Slide
Slide
Slide
previous arrow
next arrow

ನಾಳೆಯಿಂದ ಸಹಕಾರ ಭಾರತಿ ರಾಜ್ಯಮಟ್ಟದ ಅಭ್ಯಾಸ ವರ್ಗ

300x250 AD

ಭಟ್ಕಳ: ಮುರ್ಡೇಶ್ವರದ ಆರೆನ್ನೆಸ್ ಸಭಾಭವನದಲ್ಲಿ ರಾಜ್ಯ ಸಹಕಾರ ಭಾರತಿಯ ರಾಜ್ಯ ಕಾರ್ಯಕಾರಿಣಿ ಮತ್ತು ರಾಜ್ಯ ಅಭ್ಯಾಸ ವರ್ಗ ನ.4 ಮತ್ತು 5ರಂದು ನಡೆಯಲಿದ್ದು, ರಾಜ್ಯದ ವಿವಿಧ ಜಿಲ್ಲೆಯಿಂದ ಸಹಕಾರ ಭಾರತಿಯ 200 ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದು, ಕಾರ್ಯಕ್ರಮದ ಯಶಸ್ಸಿಗೆ ಜಿಲ್ಲೆಯ ಎಲ್ಲಾ ಸಹಕಾರಿಗಳ ಸಹಕಾರ ಅಗತ್ಯ ಎಂದು ಸಹಕಾರ ಭಾರತಿಯ ಜಿಲ್ಲಾಧ್ಯಕ್ಷ ಜಿ.ಜಿ.ಶಂಕರ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ದೇಶ ಮತ್ತು ರಾಜ್ಯದಲ್ಲಿ ಸಹಕಾರ ಭಾರತಿ ಮಂಚೂಣಿಯಲ್ಲಿರುವ ಸಂಸ್ಥೆಯಾಗಿದೆ. ಸಹಕಾರಿ ಸಂಸ್ಥೆ ಮತ್ತು ಸಹಕಾರಿಯ ಮುಖ್ಯಸ್ಥರಲ್ಲಿ ಆರ್ಥಿಕ ಶಿಸ್ತು, ದೇಶಪ್ರೇಮ, ಭಾರತೀಯ ಸಂಸ್ಕೃತಿಯನ್ನು ಜೊತೆಯಾಗಿಸಿ ಸೇವೆ ನೀಡಬೇಕೆನ್ನುವ ಉದ್ದೇಶದಿಂದ ದೇಶದಾದ್ಯಂತ ಆಗಾಗ ಅಭ್ಯಾಸ ವರ್ಗ ನಡೆಸಲಾಗುತ್ತಿದ್ದು, ನಮ್ಮ ಜಿಲ್ಲೆಯ ಮುರುಡೇಶ್ವರದಲ್ಲಿ ನ.4 ಮತ್ತು 5 ರಂದು ಅಭ್ಯಾಸ ವರ್ಗ ನಡೆಯಲಿದೆ. ಅಭ್ಯಾಸ ವರ್ಗದ ಯಶಸ್ಸಿಗೆ ಈಗಾಗಲೇ ಎಲ್ಲಾ ಸಿದ್ಧತೆ ನಡೆಸಲಾಗಿದ್ದು, ಜಿಲ್ಲೆಯ ಎಲ್ಲಾ ಸಹಕಾರಿಗಳ ಸಹಾಯ ಸಹಕಾರ ಅಗತ್ಯವಿದೆ. ರಾಜ್ಯಮಟ್ಟದ ಕಾರ್ಯಕಾರಿಣಿ ನ. 4 ರಂದು ಬೆಳಿಗ್ಗೆ ನಡೆಯಲಿದ್ದು, ಅದೇ ದಿನ ಸಂಜೆ 3 ಗಂಟೆಗೆ ಅಭ್ಯಾಸ ವರ್ಗವನ್ನು ಸಹಕಾರ ಭಾರತಿಯ ರಾಜ್ಯಾಧ್ಯಕ್ಷ ರಾಜಶೇಖರ ಶೀಲವಂತ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಸಹಕಾರಿ ಭಾರತಿ ಜಿಲ್ಲಾಧ್ಯಕ್ಷ ಜಿ ಜಿ ಶಂಕರ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಸಹಕಾರ ಭಾರತಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಉದಯ ಜೋಷಿ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂಜಯ ಪಾಚ್ ಪೋರ್, ಸಹಕಾರ ಭಾರತಿ ರಾಷ್ಟ್ರೀಯ ಸಂರಕ್ಷಕ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮೋಹನದಾಸ ಜೆ ನಾಯಕ, ಜಯಲಕ್ಷ್ಮೀ ಸೌಹಾಆರ್ದ ಸಹಕಾರಿ ಸಂಘದ ಲತಾ ಆರ್ ನಾಯಕ ಪಾಲ್ಗೊಳ್ಳಲಿದ್ದಾರೆ ಎಂದರು. ಜಿಲ್ಲೆಯಲ್ಲಿ ಸಹಕಾರ ಭಾರತಿಯನ್ನು ಪ್ರಭಲಗೊಳಿಸುವುದಾಗಿ ಹೇಳಿದ ಜಿ ಜಿ ಶಂಕರ ಅವರು ಮುಂದಿನ ದಿನಗಳಲ್ಲಿ ಪ್ರತಿ ತಾಲ್ಲೂಕಿನಲ್ಲಿಯೂ ಸಮಿತಿ ರಚನೆ, ಸಹಕಾರಿ ಸಂಸ್ಥೆಯ ಸಿಬ್ಬಂದಿಗಳು ಮತ್ತು ನಿರ್ದೇಶಕರಿಗೆ ಅಭ್ಯಾಸ ವರ್ಗ ಮಾಡಲಾಗುವುದು ಎಂದರು.

300x250 AD

ಸಭೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ, ಹಿರಿಯ ಸಹಕಾರಿ ಧುರೀಣ ಸುಭಾಷ್ ಶೆಟ್ಟಿ, ಮಂಜುನಾಥ ನಾಯ್ಕ ಚಿತ್ರಾಪುರ, ಕೃಷ್ಣಾ ನಾಯ್ಕ, ರಾಘವೇಂದ್ರ ಹೆಬ್ಬಾರ, ಗಣೇಶ ನಾಯ್ಕ ಮುಂತಾದವರಿದ್ದರು.

Share This
300x250 AD
300x250 AD
300x250 AD
Back to top