ಯಲ್ಲಾಪುರ: ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ 73ನೇ ಘಟಿಕೋತ್ಸವದಲ್ಲಿ ಸಮಾಜಕಾರ್ಯ ಅಧ್ಯಯನ ವಿಭಾಗದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದ ಸಂಜಯ್ ಚವ್ಹಾಣಗೆ ರಾಜ್ಯಪಾಲ ಥಾವರ್‌ಚಂದ್ ಗೆಲ್ಹೋಟ್ ಬಂಗಾರದ ಪದಕ ಪ್ರದಾನ ಮಾಡಿದರು.
ಪ್ರಸ್ತುತ ಧಾರವಾಡದ ರಾಯಾಪುರ ಶಾಹಿ ಎಕ್ಸ್ಪೋರ್ಟ್ ಘಟಕ- 54ರಲ್ಲಿ ಕಲ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಂಜಯ್, ತಾಲೂಕಿನ ಬೈಲಂದುರು ಗ್ರಾಮದವರಾಗಿದ್ದಾರೆ. ಸಂಜಯ್ ಚವ್ಹಾಣ (2900ಕ್ಕೆ 2116, 72.96%) ಕರ್ನಾಟಕ ವಿಶ್ವವಿದ್ಯಾಲಯದ ಸಮಾಜಕಾರ್ಯ ಅಧ್ಯಯನ ವಿಭಾಗದಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು.
ಘಟಿಕೋತ್ಸವ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಕ.ವಿ.ವಿ ಕುಲಪತಿ ಕೆ.ಬಿ.ಗುಡಸಿ, ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಪ್ರೊ.ಡಾ.ಸಂಗೀತಾ ಆರ್.ಮಾಣೆ, ಸಹಾಯಕ ಪ್ರಾಧ್ಯಾಪಕ ಡಾ.ರೇಣುಕಾ ಇ.ಅಸಗಿ, ಪ್ರೊ.ಡಾ.ರವೀಂದ್ರ ಎಂ., ಸಹಾಯಕ ಭೋದಕರಾದ ಡಾ.ನವೀನ ತಿಪ್ಪ, ವೀರೇಶ್ ಹೆಚ್., ತುಕಾರಾಂ ನಾಯಕ್, ರಾಜವರ್ಧನ್ ಹೊಸಮನಿ, ಶುಭಶ್ರೀ ಹಾಗೂ ಭೋದಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.