Slide
Slide
Slide
previous arrow
next arrow

ಸ್ನಾತಕೋತ್ತರ ಪದವಿಯಲ್ಲಿ ಹೊನ್ನಾವರದ ರಾಜೇಶ್ವರಿಗೆ ನಾಲ್ಕು ಚಿನ್ನದ ಪದಕ

300x250 AD

ಹೊನ್ನಾವರ: ತಾಲೂಕಿನ ಜಲವಳ್ಳಿಯ ನೆಲ್ಲಗದ್ದೆಯ ರಾಜೇಶ್ವರಿ ನಾಯ್ಕ ಧಾರವಾಡ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿಯ ಭೌತಶಾಸ್ತ್ರ ವಿಭಾಗದಲ್ಲಿ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ನಡೆದ 73ನೇ ಘಟಿಕೊತ್ಸವ ಕಾರ್ಯಕ್ರಮದಲ್ಲಿ 4 ಚಿನ್ನದ ಪದಕವನ್ನು ರಾಜ್ಯದ ರಾಜ್ಯಪಾಲರಿಂದ ಸ್ವೀಕರಿಸಿದರು.

ಲಲಿತಾ ಮತ್ತು ಮಂಜುನಾಥ ನಾಯ್ಕ ಪುತ್ರಿಯಾದ ಇವರು ಪ್ರಾಥಮಿಕ ಶಿಕ್ಷಣವನ್ನು ಮರ್ನಕಳಿ, ಮರಬಳ್ಳಿ ಸರ್ಕಾರಿ ಶಾಲೆಯಲ್ಲಿ, ಪ್ರೌಡಶಿಕ್ಷಣವನ್ನು ಜಲವಳ್ಳಕರ್ಕಿ, ನಂತರ ಎಸ್.ಡಿ.ಎಂ.ಕಾಲೇಜು ಹೊನ್ನಾವರದಲ್ಲಿ ಪಿ.ಯು.ಸಿ ಶಿಕ್ಷಣ, ಪದವಿ ಶಿಕ್ಷಣ ಎಸ್.ಡಿ.ಎಂ.ಕಾಲೇಜಿನಲ್ಲಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಶಿಕ್ಷಣ ಪಡೆದಿದ್ದಾರೆ.

ಪ್ರಸುತ್ತ ಬೆಂಗಳೂರಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಪಡೆಯುತ್ತಿದ್ದಾರೆ. ಬಡತನವನ್ನು ಲೆಕ್ಕಿಸದೇ ಇವರು ಕಠಿಣ ಪರಿಶ್ರಮದ ಮೂಲಕ ಸಾಧನೆ ಮಾಡಿದ ಗ್ರಾಮೀಣ ಪ್ರತಿಭೆಯಾಗಿದ್ದಾರೆ. ಎಸ್.ಎಸ್.ಎಲ್.ಸಿ ಕನ್ನಡ ವಿಭಾಗದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಬಳಿಕ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರದ ಹಣದ ಮೂಲಕ ಪಿ.ಯು.ಸಿಯ ಅಧ್ಯಯನಕ್ಕೆ ಅನೂಕೂಲವಾಯಿತು. ಅ ನಂತರ ದೊರೆಯುವ ಶಿಷ್ಯವೇತನದ ಮೂಲಕ ಬಿಎಸ್ಸಿ ವಿಶ್ವವಿದ್ಯಾಲಯಕ್ಕೆ ತೃತೀಯ ಸ್ಥಾನ ಪಡೆದು ಎಂ.ಎಸ್ಸಿ ಆಯ್ಕೆ ಮಾಡಿಕೊಳ್ಳುವ ಮೂಲಕ ಈ ಸಾಧನೆ ಮಾಡಿದ್ದಾರೆ. ಶಿಕ್ಷಣದ ಜೊತೆಗೆ ಮೆಹಂದಿ ಹಾಗೂ ರಂಗೋಲಿ  ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಸಾಧನೆ ಮಾಡಿದ್ದಾರೆ.

ನನ್ನ ಸಾಧನೆಗೆ ನನ್ನ ತಂದೆ ತಾಯಿ ಜೊತೆಗೆ ಅಣ್ಣ ಮಾರುತಿ, ಅಕ್ಕ ಅನುಪಮಾ ಹಾಗೂ ಎಲ್ಲಾ ಶಿಕ್ಷಕವೃಂದದವರ ಸಹಕಾರದ ಮೇರೆಗೆ ಈ ಸಾಧನೆ ಮಾಡಲು ಸಾಧ್ಯವಾಯಿತು. ಗ್ರಾಮೀಣ ಭಾಗ ಪಟ್ಟಣ ಎನ್ನದೇ ಎಲ್ಲರೂ ಪರಿಶ್ರಮ ಪಟ್ಟು ಅಧ್ಯಯನ ಮಾಡಿದರೆ ಸಾಧನೆ ಮಾಡಲು ಸಾಧ್ಯವಿದೆ ಎಂದು ರಾಜೇಶ್ವರಿ ನಾಯ್ಕ ಪತ್ರಿಕೆ ತಿಳಿಸಿದರು. ಹೊನ್ನಾವರ ತಾಲೂಕಿನ ಗ್ರಾಮೀಣ ಭಾಗದ ಪ್ರತಿಭಾವಂತೆಯು ಸಾಧನೆಗೆ ರಾಜ್ಯದೆಲ್ಲಡೆಯಿಂದ ಅಭಿನಂದನೆ ವ್ಯಕ್ತವಾಗುತ್ತಿದೆ.

300x250 AD

Share This
300x250 AD
300x250 AD
300x250 AD
Back to top