗವ್ಯ ಆಯುರ್ವೇದ ಔಷಧಿಗಳಲ್ಲಿ ಆಳವಾಗಿ ಅಧ್ಯಯನ ಮಾಡಿದ ಪ್ರಸಿದ್ಧ ವೈದ್ಯರಾದ ಡಾ.ವಿಜಯಕುಮಾರ್ ಮಠ ಹುಬ್ಬಳ್ಳಿ ಎಂಡಿ, ಅಕ್ಯೂಪಂಚರ್ ಮತ್ತು ಪಂಚಗವ್ಯ ಥೆರಪಿಸ್ಟ್ ಹುಬ್ಬಳ್ಳಿ ಇವರು ರೋಗಿಗಳನ್ನು ಉಚಿತವಾಗಿ ತಪಾಸಣೆ ಮಾಡಲಿದ್ದಾರೆ. ಜನರಿಗೆ ಜ್ವರ, ರಕ್ತದೊತ್ತಡ, ಸಿಹಿಮೂತ್ರ, ವಾಂತಿಭೇದಿ, ಮೂಲವ್ಯಾಧಿ, ಅಲರ್ಜಿ, ಸಂಧಿವಾತ, ನೆಗಡಿ, ಮೈಕೈನೋವು, ಕ್ಯಾನ್ಸರ್, ಹೃದಯಸಂಬAಧಿ ಖಾಯಿಲೆ, ನಿದ್ರಾಹೀನತೆ, ಸೋರಿಯಾಸಿಸ್, ಅರೆ ತಲೆನೋವು, ಚರ್ಮರೋಗ, ಮೂರ್ಛೆರೋಗ, ಅಶಕ್ತತೆ, ದೃಷ್ಟಿನೇತ್ರ ಸಮಸ್ಯೆ, ಚಿಕ್ಕ ವಯಸ್ಸಿನಲ್ಲೇ ಕೂದಲು ಉದುರುವಿಕೆ, ಬುದ್ಧಿಮಾಂದ್ಯತೆ, ನರಗಳ ದೌರ್ಬಲ್ಯ, ಸ್ತ್ರೀ ರೋಗಗಳು ಹೀಗೆ ಬಹುತೇಕ ಎಲ್ಲ ರೋಗಗಳಿಗೆ ಪಂಚಗವ್ಯ ಔಷಧಿಗಳಲ್ಲಿ ಅದ್ಭುತ ಪರಿಣಾಮದ ಶಕ್ತಿ ಇದೆ ಸಾರ್ವಜನಿಕರು ಈ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಅವರು ಕೋರಿದ್ದಾರೆ.
ಸಂಪರ್ಕಿಸುವ ಸಂಖ್ಯೆ: ಗಣಪತಿ ಕೋಲಿಬೇಣ, ದಾಂಡೇಲಿ ಜಿಲ್ಲಾ ಸಂಯೋಜಕ ಮೊ Tel +918762759240 ಪ್ರಸಾದ ಹೆಗಡೆ, ಸಂಕಲ್ಪ ಸೇವಾ ಸಂಸ್ಥೆ ಮೊ Tel +919620129994 ವಿನಾಯಕ ಕಾನಳ್ಳಿ, ಶಿರಸಿ ವಿಭಾಗ ಪ್ರಮುಖ ಮೊ Tel +919483131417