Slide
Slide
Slide
previous arrow
next arrow

ಲಯನ್ಸ ಬಳಗದಿಂದ ದಿ. ಜಿ.ಎಸ್. ಹೆಗಡೆ ಬಸವನಕಟ್ಟೆಗೆ ಶೃದ್ಧಾಂಜಲಿ

300x250 AD

ಶಿರಸಿ:ಇಲ್ಲಿನ ಲಯನ್ಸ ಸಭಾಂಗಣದಲ್ಲಿ ಶಿರಸಿ ಲಯನ್ಸ ಕ್ಲಬ್ ಹಾಗೂ ಶಿರಸಿ ಲಯನ್ಸ ಎಜುಕೇಷನ್ ಸೊಸೈಟಿ ಆಶ್ರಯದಲ್ಲಿ ವಿಧಿವಶರಾದ ದಿ. ಜಿ.ಎಸ್ ಹೆಗಡೆ ಬಸವನಕಟ್ಟೆ ಕುರಿತು ಶೃದ್ಧಾಂಜಲಿ ಸಭೆ ಹಮ್ಮಿಕೊಳ್ಳಲಾಗಿತ್ತು.

ಶಿರಸಿ ಲಯನ್ಸ ಕ್ಲಬ್ ಅಧ್ಯಕ್ಷರಾದ ಎಂ.ಜೆ.ಎಫ್. ಲಯನ್ ಅಶೋಕ ಹೆಗಡೆ ಪ್ರಸ್ತಾವಿಕವಾಗಿ ಮಾತನಾಡಿದರು. ಶಿರಸಿ ಲಯನ್ಸ ಎಜುಕೆಷನ್ ಸೊಸೈಟಿಯ ಗೌರವ ಪ್ರಧಾನ ಕಾರ್ಯದರ್ಶಿಗಳಾದ ಲಯನ್ ಪ್ರೊ.ರವಿ ನಾಯಕ್, ಹಿರಿಯ ಲಯನ್ಸ ಬಂಧುಗಳಾದ ಲಯನ್ ಡಾ. ಕೆ.ಬಿ.ಪವಾರ, ಲಯನ್ ಡಾ. ಜಿ.ಎ. ಹೆಗಡೆ ಸೊಂದಾ, ಲಯನ್ ಎಂ.ಅಯ್. ಹೆಗಡೆ, ಎಂ.ಜೆ.ಎಫ್. ಲಯನ್ ಕೆ.ಬಿ.ಲೋಕೇಶ ಹೆಗಡೆ, ಎಂ.ಜೆ.ಎಫ್. ಲಯನ್ ಶ್ರೀಕಾಂತ ಹೆಗಡೆ, ಲಯನ್ ಮನೋಹರ ಮಲ್ಮನೆ, ಲಯನ್ಸ ಶಾಲಾ ಕಾಲೇಜು ಸಮೂಹಗಳ ಪ್ರಾಂಶುಪಾಲರಾದ ಶಶಾಂಕ ಹೆಗಡೆ ಇವರುಗಳು ಜಿ.ಎಸ್ ಹೆಗಡೆ ಇವರ ಜೊತೆ ತಮ್ಮ ಒಡನಾಟಗಳನ್ನು ಮೆಲುಕು ಹಾಕುತ್ತಾ ನುಡಿ ನಮನ ಸಲ್ಲಿಸಿದರು.

300x250 AD

ಶಿರಸಿ ಲಯನ್ಸ ಕ್ಲಬ್ ಸ್ಥಾಪನಾ ಸದಸ್ಯರಾಗಿ, ಶಿರಸಿ ಲಯನ್ಸ ಶಿಕ್ಷಣ ಸಂಸ್ಥೆಗಳ ಗೌರವ ಕಾರ್ಯದರ್ಶಿಗಳಾಗಿ ಸಂಸ್ಥೆಯ ಏಳಿಗೆಗೆ ಕಾರಣರಾದ ಜಿ.ಎಸ್ ಹೆಗಡೆಯವರ ಸೇವೆಯನ್ನು ಅರ್ಥಪೂರ್ಣವಾಗಿ ಸ್ಮರಿಸಲಾಯಿತು. ಇದೇ ಸಂದರ್ಭದಲ್ಲಿ ಬಸವನಕಟ್ಟೆ ಅವರ ಸ್ಮರಣಾರ್ಥ ಶಿರಸಿ ಲಯನ್ಸ ಕ್ಲಬ್ ಸದಸ್ಯರು ಸ್ಪಂದನ ಕಾರ್ಯಕ್ರಮದಡಿಯಲ್ಲಿ ಶ್ರೀಪಾದ ಹೆಗಡೆ ಇವರಿಗೆ ವಿಲ್‌ಚೇರ್ ಹಾಗೂ ರೂ.5000 ಧನ ಸಹಾಯ ನೀಡಿದರು. ಶಿರಸಿ ಲಯನ್ಸ ಎಜುಕೆಷನ್ ಸೊಸೈಟಿ ಕೋಶಾಧ್ಯಕ್ಷರಾದ ಎಂ.ಜೆ.ಎಫ್. ಲಯನ್ ಉದಯ ಸ್ವಾದಿ, ಲಯನ್ಸ ಕ್ಲಬ್ ಕಾರ್ಯದರ್ಶಿಗಳಾದ ಲಯನ್ ಜ್ಯೋತಿ ಅಶ್ವತ್ಥ ಹೆಗಡೆ, ಲಯನ್ಸ ಕ್ಲಬ್ ಕೋಶಾದ್ಯಕ್ಷರಾದ ಲಯನ್ ಶರಾವತಿ ಹೆಗಡೆ, ಲಯನ್ ಶ್ಯಾಮಸುಂದರ ಭಟ್, ಲಿಯೋ ಮಾರ್ಗದರ್ಶಕರಾದ ಲಯನ್ ಅಶ್ವತ್ಥ ಹೆಗಡೆ ಮುಳಖಂಡ, ಲಯನ್ ಸಂತೋಷ ಹೆಗಡೆ ಸೇರಿದಂತೆ ಶಿರಸಿ ಲಯನ್ಸ ಕ್ಲಬ್, ಶಿರಸಿ ಲಯನ್ಸ ಎಜುಕೇಷನ್ ಸೊಸೈಟಿ ಸದಸ್ಯರು, ಶಿರಸಿ ಲಯನ್ಸ ಶಾಲಾ ಶಿಕ್ಷಕ ವೃಂದ, ಲಿಯೋ ಕ್ಲಬ್ ಶಿರಸಿ ಹಾಗೂ ಶ್ರೀನಿಕೇತನ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶ್ರೀಯುತರಿಗೆ ಶೃದ್ಧಾಂಜಲಿ ಸಲ್ಲಿಸಿದರು.

Share This
300x250 AD
300x250 AD
300x250 AD
Back to top