ಹೊನ್ನಾವರ: ಕಾಸರಕೋಡ ಬಂದರು ನಿರ್ಮಾಣ ಆಗಬೇಕು ಎನ್ನುವುದು ನಮ್ಮ ಸಂಘದ ಆಗ್ರಹವಲ್ಲ ಎಂದು ತಾಲೂಕ ಲಾರಿ ಚಾಲಕ ಮಾಲಕರ ಸಂಘದ ಅಧ್ಯಕ್ಷ ಮೋಹನ್ ಆಚಾರಿ ತಿಳಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯರವರು ಹೊನ್ನಾವರಕ್ಕೆ ಬಂದಾಗ ಸಂಘಟನೆ ವತಿಯಿಂದ ಮನವಿ ಸಲ್ಲಿಸಲಾಗಿತ್ತು. ಮನವಿಯಲ್ಲಿ ಲಾರಿ ಚಾಲಕ ಹಾಗೂ ಮಾಲಿಕರಿಗೆ ಸರಿಯಾಗಿ ಕೆಲಸ ಇಲ್ಲದೇ ಪರದಾಡುವಂತಾಗಿದ್ದು ಮರಳು ತೆಗೆಯಲು ಅನುಮತಿಯನ್ನ ಕೊಡಬೇಕು, ಹಾಗೂ ಒಂದೊಮ್ಮೆ ಕಾಸರಕೋಡ ಬಂದರು ನಿರ್ಮಾಣ ಕಾಮಗಾರಿಗೆ ನ್ಯಾಯಾಲಯ ಅನುಮತಿ ನೀಡಿದರೆ ಸ್ಥಳೀಯ ಲಾರಿ ಚಾಲಕ ಮಾಲಕರಿಗೆ ಕೆಲಸ ನೀಡುವಂತೆ ತಿಳಿಸಿದ್ದೆವು.
ಆದರೆ ಕಾಸರಕೋಡ ಬಂದರು ನಿರ್ಮಾಣ ಆಗಬೇಕು ಎನ್ನುವುದು ನಮ್ಮ ಸಂಘದ ಒತ್ತಾಯವಲ್ಲ. ನಮ್ಮ ಪ್ರಮುಖ ಒತ್ತಾಯ ಅಕ್ರಮವಾಗಿ ಮರಳನ್ನ ತೆಗೆಯುವುದನ್ನ ತಡೆದು ಸಕ್ರಮವಾಗಿಯೇ ಮರಳು ತೆಗೆಯಲು ಅನುಮತಿ ನೀಡಿ ಸರ್ಕಾರಕ್ಕೆ ರಾಜಧನ ತುಂಬವಂತೆ ಮಾಡಬೇಕು. ಅಲ್ಲದೇ ಸಕ್ರಮವಾಗಿ ಮರಳು ತೆಗೆಯಲು ಅನುಮತಿ ಕೊಟ್ಟರೇ ತಾಲೂಕಿನ ಲಾರಿ ಚಾಲಕ ಹಾಗೂ ಮಾಲಿಕರಿಗೆ ಕೆಲಸ ಸಿಗಲಿದೆ ಎಂದು ಹೇಳಿದ್ದೆವು. ಕಾಸರಕೋಡ ಬಂದರು ಕಾಮಗಾರಿ ಪುನರಾರಂಬಿಸಲು ನಾವು ಯಾವತ್ತು ಆಗ್ರಹವಾಗಲಿ, ಹೋರಾಟವಾಗಲಿ ಮಾಡಿಲ್ಲ ಎಂದು ಮೋಹನ್ ಆಚಾರಿ ತಿಳಿಸಿದ್ದಾರೆ.