Slide
Slide
Slide
previous arrow
next arrow

ಉಂಚಳ್ಳಿ ಪಂಚಾಯತ್ ಅಧ್ಯಕ್ಷರಾಗಿ ಮಂಜಮ್ಮ ಆಯ್ಕೆ

300x250 AD

ಶಿರಸಿ: ತಾಲೂಕಿನ ಉಂಚಳ್ಳಿ ಪಂಚಾಯತ್ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಮಂಜಮ್ಮ ಬೋವಿ ಗೆಲುವನ್ನ ಸಾಧಿಸಿದರು. ಪಂಚಾಯತ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮಂಗಳವಾರ ನಡೆಯಿತು. 10 ಸದಸ್ಯರ ಬಲ ಪಂಚಾಯತ್ ಹೊಂದಿದ್ದು 9 ಸದಸ್ಯರು ಮತದಾನದಲ್ಲಿ ಪಾಲ್ಗೊಂಡಿದ್ದರು.

ಇನ್ನು ಈ ಬಾರಿ ಪಂಚಾಯತ್ ಅಧಿಕಾರವನ್ನ ಹಿಡಿಯಲೇಬೇಕು ಎಂದು ಸ್ಥಳೀಯ ಶಾಸಕ ಹೆಬ್ಬಾರ್ ಬೆಂಬಲಿತರು ಪ್ರಯತ್ನಕ್ಕೆ ಇಳಿದು ಮಾಲತಿ ಹರೀಶ್ ನಾಯ್ಕ ಎನ್ನುವವರಿಗೆ ಕಣಕ್ಕೆ ಇಳಿಸಿದ್ದರು. ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಮಂಜಮ್ಮ ಬೋವಿ 6 ಮತಗಳನ್ನ ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು.

ಇನ್ನು ಪಕ್ಷೇತರವಾಗಿ ಸ್ಪರ್ಧಿಸಿದ್ದ ನೇತ್ರಾವತಿ ಮಡಿವಾಳ ಎನ್ನುವವರು 2 ಮತವನ್ನ ಪಡೆದರೆ, ಇತ್ತ ಹೆಬ್ಬಾರ್ ಬೆಂಬಲಿತ ಮಾಲತಿ ಹರೀಶ್ ನಾಯ್ಕ ಕೇವಲ 1 ಮತವನ್ನ ಮಾತ್ರ ಪಡೆದರು.

300x250 AD

Share This
300x250 AD
300x250 AD
300x250 AD
Back to top