ಶಿರಸಿ: ಕನ್ನಡ ಏಕೀಕರಣದ ಹಿಂದೆ ಅನೇಕ ಹೋರಾಟಗಾರರು ಹಾಗೂ ಸಾಹಿತಿಗಳ ತ್ಯಾಗ ಸ್ಮರಣೀಯ ಎಂದು ಪ್ರೊ ಕೆ ಎನ್. ಹೊಸಮನಿ ಹೇಳಿದರು.
ಅವರು ಇಲ್ಲಿನ ಸ್ಕೊಡ್ವೆಸ್ ಸಂಸ್ಥೆ ಆರಾಧನಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು. ಕನ್ನಡ ನಾಡು ನುಡಿ ಸಂಸ್ಕೃತಿ ವಿಶಿಷ್ಟವಾದದು ಕನ್ನಡ ಸಾಹಿತ್ಯಕ್ಕೆ ಸಿಕ್ಕ ಮನ್ನಣೆ ಅಪೂರ್ವ ಆಗಿದ್ದು ಭಾಷೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾವು ಚಿಂತಿಸ ಬೇಕು ಎಂದರು. ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ್ ನಾಯ್ಕ ಮಾತನಾಡಿ ಭಾಷೆ ಬಳಕೆಯ ಮಹತ್ವ ಕುರಿತು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಮಾರ್ ವಿ. ಕೂರ್ಸೆ, ನಾಡಿನ ಉದ್ದಗಲಕ್ಕೂ ಕನ್ನಡವನ್ನು ಪಸರಿಸುವ ಕೆಲಸ ನಿರಂತರವಾಗಿ ನಡೆಯಬೇಕು ಎಂದರು. ಸಂಸ್ಥೆಯ ಕಾರ್ಯದರ್ಶಿ ಸರಸ್ವತಿ ಎನ್ ರವಿ, ಸದಸ್ಯ ದಯಾನಂದ ಆಗಸೆ ಹಾಗೂ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಈ ವೇಳೆ ಸಿಬ್ಬಂದಿಗಳಿಂದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಪಾತ್ರ ಅಭಿನಯ, ಹಾಗೂ ಕನ್ನಡ ಗಾಯನ ಹಮ್ಮಿಕೊಳ್ಳಲಾಗಿತ್ತು.