ಜೊಯಿಡಾ: ತಾಲೂಕಿನ ಜೊಯಿಡಾ ಸಹಕಾರಿ ಸಂಘದಲ್ಲಿ ನಡೆದ ಕೋಟ್ಯಾಂತರ ಅವ್ಯವಹಾರದ ಕುರಿತು ಜೋಯಿಡಾದ ಶಿವಾಜಿ ವೃತ್ತದ ಬಳಿ ರಸ್ತಾರೋಖಾ ನಡೆಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಜೊಯಿಡಾ ವ್ಯಾಪಾರಸ್ಥರ ಸಂಘ ಮತ್ತು ಇತರ ಸಂಘಟನೆಗಳು ಹಾಗೂ ಜೋಯಿಡಾ ಸ್ಥಳೀಯರು ಸೇರಿ ಸಂಘದಿಂದ ಜನರಿಗೆ ಆದ ಮೋಸದ ಬಗ್ಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಕೂಡಲೇ ಜನರ ಹಣವನ್ನು ವಾಪಾಸ್ ಮಾಡಬೇಕು. ತಪ್ಪಿತಸ್ಥ ಅಧ್ಯಕ್ಷರು, ಕಾರ್ಯದರ್ಶಿ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕು, ಸಿಓಡಿ ತನಿಖೆ ಆಗಬೇಕು ಎಂದು ಪ್ರತಿಭಟನೆ ನಡೆಸಲಾಯಿತು.