Slide
Slide
Slide
previous arrow
next arrow

ಜನರಿಗೆ ಸ್ಪಂದಿಸದ ಅಧಿಕಾರಿಗಳನ್ನ ಜಿಲ್ಲೆಯಲ್ಲಿಟ್ಟುಕೊಳ್ಳಲ್ಲ: ಮಂಕಾಳ ವೈದ್ಯ

300x250 AD

ಯಲ್ಲಾಪುರ: ತಾಲೂಕಿನ ಎಲ್ಲಾ ಇಲಾಖೆಗಳ ತಾಲೂಕಾ ಮಟ್ಟದ ಅಧಿಕಾರಿಗಳ, ಇಲಾಖಾ ಪ್ರಗತಿ ಪರಿಶೀಲನಾ ಸಭೆ ಸೋಮವಾರ ಪಟ್ಟಣದ ಎಪಿಎಂಸಿ ರೈತ ಸಭಾಭವನದಲ್ಲಿ ಸಚಿವ ಮಂಕಾಳ ವೈದ್ಯ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರತಿ ತಾಲೂಕಿನಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸುವುದಾಗಿ ಹೇಳಿದರು.

ಇನ್ನು ಈ ಸಭೆ ಜನರ ಪ್ರಯೋಜನಕ್ಕೆ ಬಂದರೆ ಅದು ಸಾರ್ಥಕವಾದಂತೆ. ಶಾಸಕ ಶಿವರಾಮ ಹೆಬ್ಬಾರ್ ಈ ಭಾಗಕ್ಕೆ ಎಲ್ಲ ಮೂಲಭೂತ ಸೌಕರ್ಯವನ್ನು ಕೊಟ್ಟಿದ್ದಾರೆ. ಯಾರೂ ಅಧಿಕಾರಿಗಳು ಜನರ ಸ್ಪಂದನೆಗೆ ದೊರಕುವುದಿಲ್ಲವೋ, ನಾವು ನಮ್ಮ ಜಿಲ್ಲೆಯಲ್ಲಿ ಅವರನ್ನು ಇಟ್ಟುಕೊಳ್ಳುವುದಿಲ್ಲ. ಇಂದು ನಮ್ಮ ಕಾಂಗ್ರೆಸ್ ಸರ್ಕಾರ ಇದೆ. ಇಲ್ಲಿ ಬಿಜೆಪಿ ಶಾಸಕರಿದ್ದಾರೆ. ಆದರೇ ಅಭಿವೃದ್ಧಿ ವಿಷಯದಲ್ಲಿ ಪಕ್ಷವನ್ನು ಪರಿಗಣಿಸಲಾಗುವುದಿಲ್ಲ. ನಮ್ಮ ಸರ್ಕಾರ ಐದು ಗ್ಯಾರಂಟಿಯನ್ನು ಕೊಟ್ಟಿದ್ದೇವೆ. ಅದನ್ನು ಎಲ್ಲ ಪಕ್ಷದವರು ಪ್ರಯೋಜನ ಪಡೆದಿದ್ದಾರೆ. ಜನ ಕಷ್ಟದಲ್ಲಿದ್ದರೆ ಅವರಿಗೆ ಅಧಿಕಾರಿಗಳು ಸಹಾಯ ಮಾಡಬೇಕು. ನಿವೃತ್ತಿ ಎಲ್ಲರಿಗೂ ಇದೆ ಆದರೇ ಜನರಿಗೆ ನೀವು ಮಾಡಿರುವ ಕೆಲಸ ನೆನಪಿನಲ್ಲಿರುತ್ತದೆ. ನಮ್ಮ ಉದ್ದೇಶ ಜನರಿಗೆ ಸ್ಪಂದಿಸಬೇಕು. ಇಲ್ಲಿ ಜನಪರ ಕೆಲಸ ಮಾಡುವುವವರು ಎಷ್ಟು ವರ್ಷ ಬೇಕಾದರೂ ಉಳಿಯಬಹುದು. ಐದು ಗ್ಯಾರಂಟಿಯಲ್ಲಿ ನಾಲ್ಕು ಗ್ಯಾರಂಟಿಯನ್ನು ಜನರಿಗೆ ಮುಟ್ಟಿಸಿದ್ದೇವೆ. ನಮ್ಮ ಯೋಜನೆಯನ್ನು ಅಧಿಕಾರಿಗಳ ಕೈಯಲ್ಲಿ ಇಟ್ಟಿದ್ದೆವೆ. ಅದನ್ನು ನೀವು ಜನರಿಗೆ ತಲುಪಿಸಬೇಕು. ನಮ್ಮ ಉದ್ದೇಶಿತ ಯೋಜನೆ ಜನರಿಗೆ ತಲುಪದಿದ್ದರೇ ಸಹಜವಾಗಿ ನಮಗೆ ಬೇಸರವಾಗುತ್ತದೆ ಎಂದರು.

ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಮಾತನಾಡಿ, ಈ ಪರಿಶೀಲನಾ ಸಭೆಯಲ್ಲಿ ಯಾರೂ ಅರ್ಜಿ ನೀಡುತ್ತಾರೆ ಅಥವಾ ಮೌಕಿಕವಾಗಿ ಹೇಳುತ್ತಾರೆ. ಆ ಬಗ್ಗೆ ಸಂಬ0ಧಿಸಿದ ಅಧಿಕಾರಿಗಳು ಮಹತ್ವ ನೀಡಬೇಕು. ಎಂದ ಅವರು, ಜಿಲ್ಲೆಯ ಎಲ್ಲ ಅಧಿಕಾರಿಗಳು ಸರಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಡುತ್ತೆವೆ. ಮುಂದಿನ ದಿನಗಳಲ್ಲಿ ಎಲ್ಲಸಮಸ್ಯೆಗಳಿಗೂ ಸ್ಪಂಧಿಸುತ್ತೆವೆ ಎಂದು ಸಚಿವರಿಗೆ ಭರವಸೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ ವರದಿ ನೀಡಿ, ತಾಲೂಕಿನಲ್ಲಿ 11 ಸಾವಿರಕ್ಕೂ ಹೆಚ್ಚು ಮಕ್ಕಳು ಸರ್ಕಾರಿ ಶಾಲೆಗಳ್ಳಿ ಓದುತ್ತಿದ್ದಾರೆ, 8 ಸಾವಿರಕ್ಕೂ ಹೆಚ್ಚು ಮಕ್ಕಳು ಖಾಸಗಿ ಶಾಲೆಗಳಲ್ಲಿ ಓದುತ್ತಿದ್ದಾರೆ. ಪ್ರಸ್ತುತ ನಡೆದ ನೇಮಕಾತಿಯಲ್ಲಿ 47 ಹುದ್ದೆಗಳ ನೀಡಲಾಗಿದೆ. ಅದರಲ್ಲಿ 10 ಜನ ಹಾಜರಾಗಿದ್ದಾರೆ. ಅನಾರೋಗ್ಯ ಪೀಡಿತ 7 ಮಕ್ಕಳಿಗೆ ಹೃದಯ ಶಸ್ತ್ರ ಚಿಕಿತ್ಸೆ ಮಾಡಿಸಲಾಗಿದೆ ಎಂದು ಮಾಹಿತಿ ನೀಡಿದರು. ಲೋಕೋಪಯೋಗಿ ಎಇಇ ವಿ.ಎಂ.ಭಟ್, ಗುತ್ತಿಗೆದಾರರಿಗೆ 36 ಕೋಟಿ ರೂ ಕೊಡುವುದು ಬಾಕಿಯಿದೆ. ಎಲ್ಲಾ ಕೆಲಸಗಳು ಮುಂದಿನ 3 ತಿಂಗಳಲ್ಲಿ ಮುಗಿಸುತ್ತೆವೆ ಎಂದು ಭರವಸೆ ನೀಡಿದರು.

300x250 AD

ಹಿಂದಿನ ಸರ್ಕಾರದ ಸಾಲ ತೀರಿಸಿ, ನಂತರ ಹೊಸ ಕಾಮಗಾರಿಗಳ ಟೆಂಡರ್ ಕರೆಯುತ್ತೆವೆ ಎಂದರು. ದುರಸ್ತಿ ಮಾಡಲು ಸಾಧ್ಯ ಇರುವ ರಸ್ತೆಗಳನ್ನು ದುರಸ್ತಿ ಮಾಡಿ, ಪಿಡಬ್ಲುಡಿ ರಸ್ತೆ ವ್ಯಾಪ್ತಿಯ ಸ್ಥಳವನ್ನು ಅತಿಕ್ರಮಿಸಿದವರನ್ನು ಖುಲ್ಲಾಗೊಳಿಸಿ ಎಂದು ಸೂಚಿಸಿದರು. ಜಿ.ಪಂ ಇಂಜಿನಿಯರಿ0ಗ್ ವಿಭಾಗದ ಎಇಇ ಅಶೋಕ ಬಂಟ್ ಮಾತನಾಡುವಾಗ, ಸಚಿವ ವೈದ್ಯ ಮಧ್ಯ ಪ್ರವೇಶಿಸಿ, ಶಾಲೆಯ ಕೆಲಸಗಳಿಗೆ ವಿಳಂಬ ಮಾಡಲು ಹೋಗಬೇಡಿ, ಮುಂದಿನ ಮೂರು ತಿಂಗಳಲ್ಲಿ ಕೆಲಸ ಮುಗಿಯದಿದ್ದರೇ, ಗುತ್ತಿಗೆದಾರರನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸಿ. ಇಲ್ಲದಿದ್ದರೇ ನಿಮ್ಮನ್ನು ವರ್ಗಾಯಿಸಲಾಗುವುದು ಎಂದು ಎಚ್ಚರಿಸಿದರು.

ಜಿ.ಪಂ ಸಿಇಓ ಈಶ್ವರಕುಮಾರ್ ಖಂಡೂ, ಡಿಸಿಎಫ್ ಎಸ್.ಜಿ.ಹೆಗಡೆ, ಶಿರಸಿ ಉಪವಿಭಾಗಾಧಿಕಾರಿ ದೇವರಾಜ, ರಾ.ವಿ.ಯೋ.ಮ. ಅ ಉಪಾಧ್ಯಕ್ಷ ಪ್ರಮೋದ ಹೆಗಡೆ, ತಹಶೀಲ್ದಾರ ಎಂ.ಗುರುರಾಜ, ತಾ.ಪಂ. ಆಡಳಿತಾಧಿಕಾರಿ ನಟರಾಜ, ತಾ.ಪಂ ಇಓ ಜಗದೀಶ ಕಮ್ಮಾರ, ಎಸಿಎಫ್ ಗಳಾದ ಹಿಮವತಿ ಭಟ್ಟ ಹಾಗೂ ಆನಂದ ಎಚ್ ವೇದಿಕೆಯಲ್ಲಿದ್ದರು.

Share This
300x250 AD
300x250 AD
300x250 AD
Back to top