ಯಲ್ಲಾಪುರ: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನ.4ರಂದು ಪರಿವಾರ (ಶ್ರೀರಂಗ ಕಟ್ಟಿಯವರ ಮನೆ ಮಾಳಿಗೆಯಲ್ಲಿ) ತಿಂಗಳ ನನ್ನ ಕವನ ಹಾಗೂ ಉಪನ್ಯಾಸ ಮತ್ತು ಬಾರಿಸು ಕನ್ನಡ ಡಿಂಡಿಮವ, ಬಾರೋ ಸಾಧನಕೇರಿಗೆ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ.
ನಿವೃತ್ತ ಪ್ರಾಂಶುಪಾಲ ಶ್ರೀರಂಗ ಕಟ್ಟಿ, ಕನ್ನಡ ಸಾಹಿತ್ಯಕ್ಕೆ ಸಂಸ್ಕೃತದ ಕೊಡುಗೆ ಉಪನ್ಯಾಸ ಅಂಗನವಾಡಿ ನಿವೃತ್ತ ತಪಾಸಣಾಧಿಕಾರಿ ಲಕ್ಷ್ಮಿ ಭಟ್ಟ, ಯಲ್ಲಾಪುರದ ಸಿ.ಬಿ.ಎಸ್.ಇ ಸ್ಕೂಲ್ ವಿಶ್ವದರ್ಶನದ ಪ್ರಾಂಶುಪಾಲ ಮಹಾದೇವಿ ಭಟ್ಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಸ್ಥಳೀಯ ಕವಿಗಳು ಕವನ ವಾಚನ ಮಾಡಲಿದ್ದಾರೆ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಪ್ರಕಟಣೆ ತಿಳಿಸಿದೆ.